ಕುಶಾಲನಗರ, ಆ. 30: ಕುಶಾಲನಗರ ಮಾರುತಿ ಬಡಾವಣೆಯ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೆÇೀಷಕರು ಕುಶಾಲನಗರ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ತಮ್ಮ ಮಗಳ ಸಾವಿಗೆ ಕಾರಣಕರ್ತನಾದ ಕುಮಾರ್ ಎಂಬಾತನ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.

ಸೋಮವಾರ ಸಂಜೆ ಮಾರುತಿ ಬಡಾವಣೆಯ ಕಾಂತರಾಜ್ ಎಂಬವರ ಸಾಕು ಮಗಳು ಲ್ಯಾನ್ಸಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಲುವರಾಜ್ ಎಂಬವರ ಪುತ್ರ ಕುಮಾರ್ ಎಂಬಾತ ತನ್ನ ಮಗಳ ಸಾವಿಗೆ ನೇರ ಕಾರಣನಾಗಿದ್ದಾನೆ ಎಂದು ಆರೋಪಿಸಿ ಆತನ ಬಂಧಿಸಿ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕುಮಾರ್ ಸೋಮವಾರ ತನ್ನ ಮಗಳಿಗೆ ದೂರವಾಣಿ ಕರೆ ಮಾಡಿದ್ದು ನಂತರ ಈ ಘಟನೆ ನಡೆದಿದೆ ಎಂದು ಕಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಕುಮಾರ ನಾಪತ್ತೆಯಾಗಿ ದ್ದಾನೆ ಎಂದು ಕುಶಾಲನಗರ ಪೆÇಲೀಸ್ ತಿಳಿಸಿದ್ದಾರೆ. ಕುಮಾರ್ ಎಂಬ ಯುವಕ ಮತ್ತು ಲ್ಯಾನ್ಸಿ ನಡುವೆ ಕಳೆದ ಐದು ವರ್ಷಗಳಿಂದ ಪ್ರೇಮ ಪ್ರಕರಣ ನಡೆಯುತ್ತಿದ್ದು ತನ್ನ ಮಗಳ ಮದುವೆಗೆ ಸತಾಯಿಸುತ್ತಿದ್ದ ಎಂದು ತಂದೆ ಕಾಂತರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ಯುವತಿ ಇತ್ತೀಚೆಗಷ್ಟೇ ಪದವಿ ವ್ಯಾಸಂಗ ಮುಗಿಸಿ ಉನ್ನತ ವ್ಯಾಸಂಗಕ್ಕೆ ತೆರಳುವ ಸಿದ್ಧತೆಯಲ್ಲಿ ಇದ್ದಳು ಎಂದು ಕಾಂತರಾಜ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಕುಶಾಲನಗರ ಪೆÇಲೀಸ್ ಠಾಣಾಧಿಕಾರಿ ಅಪ್ಪಾಜಿ ತಿಳಿಸಿದ್ದಾರೆ. -ಸಿಂಚು