ಮುಂಜಾನೆ ೬.೩೦ ಗಂಟೆ. ತಾಜಾ ಕೊಡಗಿನ ಕಾಫಿಯು ಅಡುಗೆ ಮನೆಯಲ್ಲಿ ಕುದಿಯುತಿರುತ್ತದೆ. ಆದರೆ ನಮ್ಮ ಕೈಯಲ್ಲಿ ಪತ್ರಿಕೆಯಿಲ್ಲದೆ ಕಾಫಿಯನ್ನು ಹೀರುವುದಿಲ್ಲ ಎಂಬ ಸಂಕಲ್ಪ ಅನೇಕರದು. ನೀವು ತಡರಾತ್ರಿಯವರೆಗೂ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಚರ್ಚೆಗಳನ್ನು ವೀಕ್ಷಿಸಿರಬಹುದು, ಸುದ್ದಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಬ್ರೌಸ್ ಮಾಡಿರಬಹುದು. ಆದರೆ ಪ್ರಮುಖ ಅಂಶವಾಗಿ ದಿನಪತ್ರಿಕೆ ಯಾವಾಗಲೂ ನಿಮ್ಮ ಕಾಫಿಯೊಂದಿಗೆ ಇದ್ದರೆ ಆ ದಿನವು ಹೆಚ್ಚು ಹರ್ಷಚಿತ್ತದಿಂದ ಕೂಡಿರುತ್ತದೆ.

ವೃತ್ತಪತ್ರಿಕೆಯನ್ನು ಪತ್ರಿಕಾ ವಿತರಕರು ತಡವಾಗಿ ತಲುಪಿಸಿದ್ದಕ್ಕಾಗಿ ಸಹಜವಾಗಿ ನಾವು ಅವರನ್ನು ಗದರಿಸುತ್ತಿದ್ದೆವು. ಆದರೆ ನಾವು ಹಾಸಿಗೆಯಿಂದ ಎದ್ದೇಳುವ ಮೊದಲು ಅವರು ಅನೇಕ ಬಾರಿ ಪತ್ರಿಕೆಯನ್ನು ಮನೆಗೆ ವಿತರಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಮರೆತುಬಿಡುತ್ತೇವೆ.

ಪ್ರತಿ ವರ್ಷ ಸೆಪ್ಟೆಂಬರ್ ೪ ಅನ್ನು ಪತ್ರಿಕಾ ವಿತರಕರ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದು ಪತ್ರಿಕಾ ವಿತರಕರಿಗೆ ಧನ್ಯವಾದಗಳನ್ನು ಅರ್ಪಿಸುವ ದಿನವಾಗಿದೆ. ಅಂತಹ ಹತ್ತಾರು ವಿತರಕರು ಬೆಳಿಗ್ಗೆ ಮನೆಯಿಂದ ಹೊರಟು ಒಂದು ಸ್ಥಳದಲ್ಲಿ ಪತ್ರಿಕೆಗಳನ್ನು ಸಂಗ್ರಹಿಸಿ ಜೋಡಿಸಿಕೊಂಡು ವಿತರಣೆಗಾಗಿ ನಿಖರವಾಗಿ ಯೋಜನೆಯನ್ನು ರೂಪಿಸುತ್ತಾರೆ. ಕೆಲವರು ತಮ್ಮ ದ್ವಿಚಕ್ರ ವಾಹನಗಳಲ್ಲಿ, ಹೆಚ್ಚಿನವರು ತಮ್ಮ ಸೈಕಲ್‌ಗಳಲ್ಲಿ ಪತ್ರಿಕೆಗಳ ಬಂಡಲ್‌ಗಳನ್ನು ಹೊತ್ತುಕೊಂಡು ನಮ್ಮ ಬೆಳಗಿನ ಸಮಯವನ್ನು ಉತ್ತಮಗೊಳಿಸಲು ತಮ್ಮ ಸುಖ ನಿದ್ರೆಯನ್ನು ಬದಿಗೊತ್ತಿ ಅವರು ಹೊಂದಿರುವ ಉತ್ಸಾಹವು ಹೆಚ್ಚು ಮೌಲ್ಯಯುತವಾಗಿದೆ. ವಾರದ ವಿರಾಮವನ್ನು ತೆಗೆದುಕೊಳ್ಳದೆ ಪ್ರತಿದಿನವೂ ಬೆಳಿಗ್ಗೆ ಬೇಗನೆ ಏಳುವ ಅವರ ಕರ್ಮಯೋಗದ ಸಾರವು ಶ್ಲಾಘನೀಯವಾಗಿದೆ. ಪತ್ರಿಕಾ ವಿತರಕರು ತಾವು ಅನುಭವಿಸುತ್ತಿರುವ ಬಡತನಕ್ಕಾಗಿ ವೃತ್ತಿಗೆ ಬರುತ್ತಾರೆ ಎಂದು ಹಲವರು ಅಭಿಪ್ರಾಯಪಟ್ಟರೂ, ಬಡತನದಿಂದ ತಪ್ಪಿಸಿಕೊಳ್ಳಲು ಖಂಡಿತವಾಗಿಯೂ ಅನೇಕ ಇತರ ವೃತ್ತಿಗಳಿವೆ. ಹಾಗಾಗಿ ಇವರು ಬೆಳಿಗ್ಗೆ ೪.೩೦ಕ್ಕೆ ಎದ್ದೇಳುವ ಅವಶ್ಯಕತೆಯಿಲ್ಲ. ಪತ್ರಿಕಾ ವಿತರಣೆ ಅವರ ಪಾಲಿಗೆ ವೃತ್ತಿಯಲ್ಲದೆ ಸೇವೆಯಾಗಿರುವುದು.

ಕೈಯ್ಯಲ್ಲಿ ಮೊಬೈಲ್ ಇದ್ದರೆ, ಮನೆಯಲ್ಲಿ ಟಿವಿ ಇದ್ದರೂ ಬೆಳಿಗ್ಗೆ ಪತ್ರಿಕೆ ಓದದಿದ್ದರೆ ಬಹುಪಾಲು ಜನರಿಗೆ ಇಂದಿಗೂ ಸಮಾಧಾನವಿರುವುದಿಲ್ಲ. ತುಸು ತಡವಾದರೂ ಯಾಕಪ್ಪಾ ಲೇಟು? ಎಂದು ಪತ್ರಿಕೆ ಹಾಕುವವನ್ನು ಕೇಳುವಷ್ಟು ಪತ್ರಿಕೆ ಓದುವ ಗೀಳು. ಆದರೆ, ಅಷ್ಟೇ ಪ್ರಾಮಾಣಿಕ ಕೆಲಸ ಈ ಪತ್ರಿಕಾ ವಿತರಕರದ್ದು. ಬೆಳಿಗ್ಗೆ ೪ ಗಂಟೆಯೊಳಗೆ ಕನಸಿನ ನಿದ್ರೆಗೆ ಬ್ರೇಕ್ ಹಾಕಿ ಹೊರಡಬೇಕು. ಪತ್ರಿಕೆಗಳನ್ನು ಜೋಡಿಸಿಕೊಂಡು ಸೈಕಲ್ ಅಥವಾ ಬೈಕ್‌ನಲ್ಲಿಟ್ಟು ಕೊಂಡು ಓದುಗನಿಗೆ ತಡವಾಗದಂತೆ ಕೈ ಮುಟ್ಟಿಸುವ ಕಾಯಕವಿದು.

ಒಬ್ಬ ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕಾಲಯದಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ. ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಮುಂಜಾನೆಯ ಸವಿಗನಸು ಕಾಣುತ್ತಾ ಎಲ್ಲರೂ ಸಿಹಿ ನಿದ್ದೆಯಲ್ಲಿರುವಾಗ ಪತ್ರಿಕೆ ವಿತರಕರು ಮಾತ್ರ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಚಳಿ, ಮಳೆ, ಗಾಳಿ ಯಾವುದೂ ಇವರ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಹಬ್ಬ, ಉತ್ಸವ ಏನೇ ಇದ್ದರೂ ಈ ಕಾಯಕ ಮಾತ್ರ ತಪ್ಪಿಸುವಂತಿಲ್ಲ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಿಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಾರೆ.

“ಮಳೆ ಬಂದು ಪತ್ರಿಕೆ ಒದ್ದೆಯಾದರೆ, ತಡವಾದರೆ ಕೆಲವರು ಬೈಯ್ಯುತ್ತಾರೆ. ಕೆಲವರು ಇರ್ಲಿ ಬಿಡಿ ಅನ್ನುತ್ತಾರೆ.

ಗ್ರಾಹಕರ ನಿರೀಕ್ಷೆಗೆ ತಕ್ಕ ಕೆಲಸ ಮಾಡುತ್ತೇವೆ. ಒಂದು ದಿನವೂ ತಪ್ಪದಂತೆ ಪತ್ರಿಕೆ ಮುಟ್ಟಿಸುತ್ತೇವೆ. ಆದರೆ, ಬೇಸರದ ಸಂಗತಿ ಎಂದರೆ ತಿಂಗಳಿಗೊಮ್ಮೆ ಪತ್ರಿಕೆಯ ಹಣ ನೀಡಲು ಕೆಲವರು ಸತಾಯಿಸುತ್ತಾರೆ. ಮತ್ತೆ ಬನ್ನಿ, ನಾಳೆ ಬನ್ನಿ ಎಂದು ಹಿಂದಕ್ಕೆ ಕಳುಹಿಸುವಾಗ ಅದಕ್ಕಿಂತ ಬೇಸರ ಮತ್ತೊಂದಿಲ್ಲ.

ಕೆಲವು ಪತ್ರಿಕಾ ವಿತರಕರು ಹಲವಾರು ವರ್ಷಗಳಿಂದ ಈ ವೃತ್ತಿ ನಡೆಸಿಕೊಂಡು ಬಂದಿದ್ದಾರೆ. ಕುಟುಂಬದವರು ಅನಾರೋಗ್ಯ ಪೀಡಿತರಾದರೂ, ಶುಭ ಕಾರ್ಯವಿದ್ದರೂ ಇವರು ತಮ್ಮ ಕಾಯಕ ಬಿಡುವಂತಿಲ್ಲ. ಅಂದ ಹಾಗೆ ಇವರಿಗೆ ಸಿಗುವುದು ವರ್ಷದಲ್ಲಿ ನಾಲ್ಕು ಅಥವಾ ಐದು ರಜೆಗಳು ಮಾತ್ರ.

ಕೋವಿಡ್ ಸಮಯದಲ್ಲಿಯೂ ಮನೆ ಮನೆಗೆ ಪತ್ರಿಕೆ ಬರುವುದು ನಿಲ್ಲಲಿಲ್ಲ. ತಮ್ಮ ಜೀವವನ್ನೂ ಲೆಕ್ಕಿಸದೇ ಮನೆಮನೆಗೂ ಪತ್ರಿಕೆ ಮುಟ್ಟಿಸಿದ್ದು ಪತ್ರಿಕಾ ವಿತರಕರ ವೃತ್ತಿ ಬದ್ಧತೆಗೆ ಸಾಕ್ಷಿಯಾಗಿದೆ. ಕೊರೊನಾ ಸಂಕಷ್ಟದಲ್ಲೂ ತಮ್ಮ ಕಾಯಕವನ್ನು ನಿಲ್ಲಿಸಲಿಲ್ಲ. ಸೋಂಕು ಹರಡುತ್ತದೆ ಎಂಬ ವದಂತಿಗಳು ಹರಡಿದರೂ ಎದೆಗುಂದದೆ ಪತ್ರಿಕೆ ಹಂಚಿ ವದಂತಿಗಳು ಸುಳ್ಳು ಎಂಬುದನ್ನು ತೋರಿಸಿಕೊಟ್ಟವರು ವಿತರಕರು. ಮಾಧ್ಯಮಗಳು ಮತ್ತು ಜನರ ನಡುವಿನ ಸೇತುವೆಯಾಗಿರುವ ಪತ್ರಿಕಾ ವಿತರಕರು ಸದಾ ಸ್ಮರಣೀಯರು. ಬಹಳ ರಿಸ್ಕ್ ತೆಗೆದುಕೊಂಡು ಮನೆ ಮನೆಗೂ ಬೆಳಗ್ಗೆಯೇ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯ.

ಚಳಿ ಇದೆ ಎಂದು ಹೊದ್ದು ಮಲಗುವಂತಿಲ್ಲ, ಮಳೆ ಬಂತೆAದು ತಡ ಮಾಡುವಂತಿಲ್ಲ, ಮುಂಜಾನೆ ಬೀಳುವ ಸವಿಗನಸಿನ ಮಾತೇ ಇಲ್ಲ. ಸುದ್ದಿಗಾರರು ಸುದ್ದಿ ಬರೆದರೂ ಜಾಹೀರಾತುದಾರರು ಜಾಹೀರಾತು ತಂದರೂ, ಪ್ರಿಂಟಿAಗ್‌ನವರು ಮುದ್ರಿಸಿದರೂ ಪತ್ರಿಕೆಯ ಯಶಸ್ಸು ನಿಂತಿರುವುದು ಪತ್ರಿಕೆಯನ್ನು ಜನರಿಗೆ ತಲುಪಿಸುವವರ ಕೈಯಲ್ಲಿ. ಹಾಗಾಗಿಯೇ ಪತ್ರಿಕಾ ವಿತರಕರನ್ನು ಗೌರವಿಸುವ ಸಲುವಾಗಿ ವರ್ಷಕ್ಕೆ ಒಮ್ಮೆ ಸೆಪ್ಟೆಂಬರ್ ೪ ರಂದು ಪತ್ರಿಕೆ ವಿತರಕರ ದಿನವನ್ನು ಆಚರಿಸಲಾಗುತ್ತದೆ.

ನ್ಯೂಯಾರ್ಕ್ ನಗರದ ನಗರದ ಜನರು ಪ್ರಭಾವಿತರಾಗಿ ಪತ್ರಿಕೆಯನ್ನು ಉತ್ಸಾಹದಿಂದ ಕೊಂಡು ಓದುತ್ತಿದ್ದರು.

ಆಲ್ಬರ್ಟ್ ಐನ್‌ಸ್ಟೆöÊನ್, ಜೇಮ್ಸ್ ಕಾಗ್ನಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು ಐಸಾಕ್ ಅಸಿಮೊವ್ ಅವರು ಪತ್ರಿಕಾ ವಿತರಕರಾಗಿ ತಮ್ಮ ಬದುಕನ್ನು ಆರಂಭಿಸಿದರು. ಅವರೊಂದಿಗೆ ಮಾಜಿ ರಾಷ್ಟçಪತಿ ಭಾರತರತ್ನ ಎ.ಪಿ.ಜೆ. ಅಬ್ದುಲ್ ಕಲಾಂರವರು ಕೂಡ ತಮ್ಮ ಬದುಕಿನ ಆರಂಭದಲ್ಲಿ ಪತ್ರಿಕೆ ವಿತರಣೆ ಮಾಡುವ ಮೂಲಕ ಜಗತ್ ವಿಖ್ಯಾತರಾದರು.

ಅಂದಿನಿAದ, ಅಸಂಖ್ಯಾತ ಮಹತ್ವಾಕಾಂಕ್ಷಿಗಳು ಬಾರ್ನೆ ಫ್ಲಾಹೆರ್ಟಿ ಅವರ ಹೆಜ್ಜೆಗಳನ್ನು ಜಗತ್ತಿನಲ್ಲಿ ಅನುಸರಿಸಿದ್ದಾರೆ. ಸೆಪ್ಟೆಂಬರ್ ೪, ೧೮೩೩ ರಂದು ಬಾರ್ನೆ ಫ್ಲಾಹೆರ್ಟಿ ಕೆಲಸಕ್ಕೆ ಇಳಿದ ದಿನದ ಸ್ಮರಣೆಯಾಗಿ ಇಂದಿಗೆ ೧೮೯ ವರ್ಷಗಳು ಸಂದಿವೆ. ಆ ನಿಟ್ಟಿನಲ್ಲಿ ಪತ್ರಿಕಾ ವಿತರಕರ ದಿನಾಚರಣೆಯ ಮೂಲಕ ಅವರನ್ನು ಗೌರವ ಪೂರ್ವಕವಾಗಿ ಜಗತ್ತಿನಾದ್ಯಾಂತ ಸ್ಮರಿಸಲಾಗುತ್ತಿದೆ.

- ಅರುಣ್ ಕೂರ್ಗ್, ಮಡಿಕೇರಿ, ಮೊ: ೯೮೪೪೦೯೫೬೪೮