ಮಡಿಕೇರಿ, ಸೆ. ೫ : ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಲು ನಿಗಧಿಪಡಿಸಿರುವ ಹೊರಗಿಡುವ ಮಾನದಂಡಗಳ ಆಧಾರದಲ್ಲಿ ವಾರ್ಷಿಕ ವರಮಾನ ರೂ ೧.೨೦ ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳ ಮಾಹಿತಿ ಪರಿಶೀಲಿಸಿ ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತನೆ ಮಾಡಲಾಗಿದೆ.

ಆದರೆ ಜಿಲ್ಲೆಯಲ್ಲಿ ಒಟ್ಟು ೮೫೦ ಪಡಿತರ ಚೀಟಿಗಳಿಗೆ ಸಂಬAಧಿಸಿ ದಂತೆ ಆದಾಯವು ತಪ್ಪಾಗಿ ನಮೂದಾಗಿದ್ದು, ಈ ಪಡಿತರ ಚೀಟಿಗಳನ್ನು ಕಂದಾಯಾಧಿಕಾರಿಗಳ ಮುಖಾಂತರ ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಿ ಈ ಪಡಿತರ ಚೀಟಿಗಳನ್ನು ಬಿಪಿಎಲ್ (ಆದ್ಯತಾ ಪಡಿತರ ಚೀಟಿ)ಗಳನ್ನಾಗಿಯೇ ಮುಂದು ವರೆಸಲು ಸರ್ಕಾರವನ್ನು ಕೋರಲಾಗಿತ್ತು.

ಅದರಂತೆ ಸರ್ಕಾರವು ೮೫೦ ಪಡಿತರ ಚೀಟಿಗಳನ್ನು ಆದ್ಯತಾ ಪಡಿತರ ಚೀಟಿಯನ್ನಾಗಿ ಮುಂದುವರೆಸಲು ಅನುಮತಿ ನೀಡಿ, ಪರಿವರ್ತನೆ ಕೂಡ ಮಾಡಿದೆ. ಈ ೮೫೦ ಪಡಿತರ ಚೀಟಿದಾರರಿಗೆ ಮುಂದಿನ ಅಕ್ಟೋಬರ್ ೨೦೨೨ ರ ಮಾಹೆಯಿಂದ ಪಡಿತರ ಹಂಚಿಕೆ ಪ್ರಾರಂಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.