ಕುಶಾಲನಗರ, ಸೆ. ೬: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಕಾವೇರಿ ನದಿ ದಂಡೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಎಸ್. ಚಿಣ್ಣಪ್ಪ ನೇತೃತ್ವದಲ್ಲಿ ಕ್ಲಬ್ ಪದಾಧಿಕಾರಿಗಳು ಸದಸ್ಯರು ನದಿ ದಂಡೆಯಲ್ಲಿ ಬಿದಿರು ಗಿಡಗಳನ್ನು ನೆಟ್ಟರು.

ಈ ಸಂದರ್ಭ ಮಾತನಾಡಿದ ಚಿಣ್ಣಪ್ಪ, ಕ್ಲಬ್ ವತಿಯಿಂದ ನದಿ ತಟಗಳಲ್ಲಿ ಬಿದಿರು ಮತ್ತಿತರ ಹೂ, ಹಣ್ಣು ಬರುವ ಪರಿಸರ ಪೂರಕ ಮರಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಖಜಾಂಚಿ ಹೇಮಂತ್ ಕುಮಾರ್, ಪ್ರಮುಖರಾದ ಕೊಡಗನ ಹರ್ಷ, ಪೊನ್ನಚ್ಚನ ಮೋಹನ್, ಕವಿತಾ ಮೋಹನ್, ನಾರಾಯಣ್ ಇದ್ದರು.