ಮಡಿಕೇರಿ, ಸೆ. ೬: ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಕೊಡವ ಮಕ್ಕಡ ಕೂಟ ಅಳವಡಿಸಿದ ಸ್ವಾತಂತ್ರ್ಯ ಹೋರಾಟಗಾರರ ನಾಮಫಲಕಗಳನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು.
ಸ್ವಾತಂತ್ರö್ಯ ಹೋರಾಟಗಾರರಾದ ಕೊಡಗಿನ ಗಾಂಧಿ ಪಂದ್ಯAಡ ಬೆಳ್ಯಪ್ಪ ರಸ್ತೆ, ಕೊಂಗAಡ ಗಣಪತಿ ಬೀದಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ ರಸ್ತೆ ನಾಮಫಲಕ ಹಾಗೂ ೧೯೬೫ರ ಯುದ್ಧದಲ್ಲಿ ವೀರಮರಣ ಹೊಂದಿ ಮರಣೋತ್ತರ ಮಹಾವೀರ ಚಕ್ರ ಪುರಸ್ಕೃತ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಶುಚಿಗೊಳಿಸಲಾಯಿತು. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಕರುಣ್ ಕಾಳಯ್ಯ ಮತ್ತಿತರರು ಇದ್ದರು.