ಮಡಿಕೇರಿ, ಸೆ. ೫: ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದ ಕೊಡಗು ಜಿಲ್ಲೆ ಮೂಲದ ಪಾಲಚಂಡ ಬ್ರಿಜೇಷ್ ಕಾಳಪ್ಪ ಇದೀಗ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಇಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಎಎಪಿ ಕರ್ನಾಟಕ ಉಸ್ತುವಾರಿ ದಿಲೀಪ್ ಪಾಂಡೆ ಅವರು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂಬAಧ ‘ಶಕ್ತಿ’ ಜೊತೆಗೆ ಮಾತನಾಡಿದ ಬ್ರಿಜೇಷ್, ತನ್ನ ವೈಯಕ್ತಿಕ ನಿಲುವಿಗೂ, ಎಎಪಿಯ ಸಿದ್ಧಾಂತಕ್ಕೆ ಸಾಮ್ಯತೆ ಇದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಕ್ಷ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದೆ. ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿದ್ದೆ. ಆದರೆ, ತನಗೆ ದೊರಕಬೇಕಾದ ಸ್ಥಾನವನ್ನು ನೀಡಿಲ್ಲ. ರಾಜಕಾರಣಿಗಳ ಮಕ್ಕಳು, ಆಗರ್ಭ ಶ್ರೀಮಂತರಿಗೆ ಕಾಂಗ್ರೆಸ್ ಮಣೆ ಹಾಕುತ್ತಿರುವುದು ಬೇಸರ ತರಿಸಿದೆ. ಇಷ್ಟು ಕೆಲಸ ಮಾಡಿದರೂ ತನಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಎ.ಎ.ಪಿ. ನೀಡುವ ಜವಾಬ್ದಾರಿಯನ್ನು ತಾನು ಸಮರ್ಥವಾಗಿ ನಿರ್ವಹಿಸುವೆ. ಕೊಡಗಿನಲ್ಲಿ ವಿಶೇಷವಾಗಿ ಪಕ್ಷ ಸಂಘಟನೆಗೆ ಮುಂದಾಗುವೆ. ಜಿಲ್ಲೆಯ ಜ್ವಲಂತ ಸಮಸ್ಯೆಗೆ ಹೋರಾಟ ಆರಂಭಿಸುವೆ ಎಂದು ಬ್ರಿಜೇಷ್ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು.