ಮಡಿಕೇರಿ, ಆ. ೨೬: ಪುಟಾಣಿ ನಗರದ ಮುಖ್ಯರಸ್ತೆಯಲ್ಲಿ ಗರ್ಭ ಧರಿಸಿದ್ದ ಹಸುವೊಂದು ಚರಂಡಿಯಲ್ಲಿ ಬಿದ್ದು ಮೇಲೇಳಲಾಗದೆ ಸಿಲುಕಿ ಕೊಂಡಿತ್ತು. ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ವಾರ್ಡ್ನ ಸದಸ್ಯೆ ಮಂಜುಳಾ ಮುರುಗನ್ ಅವರ ಸಹಕಾರದೊಂದಿಗೆ ಸುತ್ತಮುತ್ತಲ ನಾಗರಿಕರೆಲ್ಲ ಸೇರಿ ಹಗ್ಗದ ಸಹಾಯ ದಿಂದ ಹಸುವನ್ನು ರಕ್ಷಿಸಿದರು.
ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತಾದರೂ, ಚರಂಡಿಯಿAದ ಮೇಲೆದ್ದ ಕೂಡಲೇ ಹಸು ತನ್ನ ಗುಂಪಿನೊAದಿಗೆ ಸೇರಿಕೊಂಡು ಮುಂದಕ್ಕೆ ಸಾಗಿತು. ರಕ್ಷಿಸಿದವರ ಮೇಲೆ ಕೃತಜ್ಞತಾ ಭಾವ ಅದರ ಕಣ್ಣಲ್ಲಿ ಕಾಣುತ್ತಿತ್ತು...!