ಮಡಿಕೇರಿ, ಆ. ೨೬: ಮಡಿಕೇರಿ ನಗರದ ಕಾವೇರಿ ಕಾರು ಮಾಲೀಕರ ಹಾಗೂ ಚಾಲಕರ ಸಂಘದ ವಾರ್ಷಿಕ ಮಹಾಸಭೆ ನಗರದ ಹೊಟೇಲ್ ಚಾಯ್ಸ್ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ.ಕೆ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಇರ್ಷಾದ್ ಸ್ವಾಗತಿಸಿದರು. ಕಾರ್ಯದರ್ಶಿ ಕುಯ್ಯಮುಡಿ ರಾಜೇಶ್ ವರದಿ ವಾಚನ ಹಾಗೂ ಖಜಾಂಚಿಯಾದ ಕೆ.ಕೆ. ಸಂತೋಷ್ ಲೆಕ್ಕಪತ್ರ ಮಂಡಿಸಿದರು.
ನಂತರ ಸಂಘದ ೨೦೨೨-೨೩ರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎ.ಸಿ. ಲೋಕೇಶ್, ಉಪಾಧ್ಯಕ್ಷರಾಗಿ ಜಫ್ರುಲ್ಲಾ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಕುಯ್ಯಮುಡಿ, ಕಾರ್ಯದರ್ಶಿಯಾಗಿ ದಿನೇಶ್ ಬಿ.ಆರ್., ಜಂಟಿ ಕಾರ್ಯದರ್ಶಿಯಾಗಿ ಲೋಹಿತ ಟಿ.ವಿ., ಖಜಾಂಚಿಯಾಗಿ ಕೆ.ಕೆ. ಮಂಜುನಾಥ್, ಗೌರವ ಅಧ್ಯಕ್ಷರಾಗಿ ರಫೀಕ್ ಅವರುಗಳನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ನಾಗೇಶ್ ಕೆ.ಆರ್., ಖಾದರ್, ರಾಜೇಂದ್ರ ಕೆ.ಕೆ., ಸುಂದರ ಬಂಗೇರ, ಅಬ್ದುಲ್ ರೆಹಮಾನ್ ಅವರುಗಳನ್ನು ನೇಮಕ ಮಾಡಲಾಯಿತು. ಆಡಳಿತ ಮಂಡಳಿಗೆ ಹತ್ತು ಸದಸ್ಯರನ್ನು ನೇಮಕ ಮಾಡಲಾಯಿತು.