ಪೊನ್ನAಪೇಟೆ, ಆ. ೨೬: ಟಿ. ಶೆಟ್ಟಿಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹುದಿಕೇರಿಯ ಜನತಾ ಪ್ರೌಢಶಾಲೆಯಲ್ಲಿ ನಡೆಯಿತು.
ಕ್ಲಸ್ಟರ್ನ ೧೮ ಪ್ರಾಥಮಿಕ ೪ ಪೌಢÀಶಾಲೆಗಳು ಭಾಗವಹಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆಯು ಚಾಂಪಿಯನ್ ಆಗಿ ಹೊರಹೊಮ್ಮಿತು.
೧ ರಿಂದ ೪, ೫ರಿಂದ ೭ ಹಾಗೂ ೮ ರಿಂದ ೧೨ನೇ ತರಗತಿ ವರೆಗೆ ಮೂರು ವಿಭಾಗಗಳಿಗೆ ಸ್ಪರ್ಧೆ ನಡೆದವು. ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಚದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ, ಕ್ಲೇ ಮಾಡ್ಲಿಂಗ್, ಭಕ್ತಿ ಗೀತೆ ಆಶುಭಾಷಣ, ಭಾಷಣ, ರಂಗೋಲಿ, ಮಿಮಿಕ್ರಿ, ಗಜಲ್, ಚರ್ಚಾ ಸ್ಪರ್ಧೆ, ಭರತನಾಟ್ಯ, ಭಾವಗೀತೆ, ಜನಪದ ಗೀತೆ, ಕ್ವಿಜ್, ಕವ್ವಾಲಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಚದ್ಮವೇಷ, ರಂಗೋಲಿ, ಕ್ಲೇ ಮಾಡಲಿಂಗ್ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಬೀಳಗಿ, ಬಿಆರ್ಸಿ ವನಜಾಕ್ಷಿ, ಇಸಿಓ ಅಯ್ಯಪ್ಪ, ಬಿಆರ್ಪಿ ಗೀತಾಂಜಲಿ, ಬಿಇಐ ಆರ್.ಟಿ. ಅಜಿತ, ಹುದಿಕೇರಿ ಗ್ರಾ.ಪಂ. ಸದಸ್ಯ ಮಿಲನ್, ಪಿಡಿಒ ವಿನೋದ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಉತ್ತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಜನತಾ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅಜ್ಜಿಕುಟ್ಟೀರ ಗಿರೀಶ್, ಆಡಳಿತ ಮಂಡಳಿಯ ಸದಸ್ಯರು, ಪೊನ್ನಂಪೇಟೆ ಕ್ಲಸ್ಟರ್ ಸಿಆರ್ಪಿ ತಿರುನೆಲ್ಲಿಮಡ ಜೀವನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ಪಾರ್ವತಿ, ಟಿ. ಶೆಟ್ಟಿಗೇರಿ ಕ್ಲಸ್ಟರ್ನ ಸಿ ಆರ್ ಪಿ ಅನಿತ ಕುಮಾರಿ ಇದ್ದರು. ಕುಟ್ಟ ಮತ್ತು ಪೊನ್ನಂಪೇಟೆ ಕ್ಲಸ್ಟರ್ನ ಶಿಕ್ಷಕರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.