ಮಡಿಕೇರಿ, ಸೆ. ೪: ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಕೈಲ್ ಪೊಳ್ದ್ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಯಿತು. ಕೊಡಗಿನ ಆಯುಧ ಪೂಜೆ ಎಂದು ಪರಿಗಣಿಸಲಾಗಿರುವ ಕೃಷಿ ಸಂಬAಧಿತ ಹಬ್ಬವಾದ ಕೈಲ್ ಮುಹೂರ್ತದಲ್ಲಿ ಕೃಷಿಗೆ ಬಳಸಲಾಗುವ ನೇಗಿಲು, ನೊಗ, ಎತ್ತು, ಕತ್ತಿ, ಗುದ್ದಲಿ ಸೇರಿದಂತೆ ಸಾಂಪ್ರದಾಯಬದ್ಧ ಆಯುಧವಾದ ಕೋವಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ಆಹಾರದೊಂದಿಗೆ ಹಬ್ಬಾಚರಣೆ ಮಾಡಲಾಯಿತು. ಕೈಲು ಮುಹೂರ್ತ ಪ್ರಯುಕ್ತ ಜಿಲ್ಲೆಯ ಹಲವು ಕಡೆಗಳಲ್ಲಿ ಕ್ರೀಡಾಕೂಟಗಳು ಕೂಡ ಸಂಭ್ರಮದಿAದ ಜರುಗಿದವು.
ಗೋಣಿಕೊಪ್ಪಲು ಸಮೀಪದ ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾಯಾಮುಡಿಯ ಐರನ್ ಸೈಟ್ ಶೂಟರ್ಸ್ ಸಂಸ್ಥೆ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ತೋಕ್ ನಮ್ಮೆ ಮತ್ತು ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ನಡೆಯಿತು.
ಏಕಕಾಲಕ್ಕೆ ನಡೆದ ೦.೨೨ ರೈಫಲ್ಸ್ ಮತ್ತು ೧೨ನೇ ಬೋರಿನ ಕೋವಿ ವಿಭಾಗದಲ್ಲಿ ನಿರೀಕ್ಷೆಗೂ ಮೀರಿ ಸ್ಪರ್ಧಿಗಳು ಭಾಗವಹಿಸಿದ್ದರು. ೦.೨೨ ರೈಫಲ್ಸ್ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸ್ಪರ್ಧಿಗಳಿಗೆ ಒಮ್ಮೆ ಗುರಿ ತಪ್ಪಿದರೆ ಮತ್ತೊಮ್ಮೆ ಗುರಿ ಪ್ರಯೋಗಿಸುವ ಅವಕಾಶ ಕಲ್ಪಿಸಲಾಗಿತ್ತು.
೦.೨೨ ರೈಫಲ್ಸ್ ವಿಭಾಗದಲ್ಲಿ ಸ್ಪರ್ಧಿಗಳಿಗೆ ೫೦ ಮೀಟರ್ ದೂರದ ಅಂತರ ನಿಗದಿಪಡಿಸಲಾಗಿತ್ತು. ಈ ವಿಭಾಗದಲ್ಲಿ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದು ಕಂಡುಬAತು. ಮೊದಲ ಸುತ್ತಿನಲ್ಲಿ ತೆಂಗಿನಕಾಯಿಯನ್ನು ಹೊಡೆದುರುಳಿಸಿದವರು ೨ನೇ ಹಂತಕ್ಕೆ ಅರ್ಹತೆ ಪಡೆದುಕೊಂಡು ಅಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ತಾಳ್ಮೆಯಿಂದಲೇ ಕಾಯುತ್ತಿದ್ದರು.
೧೨ನೇ ಬೋರಿನ ಕೋವಿ ವಿಭಾಗದಲ್ಲಿ ನಿಗದಿಯಾಗಿದ್ದ ೩೦ ಮೀಟರ್ ದೂರದ ಅಂತರದಲ್ಲಿ ಸ್ಪರ್ಧಿಗಳು ತಮ್ಮ ಬಂದೂಕಿನಿAದ ಗುರಿ ಪ್ರಯೋಗಿಸುತ್ತಿದ್ದರು. ಅಲ್ಲದೆ, ಇದರೊಂದಿಗೆ ತಮ್ಮ ಗುರಿಯ ಅದೃಷ್ಟ ಪರೀಕ್ಷೆಯೂ ಮಾಡಿಕೊಂಡರು. ಈ ವಿಭಾಗದಲ್ಲಿ ವಯಸ್ಸಿನ ಮಿತಿ ಇಲ್ಲದೆ ಸ್ಪರ್ಧಿಗಳು ಪಾಲ್ಗೊಂಡರು.
ತೋಕ್ ನಮ್ಮೆಯ ಅಂಗವಾಗಿ ಕೊಡಗು ಜಾವ ಯೆಝ್ಡಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಮೈದಾನದ ಆವರಣದಲ್ಲಿ ಯೆಝ್ಡಿ ಮತ್ತು ಜಾವಾ ಬೈಕುಗಳ ಪ್ರದರ್ಶನ ನೆರೆದಿದ್ದವರನ್ನು ಆಕರ್ಷಿಸಿತು.
ತಾವಳಗೇರಿ ಕೊಡವ ಸಮಾಜ
ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ‘ಕೈಲ್ ಪೊಳ್ದ್’ ಆಚರಣೆಯನ್ನು ಸಂಪ್ರದಾಯಿಕವಾಗಿ ನಡೆಸಲಾಯಿತು.
ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಮುಂದಾಳತ್ವದಲ್ಲಿ ಸದಸ್ಯರು ತಮ್ಮ ತಮ್ಮ ಸಾಂಪ್ರದಾಯಿಕ ಹಾಗೂ ಪೂಜನೀಯ ಆಯುಧಗಳಾದ ಕೋವಿ, ಒಡಿಕತ್ತಿ, ಪೀಚೆಕತ್ತಿ ಸೇರಿದಂತೆ ವಿವಿಧ ಆಯುಧ ಹಾಗೂ ಕೃಷಿಪರಿಕರಗಳನ್ನು ಕೊಡವ ಸಮಾಜ ವೇದಿಕೆಯ ನೆಲ್ಲಕ್ಕಿಯಲ್ಲಿ ತೂಕ್ ‘ಬೊಳ್’ಚ, ಕುತ್ತುಂಬೊಳ್ಚ, ತಳಿಯತ್ ಅಕ್ಕಿ ಬೊಳ್ಚದ ಮುಂಭಾಗದಲ್ಲಿ ಇರಿಸಿ ಕೋವಿಗೆ ‘ತೋಕ್ ಪೂ’ ಹಾಗೂ ಇತರ ಎಲ್ಲಾ ಆಯುಧ ಪರಿಕರಗಳಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ಗಂಧ ಲೇಪಿಸಿ ಗುರು ಕಾರೋಣರು, ಕಾವೇರಮ್ಮೆ, ಇಗ್ಗುತಪ್ಪ ದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ತಾವಳಗೇರಿ ಮೂಂದ್ ನಾಡ್ನ ನಾಡ್ ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ, ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಮಾತನಾಡಿದರು. ಕೊಡವ ಸಮಾಜದ ಆವರಣದಲ್ಲಿ ಎಲ್ಲಾ ವಾಹನಗಳಿಗೆ ಪೂಜೆ ಮಾಡಲಾಯಿತು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್ ಆಯುಧ ಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಮಾಣೀರ ವಿಜಯ ನಂಜಪ್ಪ, ಕ್ರೀಡೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ನಿರ್ದೇಶಕ ಕೋಟ್ರಮಡ ಸುಮಂತ್ ಮಾದಪ್ಪ, ಸದಸ್ಯ ಚೊಟ್ಟೆಯಂಡಮಾಡ ಚಿರಾಗ್ ಮತ್ತಿತರರು ಭಾಗವಹಿಸಿದ್ದರು.
ಮರಗೋಡಿನಲ್ಲಿ
ಮರಗೋಡು ವಿವೇಕಾನಂದ ಯುವಕ ಸಂಘ ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೫೧ನೇ ವರ್ಷದ ಕೈಲ್ ಮುಹೂರ್ತ ಗ್ರಾಮೀಣ ಕ್ರೀಡಾಕೂಟ ಸಡಗರ ಸಂಭ್ರಮದಿAದ ನೆರವೇರಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮಿಪತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತಿ ಹೈಸ್ಕೂಲ್ ಸೊಸೈಟಿ ಉಪಾಧ್ಯಕ್ಷ ಕೋಚನ ಲವಿನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಚ್ಚಕಾಳೇರ ಕಾವೇರಪ್ಪ, ಮರಗೋಡು ಎಸ್ಡಿಎಂಸಿ ಅಧ್ಯಕ್ಷ ವಿಜಯ್, ಕಾಫಿ ಬೆಳೆಗಾರ ಕೋಚನ ಅನೂಪ್ ಪಾಲ್ಗೊಂಡಿದ್ದರು.
ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಸುಮಾರು ೨೮ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಗ್ಗ ಜಗ್ಗಾಟ, ಮೂರು ಕಾಲಿನ ಓಟ, ಗೋಣಿ ಚೀಲದ ಓಟ, ಕಪ್ಪೆ ಹಾರುವುದು, ಕಾಳು ಹೆಕ್ಕುವುದು, ನೀರು ತುಂಬಿದ ಚೆಂಬಿನ ಓಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಹೀಗೆ ಹಲವು ಬಗೆಯ ಗ್ರಾಮೀಣ ಕ್ರೀಡೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಅಶ್ವಿನ್, ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭುಶೇಖರ್, ಸದಸ್ಯೆ ಬೊಳಿಯಾಡೀರ ಉಷಾ ತಂಗಮ್ಮ, ಮರಗೋಡು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಕೆ. ಚಂದ್ರಕಲಾ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಐಪಿ ನಾಗೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.
ನಡಿಕೇರಿಯಲ್ಲಿ
ಪೊನ್ನಂಪೇಟೆ ಸಮೀಪದ ನಡಿಕೇರಿ ಗ್ರಾಮದ ತಲೆಬಲೀಶ್ವರ ಅಂಬಲದಲ್ಲಿ ಕೃಷಿ ಉಪಕರಣಗಳಿಗೆ ಮತ್ತು ಆಯುಧಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ಗ್ರಾಮದ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ವಾಲಗಕ್ಕೆ ಹೆಜ್ಜೆ ಹಾಕಿದರು.
ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ನಡಿಕೇರಿ ಗ್ರಾಮದ ತಲೆಬಲೀಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮನರಂಜನಾ ಕ್ರೀಡೆಯನ್ನು ಏರ್ಪಡಿಸಲಾಗಿತ್ತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಳ್ಳಿಚಂಡ ಮಂಜು ಪ್ರಥಮ ಸ್ಥಾನ, ಕಳ್ಳಿಚಂಡ ಕವನ್ ದ್ವಿತೀಯ ಸ್ಥಾನ, ಕಿರಂದAಡ ಉದಯಕುಮಾರ್ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದ ಮನರಂಜನಾ ಸ್ಪರ್ಧೆಯಲ್ಲಿ ಕೋಳೇರ ಶಾರದ ಪ್ರಥಮ ಸ್ಥಾನ, ಕೋಳೇರ ಪ್ರತಿಮ ದ್ವಿತೀಯ ಸ್ಥಾನ, ಮಕ್ಕಳ ವಿಭಾಗದಲ್ಲಿ ಮಾಣಿಯಪಂಡ ರಿಯಾನ್ ಪ್ರಥಮ ಸ್ಥಾನ, ಅಂಕಿತ ದ್ವಿತೀಯ ಸ್ಥಾನ ಪಡೆದುಕೊಂಡರು. ಈ ಸಂದÀರ್ಭ ನಡಿಕೇರಿ ಗ್ರಾಮದ ಅಧ್ಯಕ್ಷ ಕೋಳೇರ ನರೇಂದ್ರ, ಕಾರ್ಯದರ್ಶಿ ಬೂವಕಂಡ ಮೊಣ್ಣಪ್ಪ, ತಬಲೀಶ್ವರ ಯುವಕ ಸಂಘದ ಅಧ್ಯಕ್ಷ ಮುದ್ದಿಯಡ ಜೀವನ್, ಕಾರ್ಯದರ್ಶಿ ಕಿರಂದAಡ ಉಮೇಶ್, ಖಜಾಂಚಿ ಮಾಣಿಪಂಡ ಮಂದಣ್ಣ, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪೊನ್ನAಪೇಟೆ ಕೊಡವ ಸಮಾಜ
ಪೊನ್ನಂಪೇಟೆ ಕೊಡವ ಸಮಾಜದಲ್ಲಿ
(ಮೊದಲ ಪುಟದಿಂದ) ಪೊನ್ನಂಪೇಟೆ ಕೊಡವ ಸಮಾಜ ಮತ್ತು ಪೊನ್ನಂಪೇಟೆ ಕ್ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಆಶ್ರಯದಲ್ಲಿ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಕೃಷಿ ಪರಿಕರಗಳಾದ ನೇಗಿಲು, ನೊಗ ಸೇರಿದಂತೆ ಕೋವಿ, ಕತ್ತಿ ಮತ್ತು ವಾಹನಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಮಾಡಲಾಯಿತು. ಇದೇ ಸಂದರ್ಭ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸಲಾಯಿತು.
ಪೊನ್ನAಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಸಹಕಾರ್ಯದರ್ಶಿ ಆಲೇಮಾಡ ಸುಧೀರ್ ಆಡಳಿತ ಮಂಡಳಿ ನಿರ್ದೇಶಕರಾದ ಮೂಕಳೇರ ಕಾವ್ಯ ಕಾವೇರಮ್ಮ, ಕೊಣಿಯಂಡ ಸಂಜು ಸೋಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಚೆಪ್ಪುಡೀರ ರಾಕೇಶ್ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ ಹಾಗೂ ಖಾಯಂ ಆಹ್ವಾನಿತರಾದ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಕ್ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಉಪಾಧ್ಯಕ್ಷ ಚೆಕ್ಕೆರ ರಮೇಶ್, ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ, ಸಮಾಜದ ಮಾಜಿ ಅಧ್ಯಕ್ಷ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ, ಪ್ರಮುಖರಾದ ಮಲ್ಲಮಾಡ ಪ್ರಭು ಪೂಣಚ್ಚ ಮತ್ತಿತರರು ಹಾಜರಿದ್ದರು.
*ಪೊನ್ನಂಪೇಟೆ: ಬೇಗೂರು ಪೂಳೆಮಾಡ್ ಮಂದ್ ಹಾಗೂ ಪೂಳೆಮಾಡ್ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಕೈಲ್ ಪೋಳ್ದ್ ಹಬ್ಬದ ಪ್ರಯುಕ್ತ ಊರಿನ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
೦.೨೨ ಕೋವಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮತ್ರಂಡ ಪೂವಣ್ಣ, ದ್ವಿತೀಯ ಬಹುಮಾನ ಮತ್ರಂಡ ನವೀನ, ತೃತೀಯ ಬಹುಮಾನವನ್ನು ಮತ್ರಂಡ ಸ್ಕಂದ ತಿಮ್ಮಯ್ಯ ಪಡೆದುಕೊಂಡರು.
ಇದಕ್ಕೂ ಮೊದಲು ಕೋವಿಯನ್ನು ತೋಕ್ ಪೂನಿಂದ ಅಲಂಕರಿಸಿ ತಕ್ಕಮುಖ್ಯಸ್ಥರಿಂದ ಪೂಜೆ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಬೊಳಿಯಂಗಡ ದಾದು ಪೂವಯ್ಯ ಮತ್ತಿತರರು ಇದ್ದರು.
ಗೋಣಿಕೊಪ್ಪ: ಮಾಯಮುಡಿ ಗ್ರಾಮದ ಕಂಗಳತ್ನಾಡಿನ ಕೂಟತ್ಮಾವ್ ಮಂದ್ನಲ್ಲಿ ಗ್ರಾಮಸ್ಥರು ಕೈಲ್ಪೊಳ್ದ್ ಆಚರಿಸಿದರು. ತೆಂಗಿನ ಕಾಯಿಗೆ ಗುಂಡು ಹೊಡೆದು ಸಂಭ್ರಮಿಸಿದರು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸಣ್ಣುವಂಡ ವಿನು ವಿಶ್ವನಾಥ್ ಪ್ರಥಮ, ಮಾಣಿಪಂಡ ಎಸ್. ಸುತನ್ ದ್ವಿತೀಯ, ಸಣ್ಣುವಂಡ ದಿಲಿಪ್ ಸೋಮಣ್ಣ ತೃತೀಯ ಸ್ಥಾನ ಪಡೆದುಕೊಂಡರು.
ನಿಟ್ಟೂರು-ಕಾರ್ಮಾಡು
ನಿಟ್ಟೂರು-ಕಾರ್ಮಾಡು ಗ್ರಾಮದ ವಿಜಯ ಗ್ರಾಮೀಣ ಯುವಕ ಸಂಘದ ವತಿಯಿಂದ ಗ್ರಾಮದ ಮೈದಾನದಲ್ಲಿ ಆಯೋಜಿಸಿದ್ದ ಕೈಲ್ಪೊಳ್ದ್ ಗ್ರಾಮೀಣ ಕ್ರೀಡಾಕೂಟದಲ್ಲಿ ಕಾಲ್ಚೆಂಡು, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.
ಕಾಲ್ಚೆಂಡು ಪಂದ್ಯದಲ್ಲಿ ಕಾರ್ಮಾಡು ವಿ.ಜಿ.ವೈ.ಎಸ್. ತಂಡ ಪ್ರಥಮ, ಬೆಂಡೆಕುತ್ತಿ ಹಾಡಿ ದ್ವಿತೀಯ, ಹಗ್ಗ ಜಗ್ಗಾಟದಲ್ಲಿ ಪೊನ್ನಿಮಾನಿ ಇಲಿವೆನ್ ಪ್ರಥಮ, ಕೊಟ್ಟಗೇರಿ ವಾರಿಯರ್ಸ್ ದ್ವಿತೀಯ ಸ್ಥಾನ ಪಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ .೨೨ ವಿಭಾಗದಲ್ಲಿ ಬಿ. ಆರ್. ರಮೇಶ್ ಪ್ರಥಮ, ಎಂ.ಪಿ. ಪ್ರತೀಕ್ ದ್ವಿತೀಯ, ೧೨ ಬೋರ್ ವಿಭಾಗದಲ್ಲಿ ಮೇಚಂಡ ಶಾಂತ ಪೆಮ್ಮಯ್ಯ ಪ್ರಥಮ, ಎಂ.ಪಿ. ಪ್ರತೀಕ್ ದ್ವಿತೀಯ ಸ್ಥಾನ ಪಡೆದರು. ಟ್ರೋಫಿ ದಾನಿ ಮಚ್ಚಮಾಡ ಸೀತಮ್ಮ ಸೋಮಯ್ಯ ಮಾತನಾಡಿದರು.
ದಾನಿ ಮಚ್ಚಮಾಡ ಲೋಕೇಶ್ ಸೋಮಯ್ಯ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಕೊಡಗು ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ವಿಜಯ ಗ್ರಾಮೀಣ ಯುವಕ ಸಂಘದ ಕಾರ್ಯದರ್ಶಿ ಮುಕ್ಕಾಟಿರ ಸೋಮಯ್ಯ, ಪ್ರಮುಖರಾದ ಕಾಟಿಮಾಡ ಕುಟ್ಟಪ್ಪ, ಕಳ್ಳೇಂಗಡ ಉತ್ತಯ್ಯ, ಕಳ್ಳೇಂಗಡ ಧನು ಕಾರ್ಯಪ್ಪ, ಮಾಚಂಗಡ ದರ್ಶನ್ ಸೋಮಣ್ಣ, ಪಟ್ಟಡ ಬೋಪಯ್ಯ, ವಿ.ಎಂ. ಸೂರ, ಬೊಟ್ಟಂಗಡ ಜೀವನ್, ಮುಕ್ಕಾಟಿರ ತೇಜ, ಪೊನ್ನಿಮಾಡ ಸಂತೋಷ್, ಕೊಟ್ಟಂಗಡ ಮಂಜುನಾಥ್, ಪಡಿಞರಂಡ ಪ್ರಭು ಕುಮಾರ್, ಇಗುತ್ತಪ್ಪ ಸಂಘದ ಅಧ್ಯಕ್ಷ ಕಾಟಿಮಾಡ ಶಿವಪ್ಪ ಇದ್ದರು.
ಹೆರವನಾಡು
ಹೆರವನಾಡು ಗ್ರಾಮದ ಉಡೋತ್ಮೊಟ್ಟೆಯಲ್ಲಿ ಶ್ರೀ ಆದಿಶಕ್ತಿ ವಿನಾಯಕ ಸೇವಾ ಸಮಿತಿ ವತಿಯಿಂದ ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಪೂಜಾರಿ, ಗ್ರಾ.ಪಂ. ಸದಸ್ಯರಾದ ಗೋಪಾಲ ಪೂಜಾರಿ ಉಡೋತ್, ಪಪ್ಪಿ ಪ್ಲಾಂಟೇಷನ್ನ ಮಾಲೀಕ ವಸಂತ, ಜೈ ಶ್ರೀರಾಂ ಟ್ರಾವೆಲ್ಸ್ನ ಮಾಲೀಕ ಬಿ.ಎಲ್. ತಿರುಪತಿ ಮತ್ತು ಬಿ.ಎಲ್. ತಿರುಮಲ, ವಿಶ್ವ ಮಾರ್ಕೆಟಿಂಗ್ನ ಮಾಲೀಕ ವಿಶ್ವನಾಥ ಪೂಜಾರಿ, ಕೃಷ್ಣ ಕ್ಯಾಟರಿಂಗ್ನ ಮಾಲೀಕ ಬಿ.ಆರ್. ಬಾಲಕೃಷ್ಣ ಹಾಗೂ ಗ್ರಾಮಸ್ಥರಾದ ಮಂಜುನಾಥ ದಿವ್ಯ, ಕಿಶು ಪೂಜಾರಿ, ವಸಂತ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
ಗುಡ್ಲೂರ್ನಲ್ಲಿ
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಗುಡ್ಲೂರ್ನ ಬಸವೇಶ್ವರ ಸಂಘದ ವತಿಯಿಂದ ಕೈಲ್ ಮುಹೂರ್ತ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಬಸವೇಶ್ವರ ಸಂಘದ ಮುಕಾಟಿ ರಮೇಶ, ಉಮೇಶ, ತಮ್ಮನಿ, ಗಣಪತಿ, ಜಿತು, ಶಾಂತಿ, ಲಲಿತ, ಕಿರಣ್, ಮೋಟಯ್ಯ ಮುಂತಾದವರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಚೆಟ್ಟಳ್ಳಿ
ಚೆಟ್ಟಳ್ಳಿಯ ಪುತ್ತರಿರ ಐನ್ಮನೆಯಲ್ಲಿ ಕೈಲ್ಪೊಳ್ದ್ ಆಚರಣೆ ಮಾಡಲಾಯಿತು. ಕುಟುಂಬದ ಹಿರಿಯರಾದ ಪುತ್ತರಿರ ಸಾಬು ಬೋಪಯ್ಯ ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟಂತಹ ಕೋವಿ, ಆಯುಧಗಳನ್ನು ಪೂಜಿಸಿ ಮೀದಿ ಇಡಲಾಯಿತು. ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಭೋಜನದ ನಂತರ ಹಿರಿಯರು ತೆಂಗಿನಕಾಯಿಗೆ ಗುಂಡು ಹೊಡೆದರು. ಸಂಜೆ ಊರುಮಂದ್ಗೆ ತೆರಳಿ ಊರಿನವರೊಂದಿಗೆ ತೆಂಗಿನಕಾಯಿಗೆ ಗುಂಡು ಹೊಡೆಯಲಾಯಿತು.
ಪೇರಿಯನ ಐನ್ಮನೆ
ಕೈಲು ಮುಹೂರ್ತ ಹಬ್ಬವನ್ನು ಚೆಟ್ಟಳ್ಳಿಯ ಪೇರಿಯನ ಐನ್ ಮನೆಯಲ್ಲಿ ಆಚರಿಸಲಾಯಿತು. ಕೋವಿ ಮತ್ತು ಕೃಷಿ ಪರಿಕರಗಳಿಗೆ ಪಟ್ಟೆದಾರ ಪೇರಿಯನ ಕುಶಾಲಪ್ಪ ಪೂಜೆ ಸಲ್ಲಿಸಿದರು. ಪೇರಿಯನ ಪ್ರಕಾಶ ಹಾಗೂ ಉದಯ ಮತ್ತಿತರರು ಇದ್ದರು. ಮಹಿಳೆಯರಾದಿಯಾಗಿ ಕುಟುಂಬದ ಸದಸ್ಯರು ತೆಂಗಿನ ಕಾಯಿಗೆ ಗುಂಡು ಹೊಡೆದರು.