ಮಡಿಕೇರಿ, ಆ.೨೪: ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಲ್ಲಿ ಇತ್ತೀಚೆಗೆ ಏಲಕ್ಕಿಯ ಕ್ಷೇತ್ರೋತ್ಸವ ನಡೆಯಿತು.

ಸಕಲೇಶಪುರದ ಕಳಲೆ ಪ್ರಗತಿಪರ ರೈತರಾದ ಕೆ.ಜಿ.ರಾಮಚಂದ್ರ ಉದ್ಘಾಟಿಸಿ ಕೃಷಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡರು.

ವಿಟ್ಲ, ಸಿಪಿಸಿಆರ್‌ಐ., ನಿವೃತ್ತ ಮುಖ್ಯಸ್ಥ ಡಾ.ಕೆ.ಎಸ್.ಆನಂದ ಅವರು ಬಹುವಾರ್ಷಿಕ ಬೆಳೆಗಳಲ್ಲಿ ಸುಧಾರಿತ ತಳಿಗಳ ಆಯ್ಕೆ ಮತ್ತು ಮಿಶ್ರ ಬೆಳೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಸಕಲೇಶಪುರದ ಕಳಲೆ ಪ್ರಗತಿಪರ ರೈತರಾದ ಸುಧೀಪ್ ಅವರು ಏಲಕ್ಕಿ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡರು.

ಐಸಿಎಆರ್-ಐಐಎಸ್‌ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ಮಾತನಾಡಿ ಏಲಕ್ಕಿ ಬೆಳೆಯ ಸುಸ್ಥಿರ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನಿ ಡಾ.ಎಚ್.ಜೆ. ಅಕ್ಷಿತ ಅವರು ವೈಜ್ಞಾನಿಕ ಏಲಕ್ಕಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ರೈತರು ಕೇಂದ್ರದ ಪ್ರಾಯೋಗಿಕ ತಾಕುಗಳಿಗೆ ಭೇಟಿ ನೀಡಿದರು ಮತ್ತು ಕೇಂದ್ರದ ವಿಜ್ಞಾನಿಗಳು ರೈತರೊಂದಿಗೆ ಏಲಕ್ಕಿಯ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಹಂಚಿಕೊAಡರು. ಈ ಕಾರ್ಯಕ್ರಮದಲ್ಲಿ ಸುಮಾರು ೪೦ ಬೆಳೆಗಾರರು ಪಾಲ್ಗೊಂಡಿದ್ದರು.