ಮಡಿಕೇರಿ, ಆ. ೨೮: ನೆಲ್ಲಿಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಪುನಃ ಸಂಗಮ ಸಮಾರಂಭ ನೆಲ್ಲಿಹುದಿಕೇರಿಯ ಕೋಫಿಯ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಶಂಶೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಲೇಜಿನ ಮಾಜಿ ಪ್ರಾಂಶುಪಾಲ ಜಿ. ಕೆಂಚಪ್ಪ, ಉಪನ್ಯಾಸಕರಾದ ಜಸ್ತಿನ್ ಕೊರೆಯ, ಬಿ.ಜಿ. ಶಾಂತಿ, ರೋಹಿತ್ ಕೆ, ಲೋಕೇಶ ಪಿ.ವಿ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿದರು.

ನಂತರ ಮಾತನಾಡಿದ ಕೆಂಚಪ್ಪ ಅವರು, ಕಾಲೇಜಿನ ಅಭಿವೃದ್ಧಿಗೆ ವಿದ್ಯಾರ್ಥಿಗಳು ನೀಡಿದ ಸಹಕಾರವನ್ನು ಸ್ಮರಿಸಿದರು. ತಸ್ಲಿಮಾ ಪ್ರಾರ್ಥಿಸಿದರೆ, ಆಶಿಫ್ ಸ್ವಾಗತಿಸಿ, ಅಜಿತ್ ವಂದಿಸಿದರು.