ಧ್ಯಾನ್ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಒಬ್ಬ ಮಹಾನ್ ಆಟಗಾರ. ಹಾಕಿ ಆಟದ ಮಾಂತ್ರಿಕ. ಇಡೀ ವಿಶ್ವದಲ್ಲೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರಕಾರವು ಇವರಿಗೆ ‘ಪದ್ಮ ವಿಭೂಷಣ’ ಪ್ರಶಸ್ತಿಯನ್ನು ನೀಡಿದೆ. ‘ದಾದಾ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ‘ಧ್ಯಾನ್’ ಅವರನ್ನು ಅವರ ಕೋಚ್ ‘ಪಂಕಜ್ ಗುಪ್ತ’ ಅವರು ‘ಚಾಂದ್’ (ಚಂದ್ರ) ಎಂದು ಕರೆಯುತ್ತಿದ್ದರು. ಅಲ್ಲದೇ ತಮ್ಮ ಶಿಷ್ಯ ಚಂದ್ರನAತೆ ಬೆಳಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರು.
ಉತ್ತರ ಪ್ರದೇಶದ ಪ್ರಯಾಗ್ನಲ್ಲಿ ರಜಪೂತ್ ಕುಟುಂಬವೊAದರಲ್ಲಿ ಆಗಸ್ಟ್ ೨೯, ೧೯೦೫ ರಲ್ಲಿ ಧ್ಯಾನ್ಚಂದ್ ಜನಿಸಿದರು. ಅವರ ತಂದೆ ಬ್ರಟೀಷ್ ಸೈನ್ಯದಲ್ಲಿ ಹವಾಲ್ದಾರ್ ಆಗಿದ್ದರು. ಬಳಿಕ ಕುಟುಂಬವು ‘ಝಾನ್ಸಿ’ ನಗರಕ್ಕೆ ವಲಸೆ ಬಂದಿತು.
ಹಾಕಿ ಆಟಗಾರನಾಗಿ: ಧ್ಯಾನ್ಚಂದ್ ಶಾಲೆಯಲ್ಲಿ ಓದಿದ್ದು ಅತೀ ಕಡಿಮೆ. ಹದಿನಾರನೇ ವಯಸ್ಸಿಗೇ ಸೈನ್ಯಕ್ಕೆ ಸೇರಿದರು. ಕ್ರೀಡೆಯಲ್ಲೂ ಅಂತಹ ವಿಶೇಷ ಪರಿಣತಿ ಇರಲಿಲ್ಲ. ಸೈನ್ಯದಲ್ಲಿ ಸ್ನೇಹಪೂರ್ವ ಪಂದ್ಯಗಳಲ್ಲಿ ಎಲ್ಲರೊಂದಿಗೆ ಆಡುತ್ತಿದ್ದರು. ೧೪ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ನನ್ನು ಸುಬೇದಾರ್ ಮೇಜರ್ ಭೋಲೆ ತಿವಾರಿಯವರು ಗಮನಿಸಿದರು.
ಈತ ಆಡುವಂತಹ ಆಟದಲ್ಲಿ ಏನೋ ವಿಶೇಷವಿದೆ ಎಂದು ಕಂಡು ಚಂದ್ ಅವರಿಗೆ ವೈಯಕ್ತಿಕವಾಗಿ ನಿಗಾವಹಿಸಿ ಹಾಕಿ ಆಟದ ವಿಶೇಷತೆಗಳ ಬಗ್ಗೆ ಉತ್ತಮ ತರಬೇತಿ ನೀಡಿದರು. ಹೀಗೆ ಅವರು ಅಂದಿನ ಭಾರತೀಯ ಸೈನ್ಯದಲ್ಲಿ ಹಾಗೂ ವಿವಿಧ ವಯಗಳ ತಂಡಗಳ ಮಟ್ಟದಲ್ಲಿ ಆಡತೊಡಗಿದ್ದು, ಮುಂದೆ ಅಂರ್ರಾಷ್ಟಿçÃಯ ಮಟ್ಟದ ಆಟಗಾರರಾಗಿ ರೂಪುಗೊಂಡರು.
ಅAರ್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ: ೧೯೨೮ ರಲ್ಲಿ ಭಾರತೀಯ ಹಾಕಿ ತಂಡವನ್ನು ಸೇರಿದ ಧ್ಯಾನ್ಚಂದ್ ಅವರಿಗೆ ನೆದರ್ಲ್ಯಾಂಡ್ನ ಆಮ್ಸ್ಟೆರ್ ಡ್ಯಾಮ್ನಲ್ಲಿ ಆಯೋಜಿಸಲಾದ ೧೯೮೨ ರ ಬೇಸಿಗೆಯ ಒಲಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ೩-೦ ಗೋಲುಗಳಲ್ಲಿ ೨ನ್ನು ಗಳಿಸುವ ಮೂಲಕ ಭಾರತೀಯ ತಂಡಕ್ಕೆ ನೆದರ್ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ಚಂದರ ಆಟಕ್ಕೆ ನೆರೆದ ಜನರು ಬೆರಗಾದರು.
ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ ಸ್ವರ್ಣ ಪದಕ ದೊರೆಯಿತು. ಧ್ಯಾನ್ಚಂದ್ ೧೯೩೨ ಹಾಗೂ ೧೯೩೬ ರಲ್ಲಿ ನಡೆದ ಒಲಂಪಿಕ್ಸ್ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರು ಒಲಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದ್ದರು. ಆಡಿದ ಮೂರು ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ ೩೩.
೧೯೩೬ ರ ಒಲಂಪಿಕ್ಸ್ ಪಂದ್ಯದಲ್ಲಿ ಭಾರತ ತಂಡವು ಜಯಗಳಿಸಿದ ನಂತರದಲ್ಲಿ ಎಲ್ಲೆಡೆಯಲ್ಲೂ ಧ್ಯಾನ್ಚಂದ್ ಅವರ ಹಾಕಿ ಮಾಂತ್ರಿಕತೆಯ ಆಟ ಪ್ರಸಿದ್ಧಿ ಪಡೆದು, ಪ್ರೇಕ್ಷಕರು ಇವರ ಆಟ ನೋಡಲು ಮುಗಿಬೀಳುತ್ತಿದ್ದರು. ಒಂದು ಜರ್ಮನ್ ಪತ್ರಿಕೆ ನೀಡಿದ ವರದಿ ಹೀಗಿತ್ತು ‘ಹಾಕಿ ಆಟ ಇದೀಗ ಮ್ಯಾಜಿಕ್ ಷೋ ಕೂಡಾ ಆಗಿದೆ. ಭಾರತೀಯ ಹಾಕಿ ಆಟದ ಮ್ಯಾಜಿಕ್ ವ್ಯಕ್ತಿಯಾದ ಧ್ಯಾನ್ಚಂದ್ ಅವರ ಆಟ ನೋಡಲಿಕ್ಕೆ ಇಂದು ಹಾಕಿ ಕ್ರೀಡಾಂಗಣಕ್ಕೆ ತಪ್ಪದೆ ಬನ್ನಿ’.
ಬರ್ಲಿನ್ ಒಲಂಪಿಕ್ಸ್ ಕ್ರೀಡೆಗಳಲ್ಲಿ ಧ್ಯಾನ್ಚಂದ್ ಅವರ ಆಟ ಕಂಡ ಅಡೋಲ್ಪ್ ಹಿಟ್ಲರ್ ಧ್ಯಾನ್ಚಂದ್ ಅವರಿಗೆ ಜರ್ಮನಿ ತಂಡದ ಪರವಾಗಿ ಆಡಲು ನೀಡಿದ ಪ್ರಲೋಭನೆಗಳೆಂದರೆ ‘ಬ್ರಿಟೀಷ್ ಸೇನೆಯಲ್ಲಿ ಮೇಜರ್ ಹುದ್ದೆ, ಜರ್ಮನಿಯ ಪೌರತ್ವ, ಕೊಲೋನೆಲ್ ಗೌರವದ ಕೊಡುಗೆ.’ ಆದರೆ ಇದನ್ನು ಧ್ಯಾನ್ಚಂದರು ಸ್ವೀಕರಿಸಲಿಲ್ಲ.
ಧ್ಯಾನ್ ಜನಪ್ರಿಯತೆ: ಧ್ಯಾನ್ಚಂದ್ ಅವರಿಗೆ ಭಾರತದಲ್ಲಿ ಅನೇಕ ಪುತ್ಥಳಿ ಇವೆ. ಆದರೆ ಅವರ ಪುತ್ಥಳಿಯನ್ನು ಮೊದಲು ಸ್ಥಾಪಿಸಿದ್ದು ಆಸ್ಟಿçÃಯಾದ ಮಿಯೆನ್ನಾದಲ್ಲಿ ಎಂದರೆ ಅಂರ್ರಾಷ್ಟಿçÃಯ ಮಟ್ಟದಲ್ಲಿ ಅವರ ಪ್ರಸಿದ್ಧಿ ಎಷ್ಟಿತ್ತೆಂಬುದನ್ನು ಊಹಿಸಬಹುದಾಗಿದೆ.
ವಿದಾಯ: ಎರಡನೇ ವಿಶ್ವ ಯುದ್ಧ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ಚಂದ್ ೧೯೪೮ ರಲ್ಲಿ ತಮ್ಮ ೪೨ನೇ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ಚಂದ್ರ ಸಹೋದರ ರೂಪ್ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ಚಂದ್ರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ಚಂದ್ ಜನ್ಮದಿನವಾದ ಆಗಸ್ಟ್ ೨೯ ರ ದಿನವನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ೧೯೨೯ ಡಿಸೆಂಬರ್ ೩ ರಂದು ನಿಧನರಾದರು. ಧ್ಯಾನ್ಚಂದ್ರAತಹ ದಂತಕತೆ, ಹಾಕಿ ಮಾಂತ್ರಿಕನಿಗೆ ಭಾರತರತ್ನವು ಸಿಗಬೇಕೆಂದು ಒತ್ತಾಯವಿದೆ. ವಿಶ್ವದ, ಭಾರತದ ಕ್ರೀಡಾ ಇತಿಹಾಸಕ್ಕೆ ಧ್ಯಾನ್ಚಂದ್ ಕೊಡುಗೆ ಅಪಾರ.
- ಹರೀಶ್ ಸರಳಾಯ, ಮಡಿಕೇರಿ.