ಶನಿವಾರಸಂತೆ, ಆ. 30: ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯ ಸೇವನೆ ಮಾಡಿ ಮಾರುತಿ ಓಮ್ನಿ ಕಾರನ್ನು (ಕೆಎ 46 ಎಂ 1418) ಯಾವುದೇ ದಾಖಲಾತಿಗಳಿಲ್ಲದೆ ಚಾಲನೆ ಮಾಡುತ್ತಿದ್ದ ಕಾರಿನ ಮಾಲೀಕರಿಗೆ ಸೋಮವಾರಪೇಟೆ ನ್ಯಾಯಾಲಯ ರೂ. 27,500 ದಂಡ ವಿಧಿಸಿದೆ.
ಆಲೂರು ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಶಿವಕುಮಾರ್ ತಾ. 28 ರಂದು ಸಂಜೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದು, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಪೊಲೀಸ್ ಸಬ್ಇನ್ಸ್ಪೆಕ್ಟರ್ ಗೋವಿಂದ್ರಾಜ್, ಸಿಬ್ಬಂದಿಗಳಾದ ಮುರಳಿ, ರಹೀಮ್, ಶಶಿಕುಮಾರ್, ಮಹೇಶ್, ಅನಿಲ್, ಸತೀಶ್ ಇತರರು ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾಗ ಮದ್ಯ ಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಿಸಲಾಗಿದೆ.
ಚಾಲಕ ತಾ. 29 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ರೂ. 27,500 ದಂಡ ವಿಧಿಸಿದ್ದು, ದಂಡ ಪಾವತಿಸಿ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿದ್ದ ಕಾರನ್ನು ಬಿಡಿಸಿಕೊಂಡಿರುತ್ತಾರೆ.