ಪೊನ್ನAಪೇಟೆ, ಆ.೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಬಾಲಕರ ಮತ್ತು ಬಾಲಕಿಯರ ಹಾಕಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡರೆ, ಮಹಿಳೆಯರ ವಿಭಾಗದಲ್ಲಿ ಮಡಿಕೇರಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಚಾಂಪಿಯನ್ ಪಟ್ಟ ಅಲಂಕರಿಸಿತು.
ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಮಡಿಕೇರಿ ಫೀ.ಮಾ.ಕೆ.ಎಂ.ಕಾಲೇಜು ತಂಡಗಳು ತೀವ್ರ ಹೋರಾಟ ನಡೆಸಿದವು. ಅಂತಿಮವಾಗಿ ಪೆನಾಲ್ಟಿ ಶೂಟ್ ಔಟ್ ನ ಕೊನೆಯ ಅವಕಾಶದಲ್ಲಿ ಕಾವೇರಿ ಕಾಲೇಜಿನ ವಿನೀಶ್ ಪೂವಯ್ಯ ಮಿಂಚಿನ ಗೋಲು ಬಾರಿಸುವ ಮೂಲಕ ಕಾವೇರಿ ಕಾಲೇಜಿಗೆ ಗೆಲುವು ತಂದು ಕೊಟ್ಟರು. ಮಡಿಕೇರಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು
(ಮೊದಲ ಪುಟದಿಂದ) ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ಹಾಕಿ ಫೈನಲ್ ಪಂದ್ಯದಲ್ಲಿ ಮಂಗಳೂರು ವಿ.ವಿ. ಕಾಲೇಜು ವಿರುದ್ಧ ಮಡಿಕೇರಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ೨- ೦ ಗೋಲಿನ ಅಂತರದಿAದ ಸುಲಭ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೆ ಭಾಜನವಾ ಯಿತು. ಮಂಗಳೂರು ವಿ.ವಿ ಕಾಲೇಜು ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ವೀರಾಜಪೇಟೆ ಕಾವೇರಿ ಕಾಲೇಜು ತೃತೀಯ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ಸೆಮಿಫೈನಲ್ನಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ವಿರುದ್ಧ ಮಂಗಳೂರು ವಿವಿ ಕಾಲೇಜು ಪೆನಾಲ್ಟಿ ಶೂಟ್ಔಟ್ ನಲ್ಲಿ ೪-೨ ಗೋಲುಗಳ ಅಂತರದ ಜಯಸಾಧಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ವಿಜೇತ ತಂಡದ ಪರ ಮಿಲನ, ಪೊನ್ಮದಿ, ಆಗ್ನಿಶ್, ಪವಿತ್ರ ತಲಾ ಒಂದೊAದು ಗೋಲು ಬಾರಿಸಿದರು. ಆಳ್ವಾಸ್ ತಂಡದ ಪರ ಲೀಲಾವತಿ ೨ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಮತ್ತೊಂದು ಸೆಮಿಫೈನಲ್ ನಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ವೀರಾಜಪೇಟೆ ಕಾವೇರಿ ಕಾಲೇಜು ವಿರುದ್ಧ ೪-೦ ಅಂತರದ ಸುಲಭ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು. ವಿಜೇತ ತಂಡದ ಪರ ಅಕ್ಷರ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದರೆ, ಕಲಾ ೧ ಗೋಲು ಹೊಡೆದರು.
ಪುರುಷರ ಸೆಮಿಫೈನಲ್ ಪಂದ್ಯ ದಲ್ಲಿ ಮಡಿಕೇರಿ ಫೀ. ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು, ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ವಿರುದ್ಧ ೧-೦ ಗೋಲಿನಿಂದ ರೋಚಕ ಜಯಗಳಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿತು. ವಿಜೇತ ತಂಡದ ಪರ ಮಿಲನ್ ಬೋಪಣ್ಣ ಗೆಲುವಿನ ಗೋಲು ಬಾರಿಸಿದರು. ಮತ್ತೊಂದು ರೋಮಾಂಚಕಾರಿ ಸೆಮಿಫೈನಲ್ ಪಂದ್ಯದಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವಿರುದ್ಧ ವೀರಾಜಪೇಟೆ ಕಾವೇರಿ ಕಾಲೇಜು ೨-೧ ಅಂತರದ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ವೀರಾಜಪೇಟೆ ಕಾವೇರಿ ಕಾಲೇಜು ಪರ ಚೇತನ್ ೨ ಗೋಲು ಬಾರಿಸಿದರೆ, ಮೂರ್ನಾಡ್ ಕಾಲೇಜು ಪರ ಅಯ್ಯಪ್ಪ ೧ಗೋಲು ಬಾರಿಸಿದರು.
ವೈಯಕ್ತಿಕ ಪ್ರಶಸ್ತಿ
ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಗೋಲ್ಕೀಪರ್ ಮಂಗಳೂರು ವಿ.ವಿ.ಕಾಲೇಜು ಕುಮುದ, ಬೆಸ್ಟ್ ಡಿಫೆಂಡರ್ ಮಡಿಕೇರಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ದೀಪ್ತಿ, ಬೆಸ್ಟ್ ಫಾರ್ವಡ್ ಮಂಗಳೂರು ವಿ.ವಿ. ಕಾಲೇಜಿನ ಮಿಲನ, ಬೆಸ್ಟ್ ಹಾಫ್ ಆಳ್ವಾಸ್ ಕಾಲೇಜಿನ ಲೀಲಾವತಿ, ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಮಡಿಕೇರಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಲಿಖಿತ ಭಾಜನರಾದರು. ಪುರುಷರ ವಿಭಾಗದಲ್ಲಿ ಬೆಸ್ಟ್ ಗೋಲ್ಕೀಪರ್ ವೀರಾಜಪೇಟೆ ಕಾವೇರಿ ಕಾಲೇಜಿನ ನಿಖಿಲ್, ಬೆಸ್ಟ್ ಡಿಫೆಂಡರ್ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಜೋಷಿತ್, ಬೆಸ್ಟ್ ಫಾರ್ವಡ್ ಮಡಿಕೇರಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ನಾಣಯ್ಯ, ಬೆಸ್ಟ್ ಹಾಫ್ ಮಡಿಕೇರಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಮಿಲನ್, ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ವೀರಾಜಪೇಟೆ ಕಾವೇರಿ ಕಾಲೇಜಿನ ವಿನೀಶ್ ಪೂವಯ್ಯ ಪಡೆದುಕೊಂಡರು.
ಕೆಜಿಬಿ ಚಾಲನೆ
ಪಂದ್ಯಾವಳಿಯ ಸಂದರ್ಭ ಮೈದಾನಕ್ಕೆ ಭೇಟಿ ನೀಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಕಿ ಸ್ಟಿಕ್ನಿಂದ ಚೆಂಡನ್ನು ತಳ್ಳುವ ಮೂಲಕ ಮಹಿಳೆಯರ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಜಿ.ಪಂ.ಸದಸ್ಯ ಶಶಿ ಸುಬ್ರಮಣಿ, ಕೆ.ಪಿ.ಬೋಪಣ್ಣ, ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಇನ್ನಿತರರು ಇದ್ದರು.
ಸಮಾರೋಪ: ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಕುಲ್ಲಚಂಡ ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಈ ಸಂಧರ್ಭ ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಶಂಕರನಾರಾಯಣ, ಅಂರ್ರಾಷ್ಟಿçÃಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ, ಸ್ಥಳೀಯರಾದ ಮೂಕಳೇರ ಭೀಮಯ್ಯ, ಮಂಗಳೂರು ವಿವಿಯ ವೀಕ್ಷಕ ಎವರೆಸ್ಟ್ ರೋಡ್ರಿಗಸ್, ಪಂದ್ಯಾವಳಿ ಸಂಚಾಲಕ ಕೆ.ಎಸ್. ತಮ್ಮಯ್ಯ, ಕಾವೇರಿ ಕಾಲೇಜು ಐಕ್ಯೂಎಸಿ ಸಂಚಾಲಕಿ ಡಾ. ವೀಣಾ, ಉಪನ್ಯಾಸಕರಾದ ಡಾ.ಆನಂದ ಕಾರ್ಲ, ಬೆನಡಿಕ್ಟ್ ಸಾಲ್ಡಾನ, ರಾಘವೇಂದ್ರ, ಸೋಮಣ್ಣ, ಪ್ರಿಯ, ನಿರ್ಮಿತ ಇನ್ನಿತರರು ಇದ್ದರು. ತೀರ್ಪುಗಾರರಾಗಿ ಕಂಬೀರAಡ ಬೋಪಣ್ಣ, ಹೆಚ್.ಎನ್. ಗುರುಪ್ರಸಾದ್, ಮಿನ್ನಂಡ ಜೋಯಪ್ಪ, ಕೆ.ಎಸ್. ತಮ್ಮಯ್ಯ, ಮೂಕಳಮಾಡ ಗಣಪತಿ, ಅರುಣ, ಮಲ್ಲಮಾಡ ಸಂತೋಷ್ ಕಾರ್ಯನಿರ್ವಹಿಸಿದರು.