ಮಡಿಕೇರಿ, ಆ. ೨೬: ಮಡಿಕೇರಿ ಬಳಿಯ ಕೆ. ನಿಡುಗಣೆ ಗ್ರಾಮ ಪಂಚಾಯಿತಿಯ ಕೆ. ಬಾಡಗ ಗ್ರಾಮದ ಮರ್ಕರ ಡೌನ್ಸ್ ಕ್ಲಬ್ ಹತ್ತಿರದ ತೋಡಿನಲ್ಲಿ ಅಪರಿಚಿತ ಪುರುಷ ಮೃತ ದೇಹ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ದೇಹ ತೇಲುತ್ತಿದ್ದುದಾಗಿ ಸ್ಥಳೀಯ ಗ್ರಾಮಸ್ಥರಿಂದ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಮಾಹಿತಿ ದೊರೆತ ಮೇರೆಗೆ ಪಿಡಿಓ ಅವರು ಠಾಣೆಗೆ ದೂರು ನೀಡಿದ್ದಾರೆ.

ಠಾಣೆಯಲ್ಲಿ ಸಂ.೩೮/೨೦೨೨ ಕಲಂ ೧೭೪ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.

ಮೃತ ವ್ಯಕ್ತಿಯ ಪ್ರಾಯ ೬೦ ವರ್ಷ ಮೇಲ್ಪಟ್ಟಿರುತ್ತದೆ. ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಬಿಳಿಗಡ್ಡ, ಮೀಸೆ ಇದೆ. ನೀಲಿ/ ಬೂದು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದು, ವಾರಸುದಾರರು ಮಡಿಕೇರಿ ಗ್ರಾಮಾಂತರ ಠಾಣೆೆ ದೂ.ಸಂ. ೦೮೨೭೨-೨೨೮೭೭೭, ಪೊಲೀಸ್ ನಿರೀಕ್ಷಕರು ೯೪೮೦೮೦೪೯೪೬, ಕಂಟ್ರೋಲ್ ರೂಂ (೦೮೨೭೨-೨೨೦೭೨೦) ಮಡಿಕೇರಿ ಅವರನ್ನು ಸಂಪರ್ಕಿಸುವAತೆ ಕೋರಲಾಗಿದೆ.