ಗುಡ್ಡೆಹೊಸೂರು: ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ತರಗತಿಯಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇಲ್ಲಿನ ಸಮುದಾಯ ಭವನದಲ್ಲಿ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿತ್ತು. ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಸದಸ್ಯ ಕೆ.ಕೆ. ಚಿದಾನಂದ, ಕಾರ್ಯದರ್ಶಿ ಕುಮಾರಸ್ವಾಮಿ, ಪಿ.ಡಿಓ. .ಶ್ಯಾಂ ಹಾಗೂ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಗ್ರಾ.ಪಂ. ಹಾಗೂ ಸಾರ್ವಜನಿಕ ಗ್ರಂಥಾಲಯ ಸಹಭಾಗಿತ್ವದಲ್ಲಿ ಓದುವ ಬೆಳಕು ಯೋಜನೆಯಡಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದಲ್ಲಿ ನಡೆದ ಚೆಸ್ ಪಂದ್ಯಾವಳಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೂವಯ್ಯ ಉದ್ಘಾಟಿಸಿದರು.
ಹೋಬಳಿ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜುಗಳಿಂದ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಿರಿಯರ ವಿಭಾಗದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಚರಣ್, ಹಿರಿಯರ ವಿಭಾಗದಲ್ಲಿ ಪಿಯು ಕಾಲೇಜಿನ ಜಾಸ್ಮೀನ್, ಸಾರ್ವಜನಿಕ ವಿಭಾಗದಲ್ಲಿ ಕೆ.ಜೆ. ದೀಪಕ್ ವಿಜೇತರಾದರು.
ಗ್ರಾ.ಪಂ. ಸದಸ್ಯೆ ಲಾವಣ್ಯ, ಶಿಕ್ಷಕರಾದ ಮಹಮ್ಮದ್ ಫಯಾಜ್, ಸುಧೀರ್, ರಾಕೇಶ್, ಗ್ರಂಥಾಲಯ ಮೇಲ್ವಿಚಾರಕಿ ಮಮತಾ, ಇತರರು ಹಾಜರಿದ್ದರು.ಸಿದ್ದಾಪುರ: ರಾಜ್ಯ ಸರ್ಕಾರದ ಓದುವ ಬೆಳಕು ಕಾರ್ಯಕ್ರಮದ ಅಂಗವಾದ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದ ಪ್ರಯುಕ್ತ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮ ಮಟ್ಟದ ಚದುರಂಗ ಸ್ಪರ್ಧೆ ಆಯೋಜಿಸಲಾಯಿತು. ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಯಸ್ಕರು, ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯನ್ನು ನೆಲ್ಲಿಹುದಿಕೇರಿ ಗ್ರಾ.ಪಂ. ಸದಸ್ಯೆ ಪ್ರಮೀಳಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ ಮಾತನಾಡಿ, ಚದುರಂಗ ಸ್ಪರ್ಧೆಯು ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಕ್ರೀಡೆಯಾಗಿದೆ. ಸಾಮಾನ್ಯವಾಗಿ ಇನ್ನಿತರ ಕ್ರೀಡೆಗಳಿಂದ ದೈಹಿಕವಾಗಿ ಸದೃಢರಾಗಿರಬೇಕೆಂಬ ನಿಯಮವಿದೆ. ಆದರೆ ಚದುರಂಗ ಸ್ಪರ್ಧೆಯಲ್ಲಿ ಮಾನಸಿಕವಾಗಿ ಶಕ್ತನಾಗಿದ್ದರೆ ಭಾಗವಹಿಸಬಹುದು ಎಂದು ಹೇಳಿದರು.
ಪಿಡಿಓ ಅನಿಲ್ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವದ ಓದುವ ಬೆಳಕು ಕಾರ್ಯಕ್ರಮದಲ್ಲಿ ಇದೀಗ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನದಲ್ಲಿ ಗ್ರಾಮಮಟ್ಟದ ಪ್ರತಿಭಾನ್ವಿತರಿಗಾಗಿ ಚದುರಂಗ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗ್ರಾಮದ ಎಲ್ಲಾ ವಯೋಮಿತಿಯವರು ಮುಕ್ತವಾಗಿ ಪಾಲ್ಗೊಳ್ಳಬಹುದು. ಗ್ರಾಮದ ವಿದ್ಯಾರ್ಥಿಗಳು ಇನ್ನಿತರ ಬೇಡದ ಚಟುವಟಿಕೆಯಲ್ಲಿ ತೊಡಗುವ ಬದಲು ಸುಸಜ್ಜಿತ ಗ್ರಂಥಾಲಯಗಳಿಗೆ ಭೇಟಿ ನೀಡಿ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಇಲ್ಲಿ ವಿಜೇತರಾದ ಕ್ರೀಡಾಪಟುಗಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗ್ರಾಮ ಪಂಚಾಯಿತಿಯನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರುಗಳಾದ ಮುಸ್ತಫಾ, ಇಂದಿರಾ, ದಮಯಂತಿ, ಗ್ರಂಥಾಲಯ ಮೇಲ್ವಿಚಾರಕಿ ವಸಂತಿ ಇನ್ನಿತರರು ಹಾಜರಿದ್ದರು. ಕ್ರೀಡಾ ಸ್ಪರ್ಧೆಗಳಲ್ಲಿ ಐವತ್ತಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು.ಕೊಡ್ಲಿಪೇಟೆ: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಓದುವ ಬೆಳಕು ಕಾರ್ಯಕ್ರಮದಡಿ ‘ಗ್ರಾಮ ಚದುರಂಗ ಆಟ ಆಡೋಣ’ ಅಭಿಯಾನದ ಚೆಸ್ ಸ್ಪರ್ಧೆಯನ್ನು ಸಾರ್ವಜನಿಕ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು. ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಾ ಮೇದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಸ್ಯರಾದ ಹನೀಫ್ ಎಂ.ಎA, ಪಾವನ ಗಗನ್, ಕಾರ್ಯದರ್ಶಿ ಅಶ್ವತ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು. ಮೂರು ವಿಭಾಗದಲ್ಲಿ ಏರ್ಪಡಿಸಲಾಗಿದ್ದ ಪಂದ್ಯಾವಳಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಬ್ ಜೂನಿಯರ್ ವಿಭಾಗದಲ್ಲಿ ಊರುಗುತ್ತಿ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿ ನಾರಾಯಣ್, ಜೂನಿಯರ್ ವಿಭಾಗದಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಚಂದನ್ ಕೆ.ವಿ, ಸೀನಿಯರ್ ವಿಭಾಗದಲ್ಲಿ ಗ್ರಾ.ಪಂ. ಸದಸ್ಯೆ ಪಾವನ ವಿಜೇತರಾಗಿ ಬಹುಮಾನ ಪಡೆದರು. ಗ್ರಂಥಾಲಕ ಮೇಲ್ವಿಚಾರಕ ನಂದೀಶ್, ಪಂಚಾಯಿತಿ ಸಿಬ್ಬಂದಿಗಳಾದ ರಾಜೇಶ್, ಸಚಿನ್, ರಂಜಿತಾ, ಜಯರಾಜ್, ಜೀವನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.