(ಕಾಯಪAಡ ಶಶಿ ಸೋಮಯ್ಯ)

ಮಡಿಕೇರಿ, ಆ. ೨೮: ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಹಾಕಿ, ಫುಟ್ಬಾಲ್, ಥ್ರೋಬಾಲ್, ಶಟಲ್, ವಾಲಿಬಾಲ್, ಕಬಡ್ಡಿ ಸೇರಿದಂತೆ ವಿವಿಧ ರೀತಿಯ ಪಂದ್ಯಾವಳಿಗಳು ನಡೆದುಕೊಂಡು ಬರುತ್ತಿವೆ. ಇವು ವಿವಿಧ ಜನಾಂಗಗಳ ನಡುವೆ, ಸಂಘ-ಸAಸ್ಥೆ, ಕ್ಲಬ್‌ಗಳ ನಡುವೆ ನಡೆದಿವೆ. ಕ್ರಿಕೆಟ್ ಪಂದ್ಯಾವಳಿಯAತೂ ಎಲ್ಲಾ ಕ್ರೀಡೆಗಳಿಗಿಂತ ಹೆಚ್ಚಾಗಿ ಜರುಗುತ್ತವೆ...

ಆದರೆ ಈ ತನಕ ಎಲ್ಲೂ ಮಹಿಳೆಯರಿಗೇ ಸೀಮಿತವಾದ ಮಹಿಳಾ ಕ್ರಿಕೆಟ್ ಪಂದ್ಯಾಟ ಜಿಲ್ಲೆಯಲ್ಲಿ ನಡೆದಿರಲಿಲ್ಲ. ಇದೀಗ ಚೆಟ್ಟಳ್ಳಿಯ ಅರ‍್ಸ್ ಮಹಿಳಾ ಕ್ಲಬ್ ಸಾಹಸಕ್ಕೆ ಮುಂದಾಗಿದೆ.

‘ಕೈಲ್‌ಪೊಳ್ದ್’ ಅಂಗವಾಗಿ ಈ ವಿಶೇಷ ಪಂದ್ಯಾವಳಿ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಸೆ. ೨೪ ರಂದು ಆಯೋಜಿತವಾಗಿದೆ. ಅರ‍್ಸ್ ಮಹಿಳಾ ಕ್ಲಬ್‌ನ ಸದಸ್ಯೆಯರು ಸುಮಾರು ರೂ. ೨ ಲಕ್ಷ ವೆಚ್ಚದಲ್ಲಿ ಈ ಕ್ರೀಡೋತ್ಸವಕ್ಕೆ ಸಿದ್ಧತೆ ನಡೆಸಿದೆ. ಈ ತನಕ ಇತರ ಕ್ರೀಡೆ, ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಅರ‍್ಸ್ ಕ್ಲಬ್ ಇದೀಗ ಮಹಿಳೆಯರನ್ನೂ ಕ್ರಿಕೆಟ್ ಕ್ರೀಡೆಯತ್ತ ಆಕರ್ಷಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ, ದೇಶವನ್ನು ಪ್ರತಿನಿಧಿಸಲು ಇತರ ಕ್ರೀಡೆಗಳಂತೆ ಕೊಡಗಿನಿಂದಲೂ ಯುವತಿಯರನ್ನು ಪ್ರೇರೆಪಿಸುವ

(ಮೊದಲ ಪುಟದಿಂದ) ಚಿಂತನೆಯೊAದಿಗೆ ಪ್ರಥಮ ಬಾರಿಗೆ ಈ ಸಾಹಸಕ್ಕೆ ಮುಂದಾಗಿರುವುದಾಗಿ ಕ್ಲಬ್‌ನ ಅಧ್ಯಕ್ಷೆ ಐಚೆಟ್ಟಿರ ಸುನಿತಾ ಮಾಚಯ್ಯ ಹಾಗೂ ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಅವರುಗಳು ತಿಳಿಸಿದ್ದಾರೆ.

ಉತ್ತಮ ಸ್ಪಂದನ

ಕ್ಲಬ್‌ನ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನ ದೊರೆತಿದೆ. ಕ್ಲಬ್ ೧೬ ತಂಡಗಳಿಗೆ ಈ ಪಂದ್ಯಾವಳಿ ನಡೆಸುವ ಚಿಂತನೆ ಮಾಡಿದ್ದು, ಈಗಾಗಲೇ ೧೬ ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಈ ಬಾರಿ ೨೫ ವಯಸ್ಸು ಮೇಲ್ಪಟ್ಟವರಿಗೆ ಎಂದು ಕ್ಲಬ್ ಉದ್ದೇಶಿಸಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಇದನ್ನು ಆಯೋಜಿಸುವ ಚಿಂತನೆ ಇರುವುದಾಗಿ ಶೋಭಾ ಚಂಗಪ್ಪ ತಿಳಿಸಿದರು.

ಕೆಲವು ಕ್ಲಬ್‌ಗಳು ಹೊಸ ಸದಸ್ಯರನ್ನು ಮಾಡಿ ತಂಡವನ್ನು ಸಿದ್ಧಪಡಿಸಿದ್ದರೆ, ಇನ್ನು ಕೆಲವು ಕ್ಲಬ್‌ಗಳು ಆರ್ಥಿಕವಾಗಿ ಹಣ ಸಂಗ್ರಹಿಸಿ ತಂಡ ಸಿದ್ಧಪಡಿಸಿವೆ. ಮಹಿಳಾ ಆಟಗಾರರನ್ನು ಈ ಪಂದ್ಯಾವಳಿಯಲ್ಲಿ ಉತ್ತೇಜಿಸಿ, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಲು ಹೆಸರು ನೋಂದಾಯಿಸಿಕೊAಡಿರುವ ತಂಡಗಳು ಸಿದ್ಧತೆ ನಡೆಸಿದ್ದರೆ, ದೊರೆತಿರುವ ಉತ್ತಮ ಪ್ರತಿಸ್ಪಂದನದಿAದ ಹರ್ಷಿತರಾಗಿರುವ ಆಯೋಜಕರು ಪಂದ್ಯಾಟದ ಯಶಸ್ಸಿಗೆ ಮುಂದಾಗಿದ್ದಾರೆ. ಸುಮಾರು ರೂ. ೨ ಲಕ್ಷ ವೆಚ್ಚದಲ್ಲಿ ಪಂದ್ಯಾವಳಿ ನಡೆಯಲಿದೆ.

ನಗದು ಬಹುಮಾನ, ಸಾಧಕ ಕ್ರೀಡಾಪಟುಗಳಿಗೆ ಬಹುಮಾನ ಸೇರಿದಂತೆ ಪ್ರೇಕ್ಷಕರಿಗೂ ವಿವಿಧ ಮನೋರಂಜನಾ ಸ್ಪರ್ಧೆ, ಊಟದ ವ್ಯವಸ್ಥೆ ಮೂಲಕ ಪಂದ್ಯಾವಳಿ ಜರುಗಲಿದೆ.