ಮಡಿಕೇರಿ, ಸೆ. ೫: ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಇಲಾಖೆ ಈIಇಔ ಹಾಗೂ ಏಂPPಇಅ ವತಿಯಿಂದ ಕೊಡಗು ಜಿಲ್ಲಾ ಕೃಷಿ ಇಲಾಖೆ, ಜಿಲ್ಲಾ ಕೈಗಾರಿಕೋದ್ಯಮ ವಿಭಾಗ ಹಾಗೂ ಕಾಫಿ, ಸಂಬಾರ ಮಂಡಳಿ ಸಹಯೋಗದಲ್ಲಿ ತಾ. ೭ರಂದು ಮಡಿಕೇರಿಯ ಹೊಟೇಲ್ ಮಯೂರ ವ್ಯಾಲಿ ವ್ಯೂನಲ್ಲಿ ‘ಕೆಪಾಸಿಟಿ ಬಿಲ್ಡಿಂಗ್ ಪ್ರೋಗ್ರಾಮ್’ ಏರ್ಪಡಿಸಲಾಗಿದೆ. ಕಾಫಿ ಹಾಗೂ ಸಂಬಾರ ಬೆಳೆಗಳ ಸಂಬAಧ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೧೧ ರಿಂದ ಸಂಜೆ ೫ ಗಂಟೆಯವರೆಗೆ ಕಾಫಿ, ಸಂಬಾರ, ಕೈಗಾರಿಕೋದ್ಯಮ ಕ್ಷೇತ್ರದಲ್ಲಿನ ತಜ್ಞರು ವಿಚಾರ ಮಂಡನೆ ಮಾಡಲಿದ್ದಾರೆ.