ಪೊನ್ನಂಪೇಟೆ, ಆ. ೨೭: ಪೊನ್ನಪೇಟೆ ತಾಲೂಕಿನ ಬೇಗೂರು ಗ್ರಾಮದ ಪಟ್ಟಗೇರಿ ಅಂಬಲ ಒಕ್ಕೂಟದ ವತಿಯಿಂದ ಬೇಗೂರಿನ ಬೆಂಜAಡ ಪ್ರೇಮ ಶಂಕರು ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ, ಬೇಗೂರು ಗ್ರಾಮ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಬೇಗೂರು ಗಾಮಸ್ಥರು ಹಾಗೂ ಅಲ್ಲಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು ಸಂಭ್ರಮಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಯಾಗಿ ಆಗಮಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆ ಗ್ರಾಮೀಣ ಕ್ರೀಡೆಗಳು, ಹಳೆಯ ಆಚಾರ, ಪದ್ಧತಿಗಳು ಮರೆಯಾಗು ತ್ತಿರುವ ಇಂದಿನ ಸಂದÀರ್ಭದಲ್ಲಿ ಬೇಗೂರು ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬರುತ್ತಿರುವುದು ಉತ್ತಮ ಬೆಳವಣಿಗೆ. ಇಂದಿನ ಯುವ ಸಮೂಹ ಹೊಸತನದ ಜೊತೆ ಜೊತೆಯಲ್ಲೇ, ಮಣ್ಣು ಹಾಗೂ ಪ್ರಕೃತಿಯನ್ನು ರಕ್ಷಣೆ ಮಾಡುತ್ತಾ, ಪದ್ಧತಿ ಪರಂಪರೆಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ ಎಂದರು. ಇತ್ತೀಚೆಗೆ ಕೊಡಗಿನ ಕೆಲವು ಭಾಗಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಗದ್ದೆ ಕೃಷಿಯನ್ನು ಜನರು ಕೈಬಿಟ್ಟಿದ್ದಾರೆ.

ಆದರೆ ಬೇಗೂರು ಗ್ರಾಮಸ್ಥರು ತಮ್ಮ ಗದ್ದೆಗಳನ್ನು ಪಾಳು ಬಿಡದೆ ಪ್ರತಿ ವರ್ಷ ಗದ್ದೆ ಕೃಷಿ ಮೇಲಿನ ಪ್ರೀತಿಯಿಂದ ಗದ್ದೆ ನಾಟಿ ಮಾಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂಧರ್ಭ ಬೇಗೂರಿನ ಪ್ರಗತಿಪರ ಕೃಷಿಕ ಅರಮಣಮಾಡ ವಿಜಯ್ ಹಾಗೂ ಪತ್ರಕರ್ತ ಎಂ.ಎA. ಚನ್ನನಾಯಕ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಸ್ಪರ್ಧೆಯ ವಿಜೇತರು : ಕೆಸರುಗದ್ದೆ ಫುಟ್ಬಾಲ್‌ನಲ್ಲಿ ಕೊಟ್ಟಂಗಡ ರಾಜ ಸುಬ್ಬಯ್ಯ ತಂಡ ಪ್ರಥಮ, ಅರಮಣಮಾಡ ರಾಜ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗಜಗ್ಗಾಟ ಸ್ಪರ್ಧೆ ಪುರುಷರ ವಿಭಾಗದಲ್ಲಿ ಚೋಡುಮಾಡ ತೇಜ ಸುಬ್ಬಯ್ಯ ತಂಡ ಪ್ರಥಮ, ಮಲ್ಲಂಡ ದನಿಶ್ ಸುಬ್ರಮಣ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ರಮ್ಯಾ ತಂಡ ಪ್ರಥಮ ಸ್ಥಾನ, ಜನನಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಕೆಸರುಗದ್ದೆ ಓಟದ ಸ್ಪರ್ಧೆ ಪುರುಷರ ವಿಭಾಗದಲ್ಲಿ ಮಲ್ಲಂಡ ಪೊನ್ನಪ್ಪ ಪ್ರಥಮ, ಮಲ್ಲಂಡ ಸುಬ್ರಮಣಿ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಬೆಂಜAಡ ಜಶ್ಮಿ ಪ್ರಥಮ, ಕಾವೇರಮ್ಮ ದ್ವಿತೀಯ ಸ್ಥಾನ ಪಡೆದುಕೊಂಡರು. ಬೇಗೂರು ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಹಿರಿಯ ಬಾಲಕರ ವಿಭಾಗದಲ್ಲಿ ಸಂತೋಷ್ ಪ್ರಥಮ, ವಿಷ್ಣು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ನೇತ್ರ ಪ್ರಥಮ, ಅನಿತ ದ್ವಿತೀಯ, ಕಿರಿಯ ಬಾಲಕರ ವಿಭಾಗದಲ್ಲಿ ಸಂಜು ಪ್ರಥಮ, ಅರ್ಜುನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕಾವೇರಿ ಪ್ರಥಮ, ಕಾವ್ಯ ದ್ವಿತೀಯ ಸ್ಥಾನ ಪಡೆದುಕೊಂಡರು.

ವಿಷದ ಚೆಂಡು ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಚೋಡುಮಾಡ ತೇಜ ಪ್ರಥಮ, ಬೈರಂಡ ಮುತ್ತಣ್ಣ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಚೋಡುಮಾಡ ಕಸ್ತೂರಿ ಪ್ರಥಮ, ಕಾವೇರಮ್ಮ ದ್ವಿತೀಯ, ಮಕ್ಕಳ ವಿಭಾಗದಲ್ಲಿ ನೇತ್ರ ಪ್ರಥಮ, ಸಂತೋಷ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಕೊಂಡಿದ್ದ ಬೇಗೂರು ಪಟ್ಟಗೇರಿ ಅಂಬಲ ಒಕ್ಕೂಟದ ಅಧ್ಯಕ್ಷ ಮತ್ರಂಡ ರಾಜ ಮುತ್ತಪ್ಪ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು. ಈ ಸಂಧರ್ಭ ಒಕ್ಕೂಟದ ಕಾರ್ಯದರ್ಶಿ ಚೋಡುಮಾಡ ಸುಬ್ಬಯ್ಯ, ಸಲಹೆಗಾರರಾದ ಮತ್ರಂಡ ತಿಮ್ಮಯ್ಯ, ಕೇಚೆಟ್ಟಿರ ಶರಣು, ಮಾಜಿ ಗ್ರಾ.ಪಂ. ಅಧ್ಯಕ್ಷೆ ಬೆಂಜಾAಡ ಪಾರ್ವತಿ, ದಾನಿ ಕಾಕಮಾಡ ಚಂಗಪ್ಪ, ಬೇಗೂರು ಸರ್ಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಬೇಗೂರು ಗ್ರಾಮಸ್ಥರು ಇದ್ದರು.