ಸುAಟಿಕೊಪ್ಪ, ಸೆ.೨: ತಾ.೧ರಂದು ಸಂಜೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ೧ ಗಂಟೆಯಲ್ಲಿ ೩ ಇಂಚುಗಳಷ್ಟು ಮಳೆಯಾಗಿದ್ದು, ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿಯ ಮಾರುತಿನಗರದಲ್ಲಿ ೩ ಮನೆಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ಗರಗಂದೂರು, ಗಿರಿಯಪ್ಪ ಮನೆ, ಪಟ್ಟೆಮನೆ ಉದಯಕುಮಾರ್ ಅವರ ಮನೆಯ ತಡೆಗೋಡೆ ಕುಸಿತ ಉಂಟಾಗಿದೆ. ಗದ್ದೆಗಳಲ್ಲಿ ಭಾರೀ ಪ್ರಮಾಣದ ಕೆಸರು ಮಿಶ್ರಿತ ನೀರು ನುಗ್ಗಿ ಬಂದಿದ್ದು, ಮರಳು ಮಣ್ಣು ನಿಂತ ಹಿನೆÀ್ನಲೆಯಲ್ಲಿ ಭತ್ತದ ಪೈರು ಹಾಳಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮಳೆಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸದಸ್ಯರುಗಳಾದ ಪಿ.ಆರ್.ಸುನಿಲ್ಕುಮಾರ್, ಪಿ.ಎಫ್.ಸಬಾಸ್ಟೀನ್, ಮಂಜುಳ, ಗೀತಾ, ನಾಗರತ್ನ ಸುರೇಶ್, ಜಿನಾಸುದ್ದೀನ್, ಶಬ್ಬೀರ್, ಸೇರಿದಂತೆ ಮತ್ತಿತರರು ತೆರಳಿ ಸ್ಥಳ ಪರಿಶೀಲನೆ ಮಾಡಿದರು.
ಕೊಚ್ಚಿಹೋದ ಮೀನುಗಳು
ಗುಡ್ಡೆಹೊಸೂರು: ಇಲ್ಲಿನ ಬೊಳ್ಳುರು ಗ್ರಾಮದ ಸುಣ್ಣದಕೆರೆ ಎಂಬಲ್ಲಿ ಸಿ.ಬಿ.ಪಳಂಗಪ್ಪ ಅವರಿಗೆ ಸೇರಿದ ಕೆರೆಯಲ್ಲಿ ಸುಮಾರು ಮೂರು ಕ್ವಿಂಟಾಲ್ ಮೀನುಗಳು ಮಳೆಯ ರಭಸಕ್ಕೆ ಕೆರೆ ಒಡೆದು ಕೊಚ್ಚಿಹೋಗಿವೆ. ಅಲ್ಲದೆ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿನ ಹಲವು ಹೊಟೇಲ್ಗಳಿಗೆ ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಅಲ್ಲದೆ ನಿಸರ್ಗಧಾಮ, ಗಂಧÀದಕೋಟೆ ಬಳಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.