ಮಡಿಕೇರಿ, ಆ. ೨೫: ವಾಣಿಜ್ಯ ಬೆಳೆಯಾಗಿರುವ ಕಾಫಿ ಬೆಳೆಯೂ ಸರ್ಪೇಸಿ ಕಾಯ್ದೆಯಡಿಯಲ್ಲಿ ಬರುತ್ತದೆ. ಇದರಂತೆ ಬ್ಯಾಂಕಿನಿAದ ನಿವೇಶನ, ಮನೆ, ವಾಣಿಜ್ಯ ಸಂಕೀರ್ಣಗಳನ್ನು ಅಡವು ಮಾಡಿ ಸಾಲ ಪಡೆದ ಸಾಲಗಾರರು ಮತ್ತು ವ್ಯಾಪಾರ ಉದ್ದೇಶಕ್ಕೆಂದು ಕೃಷಿಯೇತರ ಸಾಲ ಪಡೆದು ವಾಯಿದೆ ಮೀರಿದ ಎನ್‌ಪಿಎ ಸಾಲಗಾರರ ಮೇಲೆ ಮಾತ್ರ ಸರ್ಪೇಸಿ ಕಾಯ್ದೆಯಡಿ ವಸೂಲಾತಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ತಾ. ೨೮ರ ‘ಶಕ್ತಿ’ಯಲ್ಲಿ ಪ್ರಕಟವಾದ ಡಿಸಿಸಿ ಟೌನ್‌ಬ್ಯಾಂಕ್‌ನ ಬಾಕಿ ವಸೂಲಾತಿಗೆ ಬಲಾತ್ಕಾರದ ಕ್ರಮ ಎಂಬ ವರದಿಗೆ ಬ್ಯಾಂಕ್ ಸ್ಪಷ್ಟೀಕರಣ ನೀಡಿದೆ. ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ಬಾಂಡ್ ಗಣಪತಿ ಅವರು ಹೇಳಿಕೆ ನೀಡಿದ್ದಾರೆ. ಸರ್ಪೇಸಿ ಕಾಯ್ದೆಯಡಿ ಕೃಷಿ ಸ್ಥಿರಾಸ್ತಿಗಳ ಮೇಲೆ ಸಾಲ ಪಡೆದ ಸಾಲಗಾರರು ಒಳಪಡದೇ ಇದ್ದು, ಜಿಲ್ಲೆಯಲ್ಲಿನ ರೈತಾಪಿ ವರ್ಗಕ್ಕೆ ಇದರಿಂದಾಗಿ ಯಾವುದೇ ತೊಂದರೆ ಆಗಿರುವುದಿಲ್ಲ. ಆದರೆ ಕಾಫಿ ಬೆಳೆಯು ವಾಣಿಜ್ಯ ಬೆಳೆಯಾಗಿರುವದರಿಂದ ಈ ಕಾಯ್ದೆಯಡಿ ಒಳಪಟ್ಟಿದ್ದು, ಬ್ಯಾಂಕಿನಿAದ ನಿವೇಶನ, ಮನೆ, ವಾಣಿಜ್ಯ ಸಂಕೀರ್ಣಗಳನ್ನು ಅಡವು ಮಾಡಿ ಸಾಲ ಪಡೆದು ವಾಯಿದೆ ಮೀರಿರುವ ಪ್ರಕರಣಗಳಲ್ಲಿ ವಸೂಲಾತಿ ಕ್ರಮ ಅನುಸರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಪೇಸಿ ಕಾಯ್ದೆ ಎಂಬದು ಇಂತಹ ಬಾಕಿ ವಸೂಲಾತಿಗೆ ಬ್ಯಾಂಕ್‌ಗಳಿಗೆ ಇರುವ ಕಾನೂನುಬದ್ದ ಅಂಶವಾಗಿದೆ. ರಾಷ್ಟಿçÃಕೃತ ಬ್ಯಾಂಕ್‌ಗಳು ಕೂಡ ಇಂತಹ ಪ್ರಕ್ರಿಯೆ ನಡೆಸುತ್ತಿವೆ. ಜಿಲ್ಲಾಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗೆ ವಸೂಲಾತಿಗಾಗಿ ಹೊರ ಗುತ್ತಿಗೆಯಡಿಯಲ್ಲಿ ಬೇರೊಂದು ಸಂಸ್ಥೆಯನ್ನು ಅವಲಂಬಿತ ವಾಗಬೇಕಾದ ಅನಿವಾರ್ಯತೆ ಇರುವುದರಿಂದ ಆಡಳಿತ ಮಂಡಳಿಯ ತೀರ್ಮಾನದ ಮೂಲಕ ಮಂಡ್ಯದ ಕೆಟಿಆರ್ ಏಜೆನ್ಸಿಯನ್ನು (ವಸೂಲಾತಿ ಸಂಸ್ಥೆ) ನಿಯೋಜಿಸಿಕೊಳ್ಳಲಾಗಿದೆ. ಕಾನೂನು ರೀತಿಯಲ್ಲೇ ನೋಟೀಸ್ ನೀಡುವುದು, ಮರು ಪಾವತಿಗೆ ಕಾಲಾವಕಾಶ ಇಂತಹ ಕ್ರಮವನ್ನೂ ಇದರಲ್ಲಿ ಅನುಸರಿಸಲಾಗುತ್ತಿದೆ. ಇದು ಹೊರತಾಗಿ ಬಲಾತ್ಕಾರ ಅಥವಾ ಬೆದರಿಕೆ ಕ್ರಮ ಅನುಸರಿಸಿದ್ದಲ್ಲಿ ಪುರಾವೆ ಸಹಿತ ಸಂಬAಧಿಸಿದವರು ಬ್ಯಾಂಕ್‌ಗೆ ದಾಖಲಾತಿ ಒದಗಿಸುವಂತೆಯೂ ಅವರು ಹೇಳಿದ್ದಾರೆ.

ಇಂತಹ ಬಾಕಿ ವಸೂಲಾತಿಗೆ ಬ್ಯಾಂಕ್‌ಗಳಿಗೆ ಇರುವ ಕಾನೂನುಬದ್ದ ಅಂಶವಾಗಿದೆ. ರಾಷ್ಟಿçÃಕೃತ ಬ್ಯಾಂಕ್‌ಗಳು ಕೂಡ ಇಂತಹ ಪ್ರಕ್ರಿಯೆ ನಡೆಸುತ್ತಿವೆ. ಜಿಲ್ಲಾಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗೆ ವಸೂಲಾತಿಗಾಗಿ ಹೊರ ಗುತ್ತಿಗೆಯಡಿಯಲ್ಲಿ ಬೇರೊಂದು ಸಂಸ್ಥೆಯನ್ನು ಅವಲಂಬಿತ ವಾಗಬೇಕಾದ ಅನಿವಾರ್ಯತೆ ಇರುವುದರಿಂದ ಆಡಳಿತ ಮಂಡಳಿಯ ತೀರ್ಮಾನದ ಮೂಲಕ ಮಂಡ್ಯದ ಕೆಟಿಆರ್ ಏಜೆನ್ಸಿಯನ್ನು (ವಸೂಲಾತಿ ಸಂಸ್ಥೆ) ನಿಯೋಜಿಸಿಕೊಳ್ಳಲಾಗಿದೆ. ಕಾನೂನು ರೀತಿಯಲ್ಲೇ ನೋಟೀಸ್ ನೀಡುವುದು, ಮರು ಪಾವತಿಗೆ ಕಾಲಾವಕಾಶ ಇಂತಹ ಕ್ರಮವನ್ನೂ ಇದರಲ್ಲಿ ಅನುಸರಿಸಲಾಗುತ್ತಿದೆ. ಇದು ಹೊರತಾಗಿ ಬಲಾತ್ಕಾರ ಅಥವಾ ಬೆದರಿಕೆ ಕ್ರಮ ಅನುಸರಿಸಿದ್ದಲ್ಲಿ ಪುರಾವೆ ಸಹಿತ ಸಂಬAಧಿಸಿದವರು ಬ್ಯಾಂಕ್‌ಗೆ ದಾಖಲಾತಿ ಒದಗಿಸುವಂತೆಯೂ ಅವರು ಹೇಳಿದ್ದಾರೆ.