ಮಡಿಕೇರಿ, ಸೆ. ೧: ಪತ್ರಕರ್ತ ಹಾಗೂ ಸಾಹಿತಿ ಚಿ. ನಾ. ಸೋಮೇಶ್ ಅವರು ಬರೆದಿರುವ ಕವನಸಂಕಲನ ‘ಅಗ್ನಿ ಪಥ’ ಲೋಕಾರ್ಪಣೆ ತಾ. ೨ ರಂದು (ಇಂದು) ಮಧ್ಯಾಹ್ನ ೨ ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ನಡೆಯಲಿದೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಆರ್‌ಎಸ್‌ಎಸ್ ಹಿರಿಯ ಚಿಂತಕ ಮಚ್ಚಾರಂಡ ಮಣಿ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರಿಗೆ ಗುರು ವಂದನೆಯೊAದಿಗೆ, ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಅವರು ಅಗ್ನಿ ಪಥ ಲೋಕಾರ್ಪಣೆ ಮಾಡಲಿದ್ದಾರೆ. ಕೊಡಗು ಪತ್ರಿಕಾಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್ ಮೊದಲಾದವರು ಉಪಸ್ಥಿತರಿರುವರು ಎಂದು ಗ್ರಾಮೋತ್ಥಾನ ಭಾರತ ಪ್ರಕಾಶನ ಶ್ರೀಸುತ ಬಳಗದ ಪ್ರಕಟಣೆ ತಿಳಿಸಿದೆ.