(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಆ.30: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ 44ನೇ ವರ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗ್ರಾ.ಪಂ. ಸದಸ್ಯರಾದ ಬಿ.ಎನ್. ಪ್ರಕಾಶ್ರವರು ಅಧಿಕಾರ ಸ್ವೀಕರಿಸಿದರು. ಗೋಣಿಕೊಪ್ಪಲುವಿನ ಮಹಿಳಾ ಸಮಾಜದಲ್ಲಿ ಆಯೋಜನೆ ಗೊಂಡಿದ್ದ ಶ್ರೀ ಕಾವೇರಿ ದಸರಾ ಸಮಿತಿಯ ಮಹಾ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನೂತನ ಅಧ್ಯಕ್ಷ ಬಿ.ಎನ್.ಪ್ರಕಾಶ್ ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ಹಾಗೂ ಮಹಾಮಾರಿ ಕೊರೊನಾ ದಿಂದಾಗಿ ದಸರಾ ಕಾರ್ಯಕ್ರಮವು ತನ್ನ ಸಂಭ್ರಮವನ್ನು ಕಳೆದುಕೊಂಡಿತ್ತು. ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ವರ್ಷಂಪ್ರತಿ ಅತಿ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಉತ್ಸವವನ್ನು ಮತ್ತೊಮ್ಮೆ ಸಂಭ್ರಮದಿಂದ ಆಚರಿಸಲು ಈ ನಾಡಿನ ಜನರ ಸಹಕಾರ ಬೇಕಾಗಿದೆ. ವಿವಿಧ ಸಮಿತಿಗಳನ್ನು ಸದ್ಯದಲ್ಲಿಯೇ ರಚಿಸಲಾಗುವುದು ಎಂದರು.
ವಿಭಿನ್ನ ರೀತಿಯಲ್ಲಿ ದಸರಾವನ್ನು ಆಚರಿಸಲು ಎಲ್ಲಾ ರೀತಿಯ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ದಸರಾ ಸಮಿತಿಯಲ್ಲಿ ದುಡಿದ ಹಿರಿಯರ ಮಾರ್ಗದರ್ಶನ ಪಡೆದು ಈ ಬಾರಿಯ ದಸರಾವನ್ನು ವೈಭವಯುತವಾಗಿ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯನವರು ಗೋಣಿಕೊಪ್ಪ ದಸರಾಕ್ಕೆ ರೂ. 50 ಲಕ್ಷ ಅನುದಾನ ವನ್ನು ಮಂಜೂರು ಮಾಡಿಸಿದ್ದಾರೆ. ಇದರಿಂದ ಉತ್ತಮ ಕಾರ್ಯಕ್ರಮಗಳು ಮೂಡಿ ಬರಲು ಸಹಾಯವಾಗಲಿದೆ. ನಗರದಲ್ಲಿ 10 ದಿನಗಳ ಕಾಲ ಹಬ್ಬದ ಸಂಭ್ರಮ ಮನೆ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ದಶಮಂಟಪಗಳ ಅಧ್ಯಕ್ಷರುಗಳಾದ ಜಮ್ಮಡ ಅರಸು, ಸುರೇಶ್ರೈ, ಕಾಡ್ಯಮಾಡ ಚೇತನ್, ಸೇರಿದಂತೆ ಇನ್ನಿತರ ಪ್ರಮುಖರು ದಶಮಂಟಪ ಗಳಿಗೆ ನೀಡುವ ಅನುದಾನವನ್ನು ಆದಷ್ಟು ಬೇಗನೇ ಘೋಷಣೆ ಮಾಡಬೇಕು. ಇದರಿಂದ ದಶಮಂಟಪ ಗಳು ತಮ್ಮ ಮಂಟಪಗಳನ್ನು ಹೊರಡಿಸಲು ಯೋಜನೆ ರೂಪಿಸಲು ಅವಕಾಶವಾಗಲಿದೆ. ನವರಾತ್ರಿಯಂದು ಉತ್ತಮ ಮಂಟಪಗಳಿಗೆ ನೀಡುವ ಬಹುಮಾನದಲ್ಲಿ ಯಾವುದೇ ತಾರತಮ್ಯ ಆಗದಂತೆ ಸಮಿತಿಯು ಎಚ್ಚರಿಕೆ ವಹಿಸಬೇಕು. ನಿಪುಣತೆ ಹೊಂದಿರುವ ತೀರ್ಪುಗಾರರನ್ನು ನೇಮಕಗೊಳಿಸಬೇಕು. ದಶಮಂಟಪದ ಅಧ್ಯಕ್ಷರುಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತಾಗಬೇಕು ಎಂದು ಸುದೀರ್ಘವಾಗಿ ಚರ್ಚೆ ನಡೆಸಿದರು.
ಈ ವೇಳೆ ಸಮಜಾಯಿಸಿಕೆ ನೀಡಿದ ನೂತನ ಅಧ್ಯಕ್ಷ ಪ್ರಕಾಶ್ ದಶಮಂಟಪಗಳಿಗೆ ನೀಡುವ ಅನುದಾನದ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗು ವುದು. ನವರಾತ್ರಿಯಂದು ದಶಮಂಟಪಗಳಿಗೆ ನೀಡುವ ಬಹುಮಾನವನ್ನು ಪಾರದರ್ಶಕತೆ ಯಾಗಿ ನೋಡಿಕೊಳ್ಳಲಾಗುವುದು. ತೀರ್ಪುಗಾರರನ್ನು ನೇಮಿಸುವ ಸಂದರ್ಭ ದಶಮಂಟಪಗಳ ಅಧ್ಯಕ್ಷರು ಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಸಮಜಾಯಿಸಿಕೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಅವಕಾಶವಾಗಲಿದೆ. ನವರಾತ್ರಿಯಂದು ಉತ್ತಮ ಮಂಟಪಗಳಿಗೆ ನೀಡುವ ಬಹುಮಾನದಲ್ಲಿ ಯಾವುದೇ ತಾರತಮ್ಯ ಆಗದಂತೆ ಸಮಿತಿಯು ಎಚ್ಚರಿಕೆ ವಹಿಸಬೇಕು. ನಿಪುಣತೆ ಹೊಂದಿರುವ ತೀರ್ಪುಗಾರರನ್ನು ನೇಮಕಗೊಳಿಸಬೇಕು. ದಶಮಂಟಪದ ಅಧ್ಯಕ್ಷರುಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತಾಗಬೇಕು ಎಂದು ಸುದೀರ್ಘವಾಗಿ ಚರ್ಚೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ಬೋಪಣ್ಣ, ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಸೇರಿದಂತೆ ಇನ್ನಿತರ ಪ್ರಮುಖರು ದಸರಾ ಉತ್ಸವದ ಯಶಸ್ವಿಗೆ ಕೈ ಜೋಡಿಸುವಂತೆ ಕೋರಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆÀ ಸವಿತ ದಸರಾ ಸಮಿತಿಯ ಪ್ರಮುಖರಾದ ಮಲ್ಚೀರ ಗಾಂಧಿ ದೇವಯ್ಯ, ಕಾವೇರಿ ದಸರಾ ಸಮಿತಿಯ ಪ್ರಮುಖರಾದ ರಾಣಿ ನಾರಾಯಣ್, ಮಾಚಿಮಡ ಅನಿತ, ಚೇಂದಂಡ ಸುಮಿ ಸುಬ್ಬಯ್ಯ, ಕೊಣಿಯಂಡ ಬೋಜಮ್ಮ, ಧ್ಯಾನ್ ಸುಬ್ಬಯ್ಯ, ಪ್ರಭಾಕರ್ ನೆಲ್ಲಿತ್ತಾಯ ಮುಂತಾದವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ರಾಜೇಶ್, ಮನ್ನಕ್ಕಮನೆ ಸೌಮ್ಯ ಬಾಲು, ಜಿ.ಕೆ.ಗೀತಾ, ಎಂ. ಮಂಜುಳ, ರಾಮ್ದಾಸ್ ಶರತ್ಕಾಂತ್, ಹಕೀಮ್, ರತಿ ಅಚ್ಚಪ್ಪ, ಧನಲಕ್ಷ್ಮಿ ಸೇರಿದಂತೆ ದಶಮಂಟಪಗಳ ಪ್ರಮುಖರಾದ ಕರ್ಣರಾಜ್, ಅನೀಶ್, ಕಿರಣ್, ಕಂದಾದೇವಯ್ಯ, ಅಜ್ಜಿಕುಟ್ಟಿರ ಸಜನ್, ಮಂಜುರೈ, ಶ್ರೀನಿ, ಅರಸು ಅಪ್ಪಣ್ಣ ಮುಂತಾದವರು ಹಾಜರಿದ್ದರು. ದಸರಾ ಸಮಿತಿಯ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು.