ಗೋಣಿಕೊಪ್ಪ ವರದಿ, ಸೆ. ೬: ನ್ಯಾಷನಲ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಮೈಸೂರು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಆಹ್ವಾನಿತ ಕರಾಟೆ ಕ್ರೀಡೆಯಲ್ಲಿ ಕರಾಟೆಪಟು ಚೆಪ್ಪುಡೀರ ಅರುಣ್ ಮಾಚಯ್ಯ ನೇತೃತ್ವದ ಜೆನ್ ಶಿಟಾರಿಯೋ ಹುದಿಕೇರಿ ಶಾಖೆಯ ತಂಡಕ್ಕೆ ೪ ಕಂಚಿನ ಪದಕಗಳು ದೊರೆತಿದೆ.

ಕಟಾ ವಿಭಾಗದ ೭೪ ಕೆ.ಜಿ. ವಿಭಾಗದಲ್ಲಿ ಉಳುವಂಗಡ ಅಮಿತ್ ಬೋಪಣ್ಣಗೆ ಕಂಚು, ೨೫ ಕೆ.ಜಿ. ವಿಭಾಗದಲ್ಲಿ ಶಾನ್ ನಂಜಪ್ಪ, ನಕ್ಷಾ ಬೋಜಮ್ಮ, ೪೯ ಕೆ.ಜಿ. ವಿಭಾಗದಲ್ಲಿ ನಿಖಿತ್ ನಾಚಪ್ಪ ಕಂಚು ಗೆದ್ದುಕೊಂಡರು. ಕಳ್ಳಿಕಂಡ ಕಿಶೋರ್ ಅಯ್ಯಣ್ಣ ತರಬೇತಿ ನೀಡಿದ್ದರು.