ಕೂಡಿಗೆ, ಆ. ೨೮: ಕುಶಾಲನಗರ ತಾಲೂಕು ನಾಡು ಕಚೇರಿ, ಕಂದಾಯ ಇಲಾಖೆ ವತಿಯಿಂದ ಗ್ರಾಮಾಂತರ ಪ್ರದೇಶಗಳಾದ ಕೂಡಿಗೆ, ಹೆಬ್ಬಾಲೆ ಶಿರಂಗಾಲ ತೊರೆನೂರು, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಮತದಾರರ ಚೀಟಿಗೆ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಗೌತಮ್ , ಸಚಿನ್, ಪೀರ್ ಮಹಮ್ಮದ್ ಸೇರಿದಂತೆ ಗ್ರಾಮ ಸಹಾಯಕರಾದ ಲೋಕೇಶ್ ಮುಂತಾದವರಿದ್ದರು.