*ಗೋಣಿಕೊಪ್ಪ, ಆ. ೨೪: ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಗೋಣಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣ ವೇದಿಕೆಯಾಯಿತು. ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಹಲವು ವಿಭಾಗದ ಕಲೆಗಳನ್ನು ಪ್ರದರ್ಶಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿದ್ಯಾರ್ಥಿಯು ಪ್ರದರ್ಶಿಸಿದ ಛದ್ಮವೇಷದಲ್ಲಿ ವಾಸುದೇವ ಶ್ರೀ ಕೃಷ್ಣನನ್ನು ತಲೆಯಲ್ಲಿ ಹೊತ್ತು ಸಾಗಿಸುವ ಕಥೆಯ ದಿನದ ಪ್ರಾಮುಖ್ಯತೆಯನ್ನು ಸಾರಿತ್ತು. ಸ್ವಾತಂತ್ರ÷್ಯ ಅಮೃತ ಮಹೋತ್ಸವದ ಸವಿ ನೆನಪಿನೊಂದಿಗೆ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಛದ್ಮವೇಷ, ದೇಶಭಕ್ತಿಯನ್ನು ಸಾರಿತು.
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಿ, ಸಂದೇಶ ಸಾರುವ ವೇಷ, ಕೊರವಂಜಿ ವೇಷ, ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಹಲವು ಚದ್ಮವೇಷಗಳು ಗಮನ ಸೆಳೆದವು. ಜೊತೆಗೆ ಒಂದರಿAದ ನಾಲ್ಕನೇ ತರಗತಿಯವರೆಗೆ ಹಾಗೂ ಐದರಿಂದ ಏಳನೇ ತರಗತಿವರೆಗೆ ಕಂಠಪಾಠ, ಧಾರ್ಮಿಕ ಪಟ್ಟಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ ಬಣ್ಣ ಹಚ್ಚುವಿಕೆ, ಅಭಿನಯ ಗೀತೆ, ಕ್ಲೆöÊ ಮೊಡಲಿಂಗ್, ಆಶುಭಾಷಣ, ಭಾಷಣ ಸ್ಪರ್ಧೆಗಳಲ್ಲಿ ಗೋಣಿಕೊಪ್ಪ ಕ್ಲಸ್ಟರ್‌ನ ೧೪ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.
ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಂತಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲಾ ಬಿಳಿಗಿ ಅವರು ಉದ್ಟಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವ ಕಾರ್ಯ ಪ್ರತಿಭಾ ಕಾರಂಜಿಯAತಹ ವೇದಿಕೆಗಳ ಮೂಲಕ ಸಾಧ್ಯವಾಗಬಲ್ಲದು. ಇದಕ್ಕೆ ಪೂರಕವಾದ ವಾತಾವರಣವನ್ನು ಶಿಕ್ಷಕರು ಕಲ್ಪಿಸಿದಾಗ ಮಕ್ಕಳು ಪ್ರತಿಭಾಶಾಲಿಗಳಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿದಾಗ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ತಮ್ಮ ಇಚ್ಛಾಶಕ್ತಿಯನ್ನು ತೋರಿಸಲು ಸಾಧ್ಯವಾಗಬಲ್ಲದು. ಈ ನಿಟ್ಟಿನಲ್ಲಿ ಶಾಲೆ ಮುಕ್ತವಾದ ವಾತಾವರಣವನ್ನು ಸೃಷ್ಠಿಸಬೇಕಾಗಿದೆ ಎಂದು ಹೇಳಿದರು.
ಗ್ರಾ.ಪಂ. ಸದಸ್ಯೆ ಕೊಣಿಯಂಡ ಬೋಜಮ್ಮ ಮಾತನಾಡಿ, ಮುಕ್ತವಾಗಿ ಕಲಿಕೆಗೆ ಸ್ಪಂದಿಸುವ ವಾತಾವರಣ, ಸರ್ಕಾರಿ ಶಾಲೆಗಳಿಂದ ಮಾತ್ರ ಸಿಗಲು ಸಾಧ್ಯ. ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಸಕ್ತಿದಾಯಕ ಕ್ಷೇತ್ರಗಳಿಗೆ ಹೊಂದಿಸಿಕೊಳ್ಳುವ ವೇದಿಕೆಗಳು ಸಿಗುವುದು ಅಪರೂಪ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಬದುಕುವ ಆತ್ಮಸ್ಥೆöÊರ್ಯವನ್ನು ಮತ್ತು ಉತ್ತಮ ಹಾದಿಯನ್ನು ಕಂಡುಕೊಳ್ಳುತ್ತಾರೆ ಎಂದರು. ಶಾಲೆ ಮುಖ್ಯೋಪಾಧ್ಯಾ ಯರು ಹಾಗೂ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಕುಮಾರ್, ತಾಲೂಕು ಅಧ್ಯಕ್ಷ ಸುರೇಂದ್ರ, ಸಂಘಟನಾ ಕಾರ್ಯದರ್ಶಿ ದೇವರಾಜ್, ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಾರ್ವತಿ, ತಾಲೂಕು ಪದಾಧಿಕಾರಿ ಅಶ್ವತ್, ಅನುದಾನಿತ ಪ್ರೌಢಶಾಲೆಯ ಶಿಕ್ಷಕ ಗಿಡ್ದಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಬಿ.ಆರ್.ಪಿ. ವಾಮನ, ಸಿ.ಆರ್.ಪಿ.ಗಳಾದ ರಾಧ, ಪುಷ್ಪ ಹಾಗೂ ಶಾಲೆಯ ಶಿಕ್ಷಕರುಗಳು ಹಾಜರಿದ್ದರು.