ಮಡಿಕೇರಿ, ಸೆ. ೨: ಮಡಿಕೇರಿ ನಗರಸಭೆಯ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಕೆ. ಸತ್ಯನಾರಾಯಣ ಮತ್ತು ಉಪಾಧ್ಯಕ್ಷರಾಗಿ ಎಚ್.ಎನ್.ಲೋಕೇಶ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಎ.ಎಸ್. ನಾಗೇಶ್, ಸಹ ಕಾರ್ಯದರ್ಶಿ ಬಿ.ಕೆ. ಯಶೋಧ, ಸಂಘಟನಾ ಕಾರ್ಯದರ್ಶಿ ಪಿ.ಬಿ.ಮೋಹನ, ಖಜಾಂಚಿ ವಿಮಲ ರೈ ಅವರು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಬಿ.ಆರ್.ಹರಿಣಿ, ಪಿ.ಬಿ.ಸುರೇಶ್, ವೈ.ಇ. ಸೋಮಶೇಖರ್, ಸೈದಾಬಾನು, ಅಕ್ರಂ ಪಿ.ಎ., ಶಿವಪ್ರಕಾಶ್, ಯೋಗಾನಂದ, ವಸಂತ, ಎಚ್.ಡಿ.ರಂಗಪ್ಪ, ಕಬೀರ್, ಮಾರುತಿ, ಗಿರೀಶ್ ಕುಮಾರ್, ಎಚ್.ಆರ್. ನಾಗರಾಜು ಮತ್ತು ಶಿವಕುಮಾರ್ ಅವರು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷರಾದ ಕೆ. ಸತ್ಯನಾರಾಯಣ ಅವರು ತಿಳಿಸಿದ್ದಾರೆ.