ಚೆಟ್ಟಳ್ಳಿ, ಸೆ. ೨: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಕೈಲ್‌ಪೊಳ್ದ್ ಹಬ್ಬದ ಧಾರೆ ಪೂಜೆ ನೆರವೇರಿತು.

ಅರ್ಚಕ ವಿಘ್ನೇಶ್ವರ, ನಾಗದೇವರಿಗೆ, ಕ್ಷೇತ್ರಪಾಲಕನಿಗೆ ಪೂಜೆ ಸಲ್ಲಿಸಿ ಭಗವತಿಗೆ ಮಹಾಪೂಜೆ ನೆರವೇರಿಸಿದರು. ಪ್ರತಿ ವರ್ಷ ಸಾಂಪ್ರದಾಯಿಕ ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ಊರಿನ ಭಗವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಊರಿಗೆ ಒಳಿತನ್ನು ಮಾಡುವಂತೆ ಹಿರಿಯರಾದ ಬಟ್ಟೀರ ಕಾವೇರಪ್ಪ (ಕಟ್ಟಿ) ಅವರು ಊರಿನ ಪರವಾಗಿ ಬೇಡಿಕೊಂಡರು. ಪ್ರಸಾದ ವಿತರಣೆ ನೆರವೇರಿಸಲಾಯಿತು. ತಕ್ಕರಾದ ಮುಳ್ಳಂಡ ಸೋಮಣ್ಣ ಹಾಗೂ ಊರಿನವರು ಭಾಗಹಿಸಿದ್ದರು.