ಸೋಮವಾರಪೇಟೆ, ಸೆ. ೫: ಅಬ್ಬೂರುಕಟ್ಟೆ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಆಲೂರು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು.
ಕೋವಿಡ್ ಸಂದರ್ಭ ಸೇವೆಗೈದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸುಪರ್ಣ ಕೃಷ್ಣಾನಂದ, ಹಿರಿಯ ಆರೋಗ್ಯ ನಿರೀಕ್ಷಕ ಹೆಚ್.ಡಿ. ಪ್ರವೀಣ್, ಪ್ರಯೋಗ ಶಾಲಾ ತಜ್ಞರಾದ ಪ್ರಜ್ವಲ್, ಆಂಬ್ಯುಲೆನ್ಸ್ ಚಾಲಕ ಹರೀಶ್ ಅವರುಗಳನ್ನು ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷ ರವಿಕುಮಾರ್, ಸಾಮಾಜಿಕ ಕಾರ್ಯಕರ್ತೆ ರುಬೀನಾ ಅವರುಗಳು ಸನ್ಮಾನಿಸಿದರು.
ಈ ಸಂದರ್ಭ ಪಿಹೆಚ್ಸಿಓ ದಿವ್ಯಾರಾಣಿ, ನಮಿತ, ಶೋಭ, ಸ್ವಾತಿ, ದಿವ್ಯ, ಸಿ.ಹೆಚ್.ಓ ಗಣೇಶ್, ಜೀವನ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.