ಮಡಿಕೇರಿ, ಆ. ೨೬: ಸಿ.ಎನ್.ಸಿ. ಆಶ್ರಯದಲ್ಲಿ ಸೆ. ೧ರ ಪೂರ್ವಾಹ್ನ ಮಡಿಕೇರಿಯ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ೨೮ನೇ ಸಾರ್ವತ್ರಿಕ ಕೈಲ್‌ಪೊಳ್ದ್ ನಮ್ಮೆ ಆಚರಣೆ ನಡೆಯಲಿದೆ ಎಂದು ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ತೋಕ್ ಮತ್ತು ಒಡಿಕತ್ತಿಗಳನ್ನು “ತೋಕ್‌ಪೂ” ನಿಂದ ಸಿಂಗರಿಸುವ ಮೂಲಕ ಕ್ಯಾಪಿಟಲ್ ವಿಲೇಜ್ “ಮಂದ್”ನಲ್ಲಿ ಸಾಂಸ್ಕೃತಿಕ ವಿಧಿ ವಿಧಾನಗಳ ಮೂಲಕ ಗೌರವಾರ್ಪಣೆ ಸಲ್ಲಿಸಿ, ಗುರು -ಕಾರೋಣರಿಗೆ ಮೀದಿ ಅರ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.