ಚಂದ್ರಮೋಹನ್
ಕುಶಾಲನಗರ, ಸೆ. ೬ : ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ೨೦೧೩-೧೪ ರ ಅವಧಿಯಲ್ಲಿ ನಡೆದ ಕಾಮಗಾರಿಯಲ್ಲಿ ಹಣದ ಅವ್ಯವಹಾರ ನಡೆದಿರುವ ಪ್ರಕರಣವೊಂದು ತನಿಖೆಯಿಂದ ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತನಿಖಾ ಅಧಿಕಾರಿಗಳಿಂದ ಆದೇಶ ಹೊರಬೀಳುವ ಮುನ್ನವೇ ಹಣ ದುರುಪಯೋಗಪಡಿಸಿಕೊಂಡ ಆರೋಪಿಗಳು ಹಣವನ್ನು ಸರ್ಕಾರಕ್ಕೆ ಮರು ಪಾವತಿಸುತ್ತಿರುವ ದಾಖಲೆಗಳು ‘ಶಕ್ತಿ’ಗೆ ಲಭಿಸಿದೆ.
೨೦೧೩-೧೪ ರ ಅವಧಿಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಂದಿನ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಇಂಜಿನಿಯರ್ ಸೇರಿ ೩೦ ಲಕ್ಷಕ್ಕೂ ಅಧಿಕ ಹಣದ ದುರುಪಯೋಗ ಆರೋಪದ ಬಗ್ಗೆ ‘ಶಕಿ’್ತಯಲ್ಲಿ ಸಮಗ್ರ ವರದಿ ಪ್ರಕಟಗೊಂಡಿತ್ತು. ನಂತರ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಯುವು ದರೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿತ್ತು. (ಮೊದಲ ಪುಟದಿಂದ) ಉಳಿದಂತೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಇಲಾಖಾ ತನಿಖೆ ಮುಂದುವರೆದಿತ್ತು.
ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಎಂ.ಎA. ಪ್ರಕಾಶ್ ಮತ್ತು ಸದಸ್ಯರಾಗಿದ್ದ ಎಂ.ಆರ್. ಗೋವಿಂದರಾಜು ಅವರುಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ನರೇಗಾ ಅಧಿಕಾರಿಗಳು ಕ್ರಮ ಕೈಗೊಂಡು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯದೆ ಲಕ್ಷಾಂತರ ಹಣ ವ್ಯಯವಾಗಿರುವ ಬಗ್ಗೆ ಮಾಹಿತಿ ಈಗ ಹೊರಬಿದ್ದಿದ್ದು, ದುರುಪಯೋಗ ಪ್ರಕರಣಕ್ಕೆ ಮರುಜೀವ ಬಂದಿದೆ.
ಪ್ರಕರಣದ ಹಿನ್ನೆಲೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಅಂದಿನ ಅಧ್ಯಕ್ಷ ಎಂ.ಎಸ್. ಶಿವಾನಂದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜೂರ್ ಖಾನ್ ಮತ್ತು ಸೋಮವಾರಪೇಟೆ ತಾಲೂಕು ಪಂಚಾಯತ್ ರಾಜ್ ತಾಂತ್ರಿಕ ಉಪವಿಭಾಗದ ಕಿರಿಯ ಇಂಜಿನಿಯರ್ ಅಶೋಕ್ ಕುಮಾರ್ ಅವರುಗಳು ಭಾಗಿಯಾಗಿದ್ದಾರೆ ಎಂದು ಕಂಡುಬAದಿರುವುದರಿAದ ಪ್ರಕರಣವನ್ನು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯಕ್ಕೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕಾನೂನಿನ ಕ್ರಮಕ್ಕೆ ಅನುಮತಿ ನೀಡಲಾಗಿತ್ತು.
ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ೧ನೇ ವಿಭಾಗದಲ್ಲಿ ಕಾವೇರಿ ನದಿಯ ದಡದಲ್ಲಿ ಇಂಗು ಗುಂಡಿಯ ನಿರ್ಮಾಣದ ಕಾಮಗಾರಿಯನ್ನು ಹೊರಗುತ್ತಿಗೆಯಲ್ಲಿ ನೀಡಲಾಗಿತ್ತು. ಆದರೆ, ಈ ಕಾಮಗಾರಿ
ನಡೆಯದೆ ಸರ್ಕಾರದ ಹಣವನ್ನು ದುರುಪಯೋಗಗೊಳಿಸಿರುವುದು ಬೆಳಕಿಗೆ ಬಂದಿತ್ತು.
ನದಿ ಬದಿಯಲ್ಲಿ ಜೆಸಿಬಿಯಲ್ಲಿ ಗುಂಡಿ ತೆಗೆದು ಒಂದು ಲಕ್ಷದ ಹತ್ತು ಸಾವಿರ ಹಣವನ್ನು ಗುತ್ತಿಗೆದಾರನ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆದು ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸರ್ಕಾರ ಹಣ ಅಪವ್ಯಯಗೊಳಿಸಿರುವುದು ಉನ್ನತ ಅಧಿಕಾರಿಗಳ ತನಿಖಾ ಸಂದರ್ಭ ಬೆಳಕಿಗೆ ಬಂದಿದೆ. ಇದರೊಂದಿಗೆ ಈ ಅಕ್ರಮದಲ್ಲಿ ಭಾಗಿಯಾಗಿರುವರೆಂದು ಸಂದೇಹ ವ್ಯಕ್ತವಾಗಿರುವ ಕಾಮಗಾರಿಯ ಸಾಮಾಗ್ರಿ ಸರಬರಾಜು ಮಾಡಿರುವ ವ್ಯಕ್ತಿ ಎಂದು ಹೇಳಲಾಗಿರುವ ಎನ್. ಮಹೇಶ್ ಅವರನ್ನು ಈ ಪ್ರಕರಣದಲ್ಲಿ ಆರೋಪಿಯಾಗಿ ಸೇರಿಸಲಾಗಿದೆ. ಆತನ ಹೆಸರಿನಲ್ಲಿ ಕೂಡಿಗೆ ಬ್ಯಾಂಕ್ ಒಂದರಲ್ಲಿ ಅಪವ್ಯಯಗೊಂಡ ಹಣ ರೂ.೧ ಲP್ಷÀದ ೧೦ ಸಾವಿರ ಜಮಾ ಆಗಿರುವುದು ತನಿಖೆ ಸಂದರ್ಭ ಗೋಚರಿಸಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಮುಳ್ಳುಸೋಗೆ ಪಂಚಾಯಿತಿಯ ಕೆಲವು ಅಧಿಕಾರಿಗಳು ಮತ್ತು ಇತರರ ಸಮಜಾಯಿಶಿಕೆಯನ್ನು ಪಡೆಯುವ ಮೂಲಕ ಅನುಷ್ಟಾನಗೊಳ್ಳದಿರುವ ಕಾಮಗಾರಿಯ ಹಣವನ್ನು ದುರುಪಯೋಗಗೊಳಿಸಿರುವುದು ವಿಚಾರಣಾ ಸಂದರ್ಭ ಖಚಿತಗೊಂಡಿದೆ.
ಕಾವೇರಿ ನದಿ ಪಾತ್ರದಲ್ಲಿ ಕಲುಷಿತ ನೀರು ನದಿಗೆ ಹೋಗದಂತೆ ತಡೆಯಲು ಸರ್ಕಾರದಿಂದ ಕೈಗೊಂಡ ಕಾಮಗಾರಿ ಹುಡುಕಿದರೂ, ಕಾಣದೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದ ಬೆನ್ನೆಲ್ಲೇ ಅಧಿಕಾರಿಗಳು ಸಂಬAಧಿಸಿದ ದುರುಪಯೋಗ ಮಾಡಿದ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು. ಈ ನಡುವೆ ಕಳೆದ ಆಗಸ್ಟ್ ತಿಂಗಳಲ್ಲಿ ಮಂಜೂರ್ ಖಾನ್, ಶಿವಾನಂದ್ ಅವರುಗಳು ಯೋಜನೆಯಡಿಯಲ್ಲಿ ಅನುಷ್ಟಾನಗೊಂಡ ಕಾಮಗಾರಿಗಳಿಗೆ ಸಂಬAಧಿಸಿದAತೆ ಸಾಮಾಜಿಕ ಲೆಕ್ಕ ಪರಿಶೋಧನೆ ಖಾತೆಗೆ ಅಪವ್ಯಯ ಮಾಡಿದ ಹಣದ ಮೊತ್ತವನ್ನು ಜಮೆ ಮಾಡಿರುವುದು ಬೆಳಕಿಗೆ ಬಂದಿದೆ.
ವರದಿ ನಂತರದ ಆದೇಶ ಹೊರ ಬೀಳುವ ಮುನ್ನವೇ ಎಚ್ಚೆತ್ತುಕೊಂಡ ಮುಳ್ಳುಸೋಗೆಯ ಶಿವಾನಂದ್, ೨೩/೦೮/೨೦೨೨ ರಂದು ೩೬,೯೭೫ ರೂ. ಮತ್ತು ಅಭಿವೃದ್ಧಿ ಅಧಿಕಾರಿ ಮಂಜೂರ್ ಖಾನ್, ೧೭/೨/೨೦೨೨ ರಲ್ಲಿ ರೂ.೨೦,೦೦೦ ಮತ್ತು ೨೩/೦೮/೨೦೨೨ ರಂದು ೧೦,೦೦೦ ಸೇರಿದಂತೆ ಒಟ್ಟು ೩೦,೦೦೦ ವಸೂಲಾತಿ ಮೊತ್ತವನ್ನು ಇಲಾಖೆಗೆ ಸಂಬAಧಿಸಿದ ಕೆಎಸ್ಇಜಿಎಫ್ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನ ಬ್ಯಾಂಕ್ ಖಾತೆ ಸಂಖ್ಯೆ ೬೪೦೦೨೨೯೮೨೭೦ಗೆ ಜಮಾ ಮಾಡಿರುವುದು ದಾಖಲೆ ಮೂಲಕ ತಿಳಿದು ಬಂದಿದೆ. ಆಗಿನ ಇಂಜಿನಿಯರ್ ಅಶೋಕ್ ಮಾತ್ರ ಇನ್ನು ಯಾವುದೇ ಹಣವನ್ನು ಬ್ಯಾಂಕ್ಗೆ ಜಮಾ ಮಾಡಿದ ದಾಖಲೆ ಕಂಡುಬAದಿಲ್ಲ.
ರಾಜ್ಯದಲ್ಲಿ ಕಾಮಗಾರಿಯಲ್ಲಿ ಶೇ. ೪೦ ರಷ್ಟು ಕಮಿಷನ್ ದಂಧೆ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದ್ದರೆ, ಇತ್ತ ಕೊಡಗು ಜಿಲ್ಲೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳ ಹಿಂದೆ ಕಾಮಗಾರಿ ಕೈಗೊಳ್ಳದೆ ಶೇ.೧೦೦ ರಷ್ಟು ಅನುದಾನವನ್ನು ನುಂಗಿರುವ ಪ್ರಕರಣಗಳು ತನಿಖೆಯಿಂದ ಬೆಳಕಿಗೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.