ಸೋಮವಾರಪೇಟೆ, ಆ. ೨೭: ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟೀಷರ ಲಾಠಿ ಏಟಿಗೆ ಬಲಿಯಾದ ಕಿರಗಂದೂರು ಗ್ರಾಮದ ಸಿಂಗೂರು ಕುಟ್ಟಪ್ಪ ಅವರ ಕುಟುಂಬದ ಹಿರಿಯರನ್ನು ಸ್ವಾತಂತ್ರö್ಯ ಅಮೃತ ಮಹೋತ್ಸದ ಅಂಗವಾಗಿ ವಲಯ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಗ್ರಾಮದ ಸಮುದಾಯಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಂಗೂರು ಕುಟುಂಬದ ಎಂ. ಕೃಷ್ಣಕಾಂತ್ ಅರಸ್, ವಿಮಲಾ ಕೃಷ್ಣಕಾಂತ್, ಸುಶೀಲ ಮೇದಪ್ಪ ಅವರನ್ನು ಸನ್ಮಾನಿಸಲಾಯಿತು.

ಸ್ವಾತಂತ್ರö್ಯ ಅಮೃತ ಮಹೋತ್ಸದ ಸಮಿತಿ ಅಧ್ಯಕ್ಷ ಎಸ್.ಎಂ. ಚಂಗಪ್ಪ ಮಾತನಾಡಿ, ಮಡಿಕೇರಿಯಲ್ಲಿ ಸ್ವಾತಂತ್ರö್ಯ ಹೋರಾಟಗಾರರ ಸ್ಮಾರಕ ನಿರ್ಮಾಣವಾಗಬೇಕು. ಸ್ವಾತಂತ್ರö್ಯ ದಿನದಂದು ಅವರ ಸ್ಮರಣೆ ಆಗಬೇಕು. ನಿರ್ಮಾಣವಾಗುವ ಗಾಂಧಿ ಭವನದಲ್ಲಿ ಹೋರಾಟಗಾರರ ಭಾವಚಿತ್ರ ಹಾಗೂ ವಿವರವನ್ನು ಪ್ರಕಟಿಸಬೇಕು ಎಂದು ಜಿಲ್ಲಾಡಳಿತ ವನ್ನು ಒತ್ತಾಯಿಸಿದರು. ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಮುಖಂಡ ಡಾ. ಮಂಥರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಕಿರಗಂದೂರು ವಲಯ ಅಧ್ಯಕ್ಷ ಸುರೇಂದ್ರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್‌ಗೌಡ, ಮುಖಂಡರಾದ ಕೆ.ಎಂ. ಲೋಕೇಶ್, ಕೆ.ಪಿ. ಚಂದ್ರಕಲಾ, ಸಂಜಯ್ ಜೀವಿಜಯ, ಬಿ.ಇ. ಜಯೇಂದ್ರ, ಕೆ.ಎ. ಯಾಕೂಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.