ಮಡಿಕೇರಿ, ಆ. ೨೫: ಕೊಡವ ಜನಾಂಗ ಹಾಗೂ ಜಮ್ಮಾ ಆಧಾರದಲ್ಲಿನ ಕೋವಿ ಹಕ್ಕು ವಿನಾಯಿತಿಗೆ ಸಂಬAಧಿಸಿದAತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕೊಡಗಿನವರೇ ಆದ ನಿವೃತ್ತ ಕ್ಯಾಪ್ಟನ್ ಯಾಲದಾಳು ಕೆ. ಚೇತನ್ ಹೂಡಿರುವ ದೂರು ಅರ್ಜಿಯ ವಿಚಾರಣೆಯನ್ನು ಇದೀಗ ಸೆಪ್ಟೆಂಬರ್ ೨೯ಕ್ಕೆ ಮುಂದೂಡಲಾಗಿದೆ.
ಇAದು ಸುಪ್ರೀಂಕೋರ್ಟ್ನಲ್ಲಿ ಸುಪ್ರೀಂಕೋರ್ಟ್ನ ರಿಜಿಸ್ಟಾçರ್ ಎದುರು ಈ ಅರ್ಜಿಯ ಕುರಿತ ವಿಚಾರಣೆ ಬಂದಿದ್ದು, ಎದುರುದಾರರಿಗೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶದೊಂದಿಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೨೯ಕ್ಕೆ ನಿಗದಿಪಡಿಸಲಾಗಿದೆ.
ಈ ಬಗ್ಗೆ ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಬೆಂಗಳೂರು ಕೊಡವ ಸಮಾಜದ ಪರವಾಗಿ ವಕೀಲರಾದ ಮಲ್ಲೇಂಗಡ ಗಗನ್ ಅವರ ಸಹಕಾರದೊಂದಿಗೆ ಸುಪ್ರೀಂಕೋರ್ಟ್ನ ವಕೀಲರಾದ ಅಕ್ಷತ್ ಶ್ರೀವಾತ್ಸವ್ ಅವರು ವಾದಿಸಿದ್ದು, ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕೂರ್ಗ್ ಬೈರೇಸ್ ಎಂಬದು ಈ ಪ್ರಕರಣದ ಪ್ರಮುಖ ಅಂಶವಾಗಿದೆ. ಹಲವು ತಿಂಗಳ ಹಿಂದೆ ವೈ.ಕೆ. ಚೇತನ್ ಈ ಬಗ್ಗೆ ಇತ್ತೀಚೆಗೆ ರಾಜ್ಯ ಉಚ್ಚನ್ಯಾಯಾಲಯ ನೀಡಿರುವ ತೀರ್ಪು ಹಾಗೂ ಕೇಂದ್ರ ಸರಕಾರದ ನಿಲುವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದರಂತೆ ಸರ್ವೋಚ್ಚ ನ್ಯಾಯಾಲಯ ಹಲವು ಸಂಘ - ಸಂಸ್ಥೆ, ಸಮಾಜ ಹಾಗೂ ಕೆಲವರನ್ನು ಪ್ರತಿವಾದಿಗಳನ್ನಾಗಿ ಪರಿಗಣಿಸಿತ್ತು. ಇದೀಗ ಈ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ನ ರಿಜಿಸ್ಟಾçರ್ ಎದುರು ಇಂದು ಪರಿಶೀಲನೆಗೆ ಬಂದಿದೆ.
ಪ್ರತಿವಾದಿಗಳ ಪರವಾಗಿ ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಬೆಂಗಳೂರು ಕೊಡವ ಸಮಾಜದ ಪರವಾದ ವಕೀಲ ಅಕ್ಷತ್ ಶ್ರೀವಾತ್ಸವ್ ಅವರ ಮನವಿಯಂತೆ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಸೂಕ್ತ ಆಕ್ಷೇಪಣೆಯನ್ನು ಸಲ್ಲಿಸಲಿರುವುದಾಗಿ ವಕೀಲ ಗಗನ್ ಅವರು ಖಚಿತಪಡಿಸಿದ್ದಾರೆ. ಇದರ ನಡುವೆ ಕೆಲವು ದಿನಗಳ ಹಿಂದೆ ಫೆಡರೇಷನ್ ಆಫ್ ಗೌಡ ಸಮಾಜದ ಮೂಲಕ ಸಲ್ಲಿಸಲ್ಪಟ್ಟಿರುವ ಮನವಿಯಲ್ಲಿ ಕೂರ್ಗ್ ಬೈರೇಸ್ ಎಂಬ ವಿನಾಯಿತಿ ಕೊಡವರು ಮಾತ್ರವಲ್ಲದೆ ಇತರ ಜನಾಂಗಗಳಿಗೂ ಅನ್ವಯಿಸಬೇಕೆಂಬ ಅಂಶವನ್ನು ಪ್ರಸ್ತಾಪಿಸಿದೆ ಎನ್ನಲಾಗಿದೆ.