ಗೋಣಿಕೊಪ್ಪಲು, ಆ. ೨೭: ಕೊಡಗು ಜಿಲ್ಲೆಯಲ್ಲಿ ೨೦೨೨ನೇ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ರೈತರು ಬೆಳೆದಿದ್ದ ಭತ್ತ, ಕಾಫಿ, ಕರಿಮೆಣಸು, ಅಡಿಕೆ ಇತ್ಯಾದಿ ಬೆಳೆಗಳು ಸಂಪೂರ್ಣ ಕೊಳೆ ರೋಗಕ್ಕೆ ತುತ್ತಾಗಿ ನಾಶವಾಗಿದೆ. ಇದರಿಂದ ರೈತರು ನಷ್ಟ ಅನುಭವಿಸಿದ್ದು ರೈತರಿಗೆ ಕೃಷಿ ಇಲಾಖೆ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಸಂಬಾರ ಮಂಡಳಿ ವತಿಯಿಂದ ರೈತರಿಗೆ ಕನಿಷ್ಟ ಪ್ರತಿ ಹೆಕ್ಟೇರ್ಗೆ ತಲಾ ೧ ಲಕ್ಷ ಪರಿಹಾರ ಹಣ ನೀಡಬೇಕೆಂದು ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿದೆ.
ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಕೊಡಗು ಜಿಲ್ಲಾ ಪದಾಧಿಕಾರಿಗಳು ಮಡಿಕೇರಿಯ ಜಿಲ್ಲಾಧಿಕಾರಿಯ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ರವರನ್ನು ಭೇಟಿ ಮಾಡಿ ಜಿಲ್ಲೆಯ ರೈತರು ಇತ್ತೀಚಿನ ಅತಿವೃಷ್ಠಿಯಿಂದ ಸಮಸ್ಯೆಗೆ ಒಳಗಾಗಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಪ್ರಸ್ತುತ ಸನ್ನಿವೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕಳೆದ ಸಾಲಿನಲ್ಲಿ ಕಾಫಿ ಮಂಡಳಿ ರೈತರಿಗೆ ಪರಿಹಾರ ನೀಡುವ ಸಂದರ್ಭ ವೀರಾಜಪೇಟೆ ತಾಲೂಕಿನ ಅಮ್ಮತ್ತಿನಾಡು ಹಾಗೂ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಕೇವಲ ಅರೇಬಿಕ ಫಸಲು ಮಾತ್ರ ನಷ್ಟವಾಗಿರುವುದಾಗಿ ಅಭಿಪ್ರಾಯಕ್ಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿಯ ರೋಬಸ್ಟ್ ಕಾಫಿ ಬೆಳೆದ ರೈತರು ಪರಿಹಾರದಿಂದ ವಂಚಿತರಾಗಿದ್ದರು.
ಈ ಬಗ್ಗೆ ಗೋಣಿಕೊಪ್ಪದ ಕಾಫಿ ಮಂಡಳಿ ಕಚೇರಿ ಮುಂದೆ ರೈತರು ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಇಲ್ಲಿಯ ತನಕ ಸರ್ಕಾರ ಆದ ಅನ್ಯಾಯವನ್ನು ಸರಿಪಡಿಸಿಲ್ಲ. ಅಮ್ಮತ್ತಿನಾಡು ಹಾಗೂ ಪೊನ್ನಂಪೇಟೆ ತಾಲೂಕು ರೋಬಸ್ಟಾ ಬೆಳೆಗಾರರಿಗೂ ಸಮಾನ ರೂಪದಲ್ಲಿ ಪರಿಹಾರ ನೀಡಬೇಕಾಗಿ ಮನವಿ ಮಾಡಿದ ಪದಾಧಿಕಾರಿಗಳು ಪ್ರಸ್ತುತ ಸಾಲಿನಲ್ಲಿ ಕಾಫಿ ಮಂಡಳಿ ರೈತರ ಪ್ರತಿ ತೋಟಕ್ಕೆ ಭೇಟಿ ನೀಡಿ, ಮಳೆ ಆಧಾರಿತ ಪರಿಹಾರ ನೀತಿಯನ್ನು ಬದಲಿಸಿ ಮಣ್ಣಿನ ಗುಣಮಟ್ಟಕ್ಕೆ ಅನುಸಾರವಾಗಿ ಪರಿಹಾರ ನೀಡಬೇಕೆಂದು ಗಮನ ಸೆಳೆದರು.
ರಾಜ್ಯ ಸರ್ಕಾರ ಕೇಂದ್ರದೊAದಿಗೆ ಚರ್ಚಿಸಿ ಕಾಡಾನೆ ಹಾವಳಿ ತಡೆಯುವ ಬಗ್ಗೆ ಸಮಗ್ರ ಅರಣ್ಯ ರಾಷ್ಟಿçÃಯ ನೀತಿ ರೂಪಿಸಬೇಕು. ಕಾಡಾನೆ ಹಾವಳಿಯಿಂದ ರೈತರಿಗೆ ಆಗುತ್ತಿರುವ ಪ್ರಾಣ ಹಾನಿ ಹಾಗೂ ಫಸಲು ನಾಶದ ಬಗ್ಗೆ ಕ್ರಮ ಕೈಗೊಳ್ಳಬೇಕು.
ರೈತರ ವಿವಿಧ ಕಾಫಿ ತೋಟದಲ್ಲಿ ೪೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆ ಕಂಡುಕೊAಡಿರುವ ಕಾಡಾನೆಗಳನ್ನು ಹಿಡಿದು ಅವುಗಳನ್ನು ಸ್ಥಳಾಂತರ ಮಾಡಬೇಕು. ಈ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಬೇಕು.
ವನ್ಯ ಪ್ರಾಣಿಗಳಿಂದ ರೈತರ ಆಸ್ತಿ, ಫಸಲು, ಪ್ರಾಣ ಹಾನಿಯಾದ ಸಂದರ್ಭ ಸರ್ಕಾರ ನೀಡುತ್ತಿರುವ ಪರಿಹಾರವನ್ನು ಹತ್ತುಪಟ್ಟು ಏರಿಕೆ ಮಾಡಬೇಕು. ಸರಕಾರ ಎನ್.ಡಿ. ಆರ್.ಎಫ್. ಎಸ್.ಡಿ.ಆರ್.ಎಫ್. ನೀತಿಯನ್ನು ಅನುಸರಿಸಬೇಕು. ಕೊಡಗು ಜಿಲ್ಲೆ ರೈತರು ೨೦೧೮-೧೯ನೇ ಸಾಲಿನಿಂದ ಸತತವಾಗಿ ಅತಿವೃಷ್ಟಿ, ಭೂಕುಸಿತ ಪ್ರವಾಹ ಇತ್ಯಾದಿ ಸಂಕಷ್ಟ ಗಳಿಗೆ ಒಳಗಾಗಿ ಕಂಗಲಾಗಿರುತ್ತಾರೆ. ಬೆಳೆದ ಬೆಳೆ ಕೈಗೆ ಬಾರದೆ ಸತತ ನಷ್ಟ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ರೈತ ಪಡೆದಿರುವ ರಾಷ್ಟಿçÃಕೃತ ಬ್ಯಾಂಕ್ ಸಹಕಾರಿ ಸಂಘಗಳ ಸಾಲ ಇತರೆ ಎಲ್ಲಾ ವಿಧದ ಕೃಷಿ ಸಾಲಗಳನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಲು ಮನವಿ ಮಾಡಿದರು. ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿದ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಕಾನೂನು ಸಲಹೆಗಾರ ಹಿರಿಯ ವಕೀಲರಾದ ಹೇಮಚಂದ್ರ ಹಾಜರಿದ್ದರು.