ಸೋಮವಾರಪೇಟೆ, ಆ. ೨೬: ಸಮೀಪದ ಹಾನಗಲ್ಲು ಗ್ರಾಮದ ಕಾಫಿ ತೋಟವೊಂದರಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾನಗಲ್ಲು ಗ್ರಾಮದ ನಾರಾಯಣ ಅವರ ಮನೆಯ ಕಾಂಪೌAಡ್ಗೆ ಒತ್ತಿಕೊಂಡAತೆ ಇರುವ ಭೀಮಯ್ಯ ಅವರಿಗೆ ಸೇರಿದ ಕಾಫಿ ತೋಟದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ. ಮಗು ಜನಿಸಿ ಒಂದರಿAದ ೨ ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, ನಾರಾಯಣ ಅವರು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇಂದು ಬೆಳಿಗ್ಗೆ ಕಾಂಪೌAಡ್ನಿAದ ೪ ಅಡಿ ಅಂತರದಲ್ಲಿ, ಕಾಫಿ ತೋಟದೊಳಗೆ ಮಗುವಿನ ಮೃತದೇಹ ಪತ್ತೆಯಾಗಿದೆ. ತಕ್ಷಣ ನಾರಾಯಣ ಅವರು ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಮಗುವಿನ ಮುಖದ ಭಾಗದಲ್ಲಿ ಕ್ರಿಮಿಕೀಟಗಳು ಕಂಡುಬAದಿವೆ. ಘಟನೆಯ ಬಗ್ಗೆ ಸೋಮವಾರಪೇಟೆ ೧೧೨ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಮುಖ್ಯಪೇದೆ ರಮೇಶ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.