ಮಡಿಕೇರಿ, ಸೆ. ೨ : ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಂದ ಮಾತ್ರ ಆತ್ಮತೃಪ್ತಿಯನ್ನು ಹೊಂದಲು ಸಾಧ್ಯವೆಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಭಿಪ್ರಾಯಿಸಿದರು.

ಶ್ರೀಸುತ ಬಳಗದ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ, ಚಿ.ನಾ.ಸೋಮೇಶ್ ಅವರಿಂದ ರಚಿಸಲ್ಪಟ್ಟ ‘ಅಗ್ನಿಪಥ’ ಕೃತಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಭಾವನೆಗಳನ್ನು ಬರಹದ ಮೂಲಕ ಹೊರ ತರುವ ಮೂಲಕ ಓದುಗರ ಮನಸ್ಸನ್ನು ಚಿಂತನೆಗೆ ಹಚ್ಚಿ ಆತ್ಮತೃಪ್ತಿಯನ್ನು ಪಡೆದು ಕೊಳ್ಳುತ್ತಾನಾದರೆ, ಸಂಗೀತಗಾರ ತನ್ನ ಸಂಗೀತದ ಮೂಲಕ ಕೇಳುಗರ ಮನಸ್ಸನ್ನು ಸೂರೆಗೊಂಡು ಸಂತೋಷ ಪಡುತ್ತಾನೆಂದು ತಿಳಿಸಿದರು.

ಚಿ.ನಾ. ಸೋಮೇಶ್ ಅವರು ರಾಷ್ಟç ಚಿಂತನೆಯ ವಿಷಯಗಳಿಗೆ ಮುಖವಾಣಿಯಾಗಿ, ರಾಷ್ಟçದೆಡೆಗಿನ ತಮ್ಮ ಕಾಳಜಿಯನ್ನು ಬರಹರೂಪಕ್ಕಿಳಿಸಿದ್ದು, ಅವರ ಕಾಳಜಿಯನ್ನು ಅಗ್ನಿಪಥದಲ್ಲಿ ಕಾಣಬಹುದೆಂದು ತಿಳಿಸಿದ ಅವರು, ಸರ್ವರಲ್ಲಿಯೂ ಸಾಮಾಜಿಕ ಪ್ರಜ್ಞೆ, ರಾಷ್ಟಾçಭಿಮಾನಗಳು ಮೂಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಅಂತಹ ಚಿಂತನೆಗಳು ಬರಹದಲ್ಲಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಎಳೆೆಯ ಮನಸ್ಸುಗಳಲ್ಲಿ ಇಂದು ಮೊಬೈಲ್ ಸೇರಿದಂತೆ ಸಾಮಾಜಿಕ ಜಾಲ ತಾಣದ ಗೀಳು ಹೆಚ್ಚಿದೆ. ಈ ಹಿನ್ನೆಲೆ ಯುವ ಮನಸುಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು, ರಾಷ್ಟಿçÃಯ ಚಿಂತನೆಗಳನ್ನು ಮೂಡಿಸಲು ಇಂತಹ ಕೃತಿಗಳು ಪ್ರಮುಖವೆನಿಸಿಕೊಳ್ಳುತ್ತದೆÉಂದು ಅಭಿಪ್ರಾಯಿಸಿದರು.

ಚಿ.ನಾ. ಸೋಮೇಶ್ ಅವರು ರಚಿಸಿದ ‘ಅಗ್ನಿಪಥ’ ಕೃತಿಯನ್ನು ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಅವರು ಅನಾವರಣಗೊಳಿಸಿ, ಮಾತನಾಡಿ, ಪ್ರಸ್ತುತ ಸಾಮಾಜಿಕ ಜಾಲತಾಣಗಳ ಗಾಢ ಪ್ರಭಾವದಿಂದ ಯುವ ಸಮೂಹ ಸಾಹಿತ್ಯ ಲೋಕದಿಂದ ಸಾಕಷ್ಟು ದೂರ ಸರಿದಿದೆ. ಅವರನ್ನು ಮತ್ತೆ ಸಾಹಿತ್ಯದತ್ತ ಆಸಕ್ತರನ್ನಾಗಿ ಮಾಡಲು ಇಂತಹ ಕೃತಿಗಳು, ಅದರಲ್ಲೂ ಇಂದಿನ ವೇಗದ ಯುಗಕ್ಕೆ ಅನ್ವಯವಾಗುವಂತೆ ಸಣ್ಣ ಸಣ್ಣ ಕವನಗಳ ರೂಪದ ಸಾಹಿತ್ಯ ಅತ್ಯಂತ ಸಹಕಾರಿಯಾಗಬಲ್ಲುದೆಂದು ಅಭಿಪ್ರಾಯಿಸಿದರು. ಚಿ.ನಾ. ಸೋಮೇಶ್ ಅವರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಮೂಲಕ ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ

(ಮೊದಲ ಪುಟದಿಂದ) ಅವರಿಗೆ ಗುರುವಂದನೆಯನ್ನು ಸಲ್ಲಿಸಿದರು.

ಈ ಸಂದರ್ಭ ಜಿ. ರಾಜೇಂದ್ರ ಅವರು ಮಾತನಾಡಿ, ವಿನಯವಿದ್ದಾಗ ಮಾತ್ರ ವಿದ್ಯೆಗೆ ಮಹತ್ವ ಬರುತ್ತದೆ. ನಾವು ಎಂದಿಗೂ ಇನ್ನೊಬ್ಬರಲ್ಲಿ ದೋಷವನ್ನು ಎಣಿಸುವುದು ತಪ್ಪೆಂದು ಅಭಿಪ್ರಾಯಿಸಿ, ನಮ್ಮ ಬೆನ್ನೇ ನಮಗೆ ಕಾಣದಿರುವಾಗ ನಾವು ‘ಹಂಸ ಕ್ಷೀರ ನ್ಯಾಯ’ದಂತೆ ಕೆಸರಿನಲ್ಲಿದ್ದರೂ ಅದರ ಸೋಂಕಿಲ್ಲದೆ ಬೆಳೆÉಯುವ ತಾವರೆಯಂತೆ ಒಳಿತನ್ನು ಮಾತ್ರ ಇತರರಿಂದ ಸ್ವೀಕರಿಸುವ ಮನೋಭಾವವನ್ನು ಹೊಂದಬೇಕೆAದು ಕಿವಿ ಮಾತುಗಳನ್ನಾಡಿದರು.

ನಾವು ಇತರರ ಧರ್ಮಗಳ ಬಗ್ಗೆ ಯೋಚಿಸದೆ, ನಮ್ಮ ಧರ್ಮವನ್ನು ರಕ್ಷಿಸಿಕೊಳ್ಳುವ ನಿಟ್ಟಿನ ರಚನಾತ್ಮಕವಾದ ಚಿಂತನೆ ಮತ್ತು ಕಾರ್ಯಗಳಿಗೆ ಮುಂದಾಗುವುದು ಅವಶ್ಯ. ಇಂತಹ ಪ್ರಯತ್ನಗಳು ನಮ್ಮನ್ನು ಬಲಪಡಿಸುತ್ತದಲ್ಲದೆ, ಇತರ ಧರ್ಮಗಳು ನಮ್ಮನ್ನು ಗೌರವಿಸುವಂತಾಗುತ್ತದೆAದು ತಿಳಿಸಿ, ಮೊದಲು ನಮ್ಮ ಧರ್ಮದ ಬಗೆಗಿನ ಜಾಗೃತಿ ಮೂಡುವಂತಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು. ಆರ್‌ಎಸ್‌ಎಸ್ ಕೊಡಗು ಘಟಕದ ಪೂರ್ವ ಸರ ಸಂಘಚಾಲಕ ಮಚ್ಚಾರಂಡ ಮಣಿ ಕಾರ್ಯಪ್ಪ ಮಾತನಾಡಿದರು.

‘ಭಾರತಾಂಬೆÉÉ’ಗೆ ಅತಿಥಿ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಶ್ರೀಸುತ ಬಳಗದ ಡಿ.ಹೆಚ್. ತಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾರ ಚಿ.ನಾ. ಸೋಮೇಶ್ ಉಪಸ್ಥಿತರಿದ್ದರು. ಗೀತಾ ಸಂಪತ್ ಕುಮಾರ್ ಪ್ರಾರ್ಥಿಸಿ, ಕೆ.ಕೆ.ದಿನೇಶ್ ಸ್ವಾಗತಿಸಿದರು. ಉಪನ್ಯಾಸಕಿ ಜಯಲಕ್ಷಿö್ಮÃ ಕಾರ್ಯಕ್ರಮ ನಿರೂಪಿಸಿದರು.