ಮಡಿಕೇರಿ, ಆ. ೨೮: ಹಿಂದೂ ಮಲಯಾಳಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಓಣಂ ಹಬ್ಬದ ಪ್ರಯುಕ್ತವಾಗಿ ಓಣಂ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಿದೆ.
ಅತ್ತಂ ದಿನದಿಂದ ಮೊದಲುಗೊಂಡು ಪ್ರತಿ ದಿನ ಮನೆಯ ಮುಂದೆ ಹಾಕಿರುವ ಪೂಕಳಂನ ಮುಂದೆ ನಿಂತಿರುವ ಫೂÃಟೊವನ್ನು ಹಿಂದೂ ಮಲಯಾಳಿ ಸಂಘದ ವಾಟ್ಸ್ಆಪ್ ಗ್ರೂಪ್‌ನಲ್ಲಿ ಅಪ್ ಲೋಡ್ ಮಾಡುವುದು. ಹೀಗೆ ಹತ್ತು ದಿನಗಳವರೆಗೆ ತಪ್ಪದೆ ಆಕರ್ಷಕ ಪೂಕಳಂನ್ನು ಅಪ್ ಲೋಡ್ ಮಾಡಲಾಗಿರುವ ಸ್ಪರ್ಧಿಗೆ ಆಕರ್ಷಕ ಬಹುಮಾನವನ್ನು ನವೆಂಬರ್ ೧ ರಂದು ಹಿಂದೂ ಮಲಯಾಳಿ ಸಂಘದ ವತಿಯಿಂದ ಮಡಿಕೇರಿ ನಗರದ ಕಾವೇರಿ ಹಾಲ್‌ನಲ್ಲಿ ನಡೆಯಲಿರುವ ಓಣಾಘೋಷಂ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಮಾಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.