ಮಡಿಕೇರಿ, ಆ. 30: ಸ್ವರ್ಣಗೌರಿ ವೃತವಾದ ಇಂದು ನಾಡಿನ ವಿವಿಧೆಡೆ ಗೌರಿ ಪೂಜೆ, ಪಲ್ಲಕ್ಕಿ ಉತ್ಸವಗಳು ನೆರವೇರಿದವು. ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಸ್ವರ್ಣ ಗೌರಿ ವೃತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಗವತಿ ದೇವಿಗೆ ಬಾಗಿನ ಸಮರ್ಪಣೆ ಮಾಡಿ, ಮಹಾಪೂಜೆಯ ನಂತರ ಮುತೈದೆಯರಿಗೆ ಅರಶಿಣ ಕುಂಕುಮ ನೀಡಲಾಯಿತು. ಚೌಡೇಶ್ವರಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ತಾ. 31 ರಂದು (ಇಂದು) ಬೆಳಿಗ್ಗೆ 8 ಗಂಟೆಗೆ 24 ತೆಂಗಿನಕಾಯಿಗಳ ಗಣಹೋಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 58ನೇ ವರ್ಷದ ಸ್ವರ್ಣ ಗೌರಿ ಪ್ರತಿಷ್ಠಾಪನಾ ಕಾರ್ಯಕ್ರಮವು ಧಾರ್ಮಿಕ ಸಂಪ್ರದಾಯದಂತೆ ಶ್ರೀರಾಮ ಮಂದಿರದಲ್ಲಿ ನೆರವೇರಿತು. ರಾಮ ಮಂದಿರದಿಂದ ಬೆಳಿಗ್ಗೆ 8.30 ಗಂಟೆಗೆ ಹೊರಟು ಮಡಿಕೇರಿ, ಆ. 30: ಸ್ವರ್ಣಗೌರಿ ವೃತವಾದ ಇಂದು ನಾಡಿನ ವಿವಿಧೆಡೆ ಗೌರಿ ಪೂಜೆ, ಪಲ್ಲಕ್ಕಿ ಉತ್ಸವಗಳು ನೆರವೇರಿದವು. ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಸ್ವರ್ಣ ಗೌರಿ ವೃತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಗವತಿ ದೇವಿಗೆ ಬಾಗಿನ ಸಮರ್ಪಣೆ ಮಾಡಿ, ಮಹಾಪೂಜೆಯ ನಂತರ ಮುತೈದೆಯರಿಗೆ ಅರಶಿಣ ಕುಂಕುಮ ನೀಡಲಾಯಿತು. ಚೌಡೇಶ್ವರಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ತಾ. 31 ರಂದು (ಇಂದು) ಬೆಳಿಗ್ಗೆ 8 ಗಂಟೆಗೆ 24 ತೆಂಗಿನಕಾಯಿಗಳ ಗಣಹೋಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 58ನೇ ವರ್ಷದ ಸ್ವರ್ಣ ಗೌರಿ ಪ್ರತಿಷ್ಠಾಪನಾ ಕಾರ್ಯಕ್ರಮವು ಧಾರ್ಮಿಕ ಸಂಪ್ರದಾಯದಂತೆ ಶ್ರೀರಾಮ ಮಂದಿರದಲ್ಲಿ ನೆರವೇರಿತು. ರಾಮ ಮಂದಿರದಿಂದ ಬೆಳಿಗ್ಗೆ 8.30 ಗಂಟೆಗೆ ಹೊರಟು ನೂತನ ವಸ್ತ್ರ ಧರಿಸಿ, ಕೈತುಂಬ ಗಾಜಿನ ಬಳೆಗಳನ್ನು ತೊಟ್ಟು ಗೌರಿಯನ್ನು ಪೂಜಿಸಿದರು. ವ್ರತವಾಗಿ ಆಚರಿಸಿದ ಗೃಹಿಣಿಯರು ಮನೆಗೆ ಮುತ್ತೈದೆಯರನ್ನು ಕರೆದು ಅರಶಿಣ-ಕುಂಕಮ ನೀಡಿ ಬಾಗಿನ ಅರ್ಪಿಸಿ ಶುಭ ಕೋರಿದರು. ಮತ್ತೆ ಕೆಲವರು ದೇವಾಲಯಗಳಿಗೆ ತೆರಳಿ ಅಲ್ಲಿ ಪ್ರತಿಷ್ಠಾಪಿಸುವ ಗೌರಿಗೆ ಬಾಗಿನ ಅರ್ಪಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಮನೆಮನೆಗಳಲ್ಲಿ ಗೌರಿ ಪೂಜೆ

ವ್ರತ ಮುಗಿದ ಬಳಿಕ ನೈವೇದ್ಯ ಸಮರ್ಪಿಸಿದರು. ಈ ಹಬ್ಬದಲ್ಲಿ ಖಿಚಿಡಿ ಅನ್ನ, ಕೆಸಸೊಪ್ಪಿನ ಸಾಂಬಾರು, ಕೋಸಂಬರಿ, ಪಾಯಸ ಮಾಡಿ ಕುಟುಂಬ ಸದಸ್ಯರ ಜೊತೆ ಸಹಭೋಜನ ಸವಿದರು. ಸಂಜೆ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪೆÇನ್ನಂಪೇಟೆ: ಪೆÇನ್ನಂಪೇಟೆ ಪಟ್ಟಣದ 7 ಕಡೆಗಳಲ್ಲಿ ಇಂದು ಗೌರಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಿಗ್ಗೆ ಸಮೀಪದ ಗೌರಿ ಕೆರೆಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಗೌರಮ್ಮನನ್ನು ಕರೆತಂದು ಬಸವೇಶ್ವರ ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರತಿಷ್ಠಾಪನೆ ಮಾಡಲಾಯಿತು. ಬಸವೇಶ್ವರ ದೇವಸ್ಥಾನ, ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಎಂ.ಜಿ. ನಗರದ ನಿಸರ್ಗ ಯುವಕ ಸಂಘ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಶಿವ ಕಾಲೋನಿಯ ಶಿವ ಯುವಕ ಸಂಘ, ಜೋಡುಬೀಟಿ ವಿನಾಯಕ ಯುವಕರ ಸಂಘಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಗೌರಿ ಪ್ರತಿಷ್ಠಾಪನೆ ಮಾಡಿದರು.

ಕೂಡಿಗೆ: ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ಗೌರಿ ಗಣೇಶೋತ್ಸವ ಹಬ್ಬದ ಅಂಗವಾಗಿ ಮೊದಲ ದಿನಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಗೌರಿ ಪೂಜೆ ನೆರವೇರಿಸಿದರು.

ದೇವಾಲಯ ಸಮಿತಿ ವತಿಯಿಂದ ಕಾವೇರಿ ನದಿಗೆ ತೆರಳಿ ಗೌರಿ ವಿಗ್ರಹವನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ನಂತರ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ರಥಬೀದಿಯಲ್ಲಿರುವ. ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಆವರಣದಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಹಬ್ಬ ಆಚರಣೆಯನ್ನು ದೇವಾಲಯದ ಮಹಿಳಾ ಸಮಿತಿಯವರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ವಿಜೇಂದ್ರ, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ಕೆ. ಮಹೇಶ್, ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರು ಖಜಾಂಚಿ ಡಿ.ಆರ್. ಕೃಷ್ಣ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಲೋಚನ, ಕಾರ್ಯದರ್ಶಿ ನಂದಿನಿ, ಸಮುದಾಯದ ಅನೇಕ ಮಹಿಳೆಯರು ಭಾಗವಹಿಸಿದ್ದರು. ಕೈಂಕರ್ಯಗಳನ್ನು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್ ನೆರವೇರಿಸಿದರು.

ವೀರಾಜಪೇಟೆ: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಗೌರಮ್ಮ ಪಲ್ಲಕ್ಕಿ ಮೆರವಣಿಗೆಯು ವೀರಾಜಪೇಟೆ ನಗರದ ದಖ್ಖನಿ ಮೊಹಲ್ಲಾ, ತೆಲುಗರ ಬೀದಿ, ಮೊಗರಗಲ್ಲಿ, ಚರ್ಚ್ ರಸ್ತೆ, ದೇವಾಂಗ ಬೀದಿ, ದೊಡ್ಡಮಠ, ಮೀನುಪೇಟೆ, ಸುಣ್ಣದಬೀದಿ, ಚಿಕ್ಕಪೇಟೆಯಲ್ಲಿ ಸಾಗಿತು. ಗೌರಮ್ಮನಿಗೆ ಮುತೈದೆಯರು ಬಾಗಿನ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ನಂತರ ಗೌರಮ್ಮನ ಮೂರ್ತಿಯನ್ನು ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇದಕ್ಕೂ ಮೊದಲು ಬೆಳಿಗ್ಗೆ 9 ಗಂಟೆಗೆ ನೆಲ್ಲಮಕ್ಕಡ ಮೋಹನ್ ಉತ್ತಪ್ಪ ಅವರ ಕೆರೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಪ್ರಾರಂಭಿಸಲಾಯಿತು.

ಸಿದ್ದಾಪುರ: ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಮೈಲಾದ್ ಪುರದ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಪ್ಪಾಜಿ ದೇವಾಲಯದಲ್ಲಿ ಗೌರಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮಾಲ್ದಾರೆಯ ಅಚ್ಚುತ ಕೆರೆಯಲ್ಲಿ ಸ್ನಾನ ಮಾಡಿಸಿ, ಶುದ್ಧಗೊಳಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಸಿದ್ಧಪ್ಪಾಜಿ ದೇವಾಲಯಕ್ಕೆ ಕರೆ ತರಲಾಯಿತು. ಈ ಸಂದರ್ಭ ದೇವಾಲಯದ ಪ್ರಮುಖರಾದ ಬಾಲುಪೂಜಾರಿ, ಗಣೇಶ್ ಇನ್ನಿತರರು ಹಾಜರಿದ್ದರು.