ಮಡಿಕೇರಿ, ಸೆ. ೨: ಅಕ್ಟೋಬರ್ ತಿಂಗಳಲ್ಲಿ ನಡೆಯುವ ಐಬಿಪಿಎಸ್ ಪಿಒ ಮತ್ತು ಮುಂಬರುವ ಎಲ್ಲಾ ಬ್ಯಾಂಕ್ ಮತ್ತು ವಿಮಾ ಕಂಪೆನಿಗಳ ನೇಮಕಾತಿ ಪರೀಕ್ಷೆಗಳ ತಯಾರಿಗಾಗಿ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯಲ್ಲಿ ತಾ. ೬ ರಂದು ನುರಿತ ವಿಷಯ ತಜ್ಞರಿಂದ ಒಂದು ದಿನದ ಉಚಿತ ಕಾರ್ಯಾಗಾರ ನಡೆಯಲಿದೆ.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯವಶ್ಯಕವಿರುವ ಸಾರ್ಟ್ ಕಟ್ ಟೆಕ್ನಿಕ್ಸ್ ಮತ್ತು ಸ್ಪೀಡ್ ಮೆಥಾಮೆಟಿಕ್ಸ್ ಕಲಿಕೆಯ ಮೂಲಕ ಟೈಮ್ ಮ್ಯಾನೇಜ್‌ಮೆಂಟ್ ತಂತ್ರಗಾರಿಕೆಯಿAದ ಅತೀ ಸರಳವಾಗಿ ತರಬೇತಿ ನೀಡಲಾಗುತ್ತದೆ. ಆಸಕ್ತರು ತಾ. ೫ ರೊಳಗೆ ೮೬೬೦೨೧೭೭೩೯ ಅಥವಾ ೦೮೧೭೨-೨೪೫೧೩೫ ಕ್ಕೆ ಕರೆ/ವಾಟ್ಸಾಪ್ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‌ನ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.