ಆ. ೨೮: ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಸಮಿತಿಗಳು ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ವೀರಾಜಪೇಟೆ ಡಿ.ವೈ.ಎಸ್.ಪಿ. ನಿರಂಜನ್ ರಾಜೇ ಅರಸ್ ಹೇಳಿದರು.
ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ನಗರದ ೨೧ ಗಣಪತಿ ಪ್ರತಿಷ್ಠಾಪನ ಸಮಿತಿ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ೨೦ ಸಮಿತಿಗಳನ್ನು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡುವ ಮೊದಲು ಪುರಸಭೆ ಹಾಗೂ ಗ್ರಾಮೀಣ ಭಾಗದವರಿಗೆ ಗ್ರಾಮ ಪಂಚಾಯಿತಿ, ಸೆಸ್ಕಾಂ ಇಲಾಖೆ ಮತ್ತು ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದುಕೊಳ್ಳಬೇಕು ಹಾಗೂ ಮಂಟಪದ ಬಳಿ ಸಿ.ಸಿ. ಕ್ಯಾಮರ ಅಳವಡಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದರೆ ಗಣೇಶ ಸಮಿತಿಯವರೇ ಜವಾಬ್ದಾರರು ಎಂದಾಗ ಸಮಿತಿ ಸದಸ್ಯ ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ಅನೇಕ ವರ್ಷಗಳಿಂದಲೂ ವೀರಾಜಪೇಟೆಯಲ್ಲಿ ಅದ್ಧೂರಿಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ ಮತ್ತು ಕೋವಿಡ್ ಕಾರಣದಿಂದ ಸಾಧ್ಯವಾಗಿಲ್ಲ. ಆದರೆ ಈ ವರ್ಷದ ಹಬ್ಬಕ್ಕೆ ಅತಿಯಾದ ಕಾನೂನು ಹೇರಲಾಗುತ್ತಿದೆ ಎಂದಾಗ ಡಿವೈಎಸ್ಪಿ ನಿರಂಜನ್ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಕೋರಿದರು.
ಸರ್ಕಲ್ ಇನ್ಸ್ಪ್ಯೆಕ್ಟರ್ ಶಿವರುದ್ರ ಮಾತನಾಡಿ, ಶ್ರೀ ಗೌರಿ-ಗಣೇಶನ ಪ್ರತಿಷ್ಠಾಪನಾ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಬೆಳಿಗ್ಗೆ ೬ ಗಂಟೆಯಿAದ ರಾತ್ರಿ ೧೦ ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸುವುದು. ನಂತರ ಅವಕಾಶವಿಲ್ಲ, ಡಿ.ಜೆ.ಯನ್ನು ಕಡ್ಡಾಯವಾಗಿ ಬಳಸುವಂತಿಲ್ಲ. ಸಮಿತಿ ಸದಸ್ಯರು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದAತೆ ಎಚ್ಚರ ವಹಿಸಬೇಕು, ಹಬ್ಬದ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಗಡಿ ಭಾಗದ ಚೆಕ್ ಪೋಸ್ಟ್ಗಳಿಗೂ ಸೂಕ್ತ ಬಂದೂಬಸ್ತ್ ಏರ್ಪಡಿಸಲಾಗುವುದು. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದರು. ವೇದಿಕೆಯಲ್ಲಿ ನಗರ ಠಾಣಾಧಿಕಾರಿ ಶ್ರೀಧರ್ ಮತ್ತು ಮುತ್ತಣ್ಣ, ಗ್ರಾಮಾಂತರ ಠಾಣಾಧಿಕಾರಿ ರವಿಕುಮಾರ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಒಟ್ಟು ೪೧ ಸಮಿತಿ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.