ಮಡಿಕೇರಿ, ಆ.೨೫: ಖೇಲೋ ಇಂಡಿಯಾ ಯೋಜನೆಯಿಂದಾಗಿ ಭಾರತೀಯ ಕ್ರೀಡಾರಂಗ ಉತ್ತಮ ಸಾಧನೆ ಮಾಡಲು ಕಾರಣವಾಗಿದ್ದು, ಮಕ್ಕಳನ್ನು ಕ್ರೀಡಾರಂಗಕ್ಕೆ ಸೇರ್ಪಡೆ ಮಾಡಲು ಇದು ಸಕಾಲ ಎಂದು ಭಾರತೀಯ ಮಹಿಳಾ ಹಾಕಿ ತಂಡದ ವ್ಯವಸ್ಥಾಪಕಿ, ಸಹಾಯಕ ಕೋಚ್ ಆಗಿರುವ ಕೊಡಗಿನ ಅಂಕಿತಾ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ಗೀಳಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಮಕ್ಕಳು ದೇಹಕ್ಕೆ ಉತ್ತಮವಾಗಿರುವ ಕ್ರೀಡಾಲೋಕದತ್ತಲೂ ಮನಸ್ಸು ಕೇಂದ್ರೀಕರಿಸುವAತೆಯೂ ಅಂಕಿತಾ ಸಲಹೆ ಮಾಡಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಕಾಮನ್‌ವೆಲ್ತ್ನಲ್ಲಿ ಭಾರತ ವನಿತೆಯರ ಹಾಕಿ ತಂಡದ ಸಾಧನೆ ಹಿನೆÀ್ನಲೆಯಲ್ಲಿ ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ರೋಟರಿ ಸದಸ್ಯರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅಂಕಿತಾ ಸುರೇಶ್, ಖೇಲೋ ಇಂಡಿಯಾ ಯೋಜನೆ ಭಾರತೀಯ ಕ್ರೀಡಾಪಟುಗಳ ಸರ್ವಾಂಗೀಣ ಸಾಧನೆಗೆ, ಕ್ರೀಡಾಪಟುಗಳ ಪ್ರತಿಭೆ ಬೆಳಕಿಗೆ ತರಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಬಹಳ ದೊಡ್ಡ ರೀತಿಯಲ್ಲಿ ಕ್ರೀಡೆಗೆ ಭವಿಷ್ಯವಿದೆ. ಹೀಗಾಗಿ ಪ್ರತಿಯೋರ್ವ ಪೋಷಕರು ತಮ್ಮ ಮಕ್ಕಳನ್ನು ಪಠ್ಯದೊಂದಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.

ಕ್ರೀಡಾಪಟುಗಳಿಗೆ ಎಲ್ಲಾ ಉದ್ಯೋಗ ಶ್ರೇಣಿಗಳಲ್ಲಿಯೂ ಮೀಸಲಾತಿ ಸೌಲಭ್ಯವನ್ನು ಕೂಡ ಸರ್ಕಾರ ಘೋಷಿಸಿದ ಹಿನೆÀ್ನಲೆಯಲ್ಲಿ ಉದ್ಯೋಗದ ಭರವಸೆ ಕ್ರೀಡಾಪಟುಗಳಿಗೆ ದೊರಕಿದೆ. ಈ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆಯೂ ಅಂಕಿತಾ ಸಲಹೆ ನೀಡಿದರು. ಭಾರತ ವನಿತೆಯರ ಹಾಕಿ ತಂಡಕ್ಕೆ ಕರ್ನಾಟಕ ಮತ್ತು ಕೊಡಗಿನಿಂದ ಹೆಚ್ಚಿನ ಆಟಗಾರ್ತಿಯರು ಸೇರುವಂತಾಗಬೇಕು. ಎಲ್ಲಾ ರೀತಿಯ ಬೆಂಬಲ ದೊರಕುತ್ತಿರುವ ಈ ಕಾಲಘಟ್ಟದಲ್ಲಿ ಹಾಕಿ ತಂಡಕ್ಕೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಮಹಿಳಾ ಹಾಕಿ ಆಟಗಾರ್ತಿಯರು ಪರಿಶ್ರಮ ಪಡುವಂತೆಯೂ ಅಂಕಿತಾ ಮನವಿ ಮಾಡಿದರು.

ಕುಟುಂಬದ ಪ್ರೋತ್ಸಾಹ

ನನ್ನ ಅಮ್ಮನನ್ನು ನನ್ನ ಅಜ್ಜಿ ಕ್ರೀಡಾರಂಗಕ್ಕೆ ಸೇರಲು ಬಿಟ್ಟಿರಲಿಲ್ಲ. ಆದರೆ ನನ್ನ ಅಮ್ಮ ನನ್ನನ್ನು ಕ್ರೀಡಾಪಟುವನ್ನಾಗಿಸಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು. ವಿವಾಹದ ಬಳಿಕ ಪತಿ ಸುರೇಶ್, ಅತ್ತೆ ಮಾವ ಕೂಡ ನನಗೆ ಬೆಂಬಲವಾಗಿದ್ದರು. ಹೀಗಾಗಿಯೇ ನನ್ನ ಕ್ರೀಡಾಸಾಧನೆಯ ಹಾದಿ ಸುಲಭವಾಯಿತು ಎಂದು ಅಂಕಿತಾ ಸ್ಮರಿಸಿಕೊಂಡರು.

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ನೆನಪುಗಳನ್ನು ಹಂಚಿಕೊAಡ ಅಂಕಿತಾ ಸುರೇಶ್, ಭಾರತದ ಕ್ರೀಡಾಪಟುಗಳನ್ನು ವಿದೇಶದ ಕ್ರೀಡಾಪಟುಗಳು ಹೆಮ್ಮೆಯಿಂದ ನೋಡುವಂತಾಗಿದೆ. ಪ್ರತಿಯೊಂದು ಕ್ರೀಡಾವಿಭಾಗದಲ್ಲಿಯೂ ಭಾರತೀಯ ಕ್ರೀಡಾಪಟುಗಳ ಸಾಧನೆ ಉನ್ನತವಾಗಿದೆ. ಭಾರತದ ಕ್ರೀಡಾಪಟುಗಳ ಆತ್ಮಸ್ಥೆöÊರ್ಯ ಹೆಚ್ಚುತ್ತಿದೆ. ನಾವೂ ಯಾರಿಗೂ ಕಡಮೆಯಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಅಂಕಿತಾ ಸುರೇಶ್ ಅನುಭವ ಹಂಚಿಕೊAಡರು.

ಏಷ್ಯನ್ ಗೇಮ್ಸ್ಗೆ ತಯಾರಿ

ಕಾಮನ್‌ವೆಲ್ತ್ನ ಸೆಮಿಫೈನಲ್‌ನಲ್ಲಿ ಭಾರತ ವನಿತೆಯರ ತಂಡ ಅದೃಷ್ಟ ವಂಚಿತರಾದೆವು. ಹೀಗಿದ್ದರೂ ಮೂರನೇ ಸ್ಥಾನದೊಂದಿಗೆ ಕಾಮನ್‌ವೆಲ್ತ್ನಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಏಷ್ಯನ್ ಗೇಮ್ಸ್ಗೆ ತಯಾರು ಮಾಡಿಕೊಳ್ಳುತ್ತೇವೆ. ನಂತರ ವಿಶ್ವಕಪ್‌ಗೆ ತಯಾರಾಗಲಿದ್ದೇವೆ ಎಂದು ಅಂಕಿತಾ ಸುರೇಶ್ ತಿಳಿಸಿದರು.

ಹಿತ - ಮಿತ ಆಹಾರ ಸೇವಿಸಿ

ತಾನು ಸಸ್ಯಾಹಾರಿಯಾಗಿದ್ದು, ಪೌಷ್ಟಿಕಾಂಶದ ಆಹಾರಕ್ಕೆ ಆದ್ಯತೆ ನೀಡುತ್ತಿದ್ದೇನೆ. ಹೀಗಾಗಿಯೇ ದಿನಪೂರ್ತಿ ಲವಲವಿಕೆಯಿಂದಿರಲು ಸಾಧ್ಯವಾಗಿದೆ. ಮಾಂಸಾಹಾರಿಯಾದರು ಕೂಡ ಅಗತ್ಯಕ್ಕಿಂತ ಹೆಚ್ಚು ತಿನ್ನದೇ ಆಹಾರ ಸೇವನೆಯಲ್ಲಿ ಶಿಸ್ತು ಬೆಳೆಸಿಕೊಂಡದ್ದೇ ಆದಲ್ಲಿ ಖಂಡಿತಾ ಉತ್ತಮ ದೇಹದಾರ್ಢ್ಯತೆ, ಆರೋಗ್ಯ ಕಾಪಾಡಲು ಸಾಧ್ಯ ಎಂದು ಅಂಕಿತಾ ಅಭಿಪ್ರಾಯಪಟ್ಟರು. ಹಣ್ಣು, ತರಕಾರಿ ಹೆಚ್ಚು ಸೇವಿಸಬೇಕು ಎಂದು ಅವರು ಸಲಹೆ ನೀಡಿದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪಲ್ಲವಿ ಪ್ರಸಾದ್, ಶಪಾಲಿ ರೈ, ಸುರೇಶ್ ಕುಶಾಲಪ್ಪ ಹಾಜರಿದ್ದರು. ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿದರು. ಇದೇ ಸಂದರ್ಭ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆಯೋಜಿತ ಸ್ವಾತಂತ್ರ‍್ಯ ಅಮೃತಮಹೋತ್ಸವ ಸಂದರ್ಭದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.