ಗೋಣಿಕೊಪ್ಪಲು, ಆ. ೨೫: ಮದ್ಯ ವಹಿವಾಟಿಗೆ ಸಂಬAಧಿಸಿದAತೆ ಜಿಲ್ಲೆಯ ಸನ್ನದುದಾರರು ಅಬಕಾರಿ ವ್ಯವಸ್ಥೆಯಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಅಬಕಾರಿ ಇಲಾಖೆಗೆ ಸಂಬAಧಿಸಿದ ಎಲ್ಲಾ ಸನ್ನದುಗಳನ್ನು ಆಗಿಂದ್ದಾಗೆಯೇ ಮುಚ್ಚಿಸುತ್ತಿರುವುದರಿಂದ ಸರ್ಕಾರಕ್ಕೆ ಪ್ರತಿ ನಿತ್ಯ ಕೋಟ್ಯಾಂತರ ತೆರಿಗೆಯಲ್ಲಿ ನಷ್ಟ ಸಂಭವಿಸುತ್ತಿದೆ. ಅಲ್ಲದೆ ಸನ್ನದುದಾರರಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ವೇತನ ನೀಡಲು ಹಾಗೂ ಪರವಾನಗಿ ಶುಲ್ಕ ಕಟ್ಟಲು ಸನ್ನದುದಾರರಿಗೆ ಕಷ್ಟವಾಗುತ್ತಿದೆ ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೂಲಕ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಸನ್ನದುದಾರರ ಸಂಘದ ಅಧ್ಯಕ್ಷ ಕಾಡ್ಯಮಾಡ ಎಸ್. ಅಯ್ಯಪ್ಪ ಮುಂದಾಳತ್ವದಲ್ಲಿ ಮದ್ಯ ಮಾರಾಟಗಾರ ಸಂಘದ ನಿರ್ದೇಶಕ ಮಾಚಿಮಾಡ ಅಯ್ಯಪ್ಪ ಹಾಗೂ ಕಾಡ್ಯಮಾಡ ಸುಬ್ಬಯ್ಯ ಇತರರು ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಶಿರೆಸ್ತೇದಾರ್ ರವಿ ಮೂಲಕ ಮನವಿ ಪತ್ರ ನೀಡಿದರು.

ಸನ್ನದುದಾರರ ಲೈಸನ್ಸ್ನಲ್ಲಿ ಅ. ೨ ಗಾಂಧಿ ಜಯಂತಿ ದಿನದಂದು ಮಾತ್ರ ಸನ್ನದುಗಳನ್ನು ಮುಚ್ಚುವಂತೆ ಸ್ಪಷ್ಟಪಡಿಸಲಾಗಿದೆ. ಕೊಡಗು ಜಿಲ್ಲೆ ಹೊರತುಪಡಿಸಿ ಹೊರ ಜಿಲ್ಲೆಯಲ್ಲಿ ದಸರಾ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಸನ್ನದುಗಳನ್ನು ಮುಚ್ಚುವ ಅವಕಾಶವಿಲ್ಲ. ಇದಕ್ಕೆ ತದ್ವಿರುದ್ಧ ಎಂಬAತೆ ಕೊಡಗು ಜಿಲ್ಲೆಯಲ್ಲಿ ಮಾತ್ರ ದಸರಾ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಸನ್ನದುಗಳನ್ನು ಮುಚ್ಚುವಂತೆ ಅಧಿಕಾರಿಗಳು ನಿರ್ದೇಶನ ನೀಡುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳಿಗೆ ಸನ್ನದುದಾರರನ್ನು ಮೂಲ ಗುರಿಯಾಗಿಸುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸನ್ನದುದಾರರನ್ನು ಮುಚ್ಚಿಸುವ ಸಂದರ್ಭ ವಿಶೇಷ ಗಮನ ಹರಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.