ಮಡಿಕೇರಿ, ಆ. ೨೬: ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರು ಗಳನ್ನು ಕೈಬಿಡುವ ಷಡ್ಯಂತ್ರಗಳು ನಡೆಯುತ್ತಿದೆ. ಆಧಾರ್ ಮತ್ತು ಮತದಾರರ ಚೀಟಿ ಜೋಡಣೆ ಸಂದರ್ಭ ತಾರತಮ್ಯ ತೋರ ಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನದ ಪ್ರತಿ ಬೂತ್‌ನಲ್ಲಿ ಪಕ್ಷದ ವತಿಯಿಂದ ಒಬ್ಬ ಅಲ್ಪಸಂಖ್ಯಾತ ಪ್ರತಿನಿಧಿಯನ್ನು ನೇಮಿಸಿ ಯಾವುದೇ ಮತಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಅಲ್ಪಸಂಖ್ಯಾತರು ಮತ್ತು ವಿದೇಶದಲ್ಲಿರುವ ಭಾರತೀಯ ಮತದಾರರ ಸೇರ್ಪಡೆಯ ಜವಾಬ್ದಾರಿ ನೀಡಬೇಕು. ಜಿಲ್ಲಾ ಅಲ್ಪಸಂಖ್ಯಾತ ನಾಯಕರುಗಳ ನೇತೃತ್ವದಲ್ಲಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಅವರುಗಳನ್ನು ಭೇಟಿ ಮಾಡಿ ಗಮನ ಸೆಳೆಯಬೇಕೆಂದು ಉಸ್ಮಾನ್ ಹೇಳಿದರು. ಇದೇ ಸಂದರ್ಭ ಪೊನ್ನಂಪೇಟೆಯ ಅಮೀನಾ ಅವರನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಸಯ್ಯದ್ ಬಾವಾ, ಉಪಾಧ್ಯಕ್ಷರಾದ ಷರೀಫ್ ಹಾಜಿ, ಇಸ್ಮಾಯಿಲ್ ಗುಂಡಿಗೆರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಾಪೋಕ್ಲು ಬ್ಲಾಕ್ ಅಧ್ಯಕ್ಷ, ಇಸ್ಮಾಯಿಲ್, ಉಪಾಧ್ಯಕ್ಷ ಅಬ್ದುರಹ್ಮಾನ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಅಬ್ದುರಹ್ಮಾನ್ ಬೆಮ್ಮತ್ತಿ, ಮೊಯಿದು, ಶುಕೂರ್, ವೀರಾಜಪೇಟೆ ಪ.ಪಂ ಸದಸ್ಯ ರಾಫೀ, ಮಡಿಕೇರಿ ಬ್ಲಾಕ್ ಅಧ್ಯಕ್ಷ ಬಾಷ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಫೀಕ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಶಾಯಿದ್, ಕುಶಾಲನಗರ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಜಾಕ್, ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜುಬೇರ್, ಪೊನ್ನಂಪೇಟೆ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಷೀದ್, ಮಡಿಕೇರಿ ನಗರ ಘಟಕದ ಅಧ್ಯಕ್ಷ ಕೆ.ಜಿ. ಪೀಟರ್, ವೀರಾಜಪೇಟೆ ನಗರಾಧ್ಯಕ್ಷ ರುಮಾನ್, ಕುಶಾಲನಗರ ನಗರಾಧ್ಯಕ್ಷÀ ಅಶ್ರಫ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಗ್ರಾ.ಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಹನೀಫ್, ಮುಖಂಡರುಗಳಾದÀ ಗೋಣಿಕೊಪ್ಪ ಸಮೀರ್, ಸಮದ್, ನಾಸರ್, ಸೀದಿ ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.