ಪೆರಾಜೆ, ಸೆ. ೨: ಇಲ್ಲಿನ ಶ್ರೀ ಶಾಸ್ತಾವು ದೇವಸ್ಥಾನದಿಂದ ತಲತಲಾಂತರದಿAದ ನಡೆದುಕೊಂಡು ಬಂದ ಪದ್ದತಿಯಂತೆ , ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ಶ್ರೀ ಕಾವೇರಿ ಸನ್ನಿಧಿಗೆ ಕದಿರು, ತೆಂಗಿನಕಾಯಿ,ಅಕ್ಕಿ, ಹೂ ಹಿಂಗಾರ ತೆಗೆದುಕೊಂಡು ಹೋಗಿ ಅರ್ಪಿಸಲಾಯಿತು. ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಪಕ್ಕದ ಶ್ರೀ ಕಾವೇರಿಗದ್ದೆಯಿಂದ ಕದಿರು ತೆಗೆದು ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಸಕಲ ಪೂಜಾ ವಿಧಿüವಿಧಾನಗಳ ನಂತರ ಸಮರ್ಪಿಸಲಾಯಿತು.

ಈ ಸಂದರ್ಭ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ತಲಕಾವೇರಿ ದೇವಸ್ಥಾನದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ, ಭಾಗಮಂಡಲ ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ ಸೇರಿದಂತೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ಪದಾಧಿಕಾರಿಗಳು, ಸದಸ್ಯರು ಇದ್ದರು.