ಮಡಿಕೇರಿ, ಆ. ೨೭: ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸೋಮವಾರ ನೀಡಲಾಗುತ್ತಿದ್ದ ವಾರದ ರಜೆ ದಿನವನ್ನು ಬದಲಿಸಿ, ಮುಂದಿನ ವಾರದಿಂದ ಪ್ರತೀ ಮಂಗಳವಾರ, ವಾರದ ರಜೆ ನೀಡಲು ಇತ್ತೀಚೆಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆ ದಿಸೆಯಲ್ಲಿ ಪ್ರವಾಸಿ ಸಂದರ್ಶಕರ ಬೇಡಿಕೆಗೆ ಅನುಗುಣವಾಗಿ ಸೋಮವಾರ ಮ್ಯೂಸಿಯಂ ತೆರೆದು, ಪ್ರತಿ ಮಂಗಳವಾರ ತಿಮ್ಮಯ್ಯ ಮ್ಯೂಸಿಯಂಗೆ ವಾರದ ರಜೆ ನೀಡಲಾಗುತ್ತದೆ.

ಆದ್ದರಿಂದ ಇದೇ ತಾ. ೨೯ ರಿಂದ ಅನ್ವಯವಾಗುವಂತೆ ಪ್ರತೀ ಸೋಮವಾರ ತಿಮ್ಮಯ್ಯ ಸ್ಮಾರಕ ಭವನ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.