ಹೆಬ್ಬಾಲೆ: ಚದುರಂಗ ಸ್ಪರ್ಧೆ ಶಾಲಾ ವಿದ್ಯಾಥಿಗಳ ಬೌದ್ಧಿಕ ವಿಕಸನಕ್ಕೆ ಉತ್ತಮ ಸಾಧನವಾಗಲಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಎನ್. ಧರ್ಮಪ್ಪ ಹೇಳಿದರು. ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ಚದುರಂಗ ಆಟದ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೀರ್ಪುಗಾರರಾಗಿ ಶನಿವಾರಸಂತೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅನಂತ್ ಕಾರ್ಯನಿರ್ವಹಿಸಿದರು. ಮೂರು ವಿಭಾಗದ ಸ್ಪರ್ಧೆಯಲ್ಲಿ ೧ ರಿಂದ ೭ನೇ ತರಗತಿವರೆಗಿನ ಮಕ್ಕಳಲ್ಲಿ ಎಸ್.ಎಲ್. ವಿಶ್ವಾಸ್. ಪ್ರಥಮ, ಎಸ್.ಎಲ್. ವಿಶಾಲ್ ದ್ವಿತೀಯ, ೮ ರಿಂದ ೧೨ನೇ ತರಗತಿ ವಿಭಾಗದಲ್ಲಿ ಎಂ.ಕೆ. ಸಂದೇಶ ಪ್ರಥಮ ಹಾಗೂ ಚಿರನೂತನ ದ್ವಿತೀಯ ಹಾಗೂ ಸೀನಿಯರ್ ವಿಭಾಗದಲ್ಲಿ ಅಕ್ಷಯ ಪ್ರಥಮ ಮತ್ತು ಬಿ.ಹೆಚ್. ಭಾಗೀರಥಿ ದ್ವಿತೀಯ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರದೀಪ್, ಗೀತಾ, ಲತಾಭಾಯಿ, ಭಾಗೀರಥಿ ಬಿ.ಹೆಚ್. ಹಾಗೂ ಅಭಿವೃದ್ಧಿ ಅಧಿಕಾರಿ ಜಿ.ಆರ್. ಹೇಮಲತಾ, ಕಾರ್ಯದರ್ಶಿ ರವಿ, ಸಿಬ್ಬಂದಿಗಳು ಇದ್ದರು ಹೊಸೂರು: ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಓದುವ ಬೆಳಕು ಯೋಜನೆಯಡಿಯಲ್ಲಿ ಗ್ರಾಮ ಚದುರಂಗ ಆಡೋಣ ಯೋಜನೆಯ ಚದುರಂಗ (ಚೆಸ್) ಸ್ಪರ್ಧೆಯು ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಂದ್ಯAಡ ಶಾಂತಿ ಸೋಮಯ್ಯ ಸ್ಪರ್ಧೆ ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಡಿ. ಶ್ರೀನಿವಾಸ್ ಪ್ರಾಸ್ತಾವಿಕ ಭಾಷಣದ ಮೂಲಕ ಸ್ಪರ್ಧೆಯ ವಿವರಗಳನ್ನು ನೀಡಿದರು. ಸ್ಪರ್ಧೆಯಲ್ಲಿ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಎಂಬ ಮೂರು ವಿಭಾಗಗಳಲ್ಲಿ ವಿಜೇತರಾದವರು ಸಬ್ ಜೂನಿಯರ್ ವಿಭಾಗ - ಪ್ರಥಮ ಅನುಷ್ಕಾ, ದ್ವಿತೀಯ ಕರಣ್, ತೃತೀಯ ಸಿ.ಡಿ. ತೃಪ್ತಿ. ಜೂನಿಯರ್ ವಿಭಾಗದಲ್ಲಿ ಪ್ರಥಮ ಚೆಂಬಾAಡ ಸಿ. ಭೀಮಯ್ಯ, ದ್ವಿತೀಯ ಜಿ.ಎನ್. ಕುಶಾಲ್, ತೃತೀಯ ಕಿಶಾನ್ ಕುಮಾರ್. ಸೀನಿಯರ್ ವಿಭಾಗದಲ್ಲಿ ಪ್ರಥಮ ಬಿ.ಎಸ್. ಪ್ರಮೋದ್, ದ್ವಿತೀಯ ಬಿ.ಆರ್. ಪ್ರಣಾಮ್, ತೃತೀಯ ಕೆ.ಎಸ್. ಶಿವಪ್ರಸಾದ್.

ಪಂಚಾಯಿತಿ ಅಧ್ಯಕ್ಷೆ ಶಾಂತಿ ಸೋಮಯ್ಯ ಹಾಗೂ ಉಪಾಧ್ಯಕ್ಷ ಕೊಲ್ಲಿರ ಧನು ಪೂಣಚ್ಚ ಬಹುಮಾನ ವಿತರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಗ್ರಂಥಾಲಯ ಮೇಲ್ವಿಚಾರಕಿ ಎಂ.ಡಿ. ಕಾರುಣ್ಯ, ಸಾರ್ವಜನಿಕರು ಹಾಜರಿದ್ದರು.ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿಯ ಪ್ರಾಯೋಜಕತ್ವದ ಓದುವ ಬೆಳಕು ಯೋಜನೆಯಡಿ ಗ್ರಾಮ ಚದುರಂಗ (ಚೆಸ್) ಆಡೋಣ ಅಭಿಯಾನದ ಅರ್ಹ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಯಿತು.

ಸ್ಪರ್ಧೆಯ ಜೂನಿಯರ್ ವಿಭಾಗದ ವಿಜೇತರು: ಪ್ರಥಮ ಬಹುಮಾನ ಮುರ್ಶಿದಾ ಪಿ.ಎಂ., ದ್ವಿತೀಯ ಬಹುಮಾನ ಸುಧೀನ್ ಎಸ್., ತೃತೀಯ ಬಹುಮಾನ ತನುಷನ್ ಹೆಚ್.ಎಸ್., ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಕೆಚ್ಚೆಟ್ಟಿರ ಲಕ್ಷö್ಯ ಪೊನ್ನಕ್ಕ, ದ್ವಿತೀಯ ಬಹುಮಾನ ಮಂಜುನಾಥ ಎ., ತೃತೀಯ ಬಹುಮಾನ ಅನೂಷ ಎಸ್.ಎ., ಸೀನಿಯರ್ ವಿಭಾಗ ಪ್ರಥಮ ಬಹುಮಾನ ವಿನೀಶ್, ದ್ವಿತೀಯ ಬಹುಮಾನ ಮಿಥುನ್, ತೃತೀಯ ಬಹುಮಾನ ಬಶೀರ್ ಪಡೆದಿದ್ದಾರೆ. ವಿಜೇತರಿಗೆ ಪ್ರಶಸ್ತಿ ಪತ್ರ, ನಗದು ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಟಿ. ಮುತ್ತಪ್ಪ, ಉಪಾಧ್ಯಕ್ಷೆ ಬಿ.ಆರ್. ವಿಮಲಾಕ್ಷಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಂಥಪಾಲಕರು, ಸ್ಪರ್ಧೆಯ ತೀರ್ಪುಗಾರರಾಗಿ ಚೆಟ್ಟಳ್ಳಿ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಕುಶಾಲಪ್ಪ, ಪ್ರೌಢಶಾಲಾ ಹಿಂದಿ ಶಿಕ್ಷಕ ಮನೋಜ್ ಕಾರ್ಯನಿರ್ವಹಿಸಿದರು.ಕರಿಕೆ: ರಾಜ್ಯ ಸರ್ಕಾರದ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಪ್ರಯುಕ್ತ ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಮಟ್ಟದ ಚದುರಂಗ ಸ್ಪರ್ಧೆ ಆಯೋಜಿಸಲಾಯಿತು. ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಕ್ರೀಡಾ ಕೂಟದಲ್ಲಿ ವಯಸ್ಕರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಏರ್ಪಡಿಸಲಾಯಿತು. ಚದುರಂಗ ಸ್ಪರ್ಧೆಯನ್ನು ಗ್ರಾ.ಪಂ. ಅಧ್ಯಕ್ಷೆ ಕಲ್ಪನಾ ಜಗದೀಶ್ ಉದ್ಘಾಟಿಸಿದರು. ಈ ಸಂದರ್ಭ ಉಪಾಧ್ಯಕ್ಷ ಬಾಲಚಂದ್ರ ನಾಯರ್ ಹಾಜರಿದ್ದರು. ನಂತರ ಮಾತನಾಡಿದ ಅದ್ಯಕ್ಷರು ಕರಿಕೆ ಗ್ರಾಮ ಪಂಚಾಯಿತಿ ವತಿಯಿಂದ ಇದೀಗ ಸ್ಥಳೀಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಜೋಶಿ ಹಳೆಮನೆ, ದ್ವಿತೀಯ ಸ್ಥಾನವನ್ನು ರಿತೇಶ್ ಎಳ್ಳುಕೊಚ್ಚಿ, ರನ್ನರ್ ಅಪ್ ಆಗಿ ನಿಶ್ಚಿತ್ ಆಯ್ಕೆಯಾಗಿದ್ದಾರೆ. ನಂತರ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿವರಿಸಿದರು. ಈ ಸಂದರ್ಭ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಇನ್ನಿತರರು ಹಾಜರಿದ್ದರು. ಕ್ರೀಡಾ ಸ್ಪರ್ಧೆಗಳಲ್ಲಿ ಐವತ್ತಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.