ಮಡಿಕೇರಿ, ಆ. ೨೪: ಥೈಲ್ಯಾಂಡ್ ದೇಶದ ಫುಕೆಟ್‌ನಲ್ಲಿ ನಡೆದ ಥೈಲ್ಯಾಂಡ್ - ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಯ ಬಬ್ಬೀರ ಅಂಕಿತಾ ತಿಮ್ಮಯ್ಯ ಕಂಚಿನ ಮಡಿಕೇರಿ, ಆ. ೨೪: ಥೈಲ್ಯಾಂಡ್ ದೇಶದ ಫುಕೆಟ್‌ನಲ್ಲಿ ನಡೆದ ಥೈಲ್ಯಾಂಡ್ - ಮುಕ್ತ ವಿಶ್ವ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಜಿಲ್ಲೆಯ ಬಬ್ಬೀರ ಅಂಕಿತಾ ತಿಮ್ಮಯ್ಯ ಕಂಚಿನ ಹಂತದಲ್ಲಿ ಹಾಂಕಾAಗ್ ವಿರುದ್ಧ ೧-೪ ಅಂಕಗಳಿAದ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಕರ್ನಾಟಕದಿಂದ ೧೨ ಕರಾಟೆ ಪಟುಗಳು ಭಾಗವಹಿಸಿದ್ದು ಅಂಕಿತಾ ಸೇರಿ ಒಟ್ಟು ನಾಲ್ಕು ಕರಾಟೆ ಪಟುಗಳು ಪದಕ ಜಯಿಸಿದ್ದಾರೆ. ವಿಶ್ವ ಕರಾಟೆ ಫೆಡರೇಷನ್ ತರಬೇತುದಾರ ಕುಂದಾಪುರದ ಕೀರ್ತಿ ಜಿಕೆ ಅವರ ತರಬೇತಿಯಲ್ಲಿ ಈ ಕರಾಟೆಪಟುಗಳು ತರಬೇತಿ ಪಡೆದಿದ್ದರು. ಅಂಕಿತಾ ಮೂಲತಃ ಚೇರಂಬಾಣೆ ಗ್ರಾಮದ ಬಬ್ಬೀರ ತಿಮ್ಮಯ್ಯ ಮತ್ತು ಮಿನ್ನು ದಂಪತಿಯ ಪುತ್ರಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ.