ಮಡಿಕೇರಿ, ಆ. ೨೫: ಮೈಸೂರಿನಲ್ಲಿ ವಾಸವಿರುವ ಕೊಡಗಿನ ಮಾಚಂಗಡ ಲಕ್ಸ್ ಚೆÀಂಗಪ್ಪ ಹಾಗೂ ಬೊಪ್ಪಂಡ ದಿಯಾ ಭೀಮಯ್ಯ ಇತ್ತೀಚೆಗೆ ನಡೆದ ರಾಷ್ಟçಮಟ್ಟ ಹಾಗೂ ರಾಜ್ಯಮಟ್ಟದ ಬ್ಯಾಡ್‌ಮಿಂಟನ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ.

ಸಿದ್ದಾಪುರದ ಮಾಚಂಗಡ ಪ್ರಾರ್ಥನಾ ಹಾಗೂ ಮಾಚಂಗಡ ಅಯ್ಯಪ್ಪ ಅವರ ಪುತ್ರ ಲಕ್ಸ್ ಚೆಂಗಪ್ಪ ಬೆಂಗಳೂರಿನಲ್ಲಿ ನಡೆದ ಯೊನೆಕ್ಸ್ ಸನ್‌ರೈಸ್ ರ‍್ಯಾಕಿಂಗ್ ಕರ್ನಾಟಕ ರಾಜ್ಯಮಟ್ಟದ ೧೯ ವರ್ಷದ ಡಬಲ್ಸ್ ಪಂದ್ಯಾಟದಲ್ಲಿ ದ್ವಿತೀಯ ಹಾಗೂ ದಾವಣಗೆರೆಯ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ೧೭ ವರ್ಷದ ರಾಜ್ಯಮಟ್ಟದ ಡಬಲ್ಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಡಿಕೇರಿಯ ದೇಚೂರು ನಿವಾಸಿ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿಯಾದ ಬಿ. ದಿಯಾ ಭೀಮಯ್ಯ ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ. ಬ್ಯಾಡ್‌ಮಿಂಟನ್ ಅಸೋಸಿಯೇಶನ್ ಇಂಡಿಯಾದ ವತಿಯಿಂದ ಗೋವಾದ ಮನೋಹರ್ ಪರಿಕರ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟಿçÃಯ ಬ್ಯಾಡ್‌ಮಿಂಟನ್ ಪಂದ್ಯಾಟದ ಡಬಲ್ಸ್ ವಿಭಾಗದಲ್ಲಿ ಅನಿಲ್ ಅವರೊಂದಿಗೆ ಕೂಡಿ ಆಡಿ ತೃತೀಯ ಸ್ಥಾನ ಪಡೆದಿದ್ದಾರೆ.

ದಾವಣೆಗೆರೆಯ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ೧೫ ವರ್ಷದೊಳಗಿನ ಸಿಂಗಲ್ಸ್ ರ‍್ಯಾಕಿಂಗ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ಡಬಲ್ಸ್ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ದಿಯಾ ಬೆಂಗಳೂರಿನ ಗ್ರೀನ್‌ಹುಡ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಐಸಿಎಸ್‌ಇ ಶಾಲಾ ಕ್ರೀಡಾಕೂಟದಲ್ಲಿ ೧೭ ವರ್ಷದೊಳಗಿನ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬೊಪ್ಪಂಡ ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.