ಮಡಿಕೇರಿ, ಆ. ೨೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಫಲಕಗಳು ಹಾಗೂ ಟಿಕೆಟ್‌ಗಳಲ್ಲಿ ಆಗಾಗ್ಗೆ ತಪ್ಪುಗಳು, ಅವಾಂತರಗಳು ಆಗುತ್ತಲೇ ಇರುತ್ತವೆ.., ಇದೀಗ ಒಂದು ಬಸ್ಸಿನ ಟಿಕೆಟ್‌ನಲ್ಲಿ ಊರಿನ ಹೆಸರನ್ನು ಅಸಂಬದ್ಧವಾಗಿ ಬಳಸಲಾಗಿದ್ದು, ಅಪಹಾಸ್ಯಕ್ಕೀಡಾಗಿದೆ..!
ಸಂಪಾಜೆ- ಕಲ್ಲಗುಂಡಿ- ಮಡಿಕೇರಿ ಮಾರ್ಗವಾಗಿ ಸಂಚರಿಸುವ ಬಸ್ಸಿನ ಟಿಕೆಟ್‌ನಲ್ಲಿ ಸಂಪಾಜೇ ಎಂದು., ಕಲ್ಲುಗುಂಡಿಗೆ ಬದಲಾಗಿ ‘ಕಲಕುಂಡಿ’ ಎಂದು ನಮೂದಿಸಲಾಗಿದೆ. ಕೊಳ್ಳೇಗಾಲ ಘಟಕಕ್ಕೆ ಸೇರಿದ ಬಸ್‌ನಲ್ಲಿ ಇಂದು ಸಂಚರಿಸಿದ ಪ್ರಯಾಣಿಕರಿಗೆ ‘ಕಲಕುಂಡಿ’ಗೆ ಟಿಕೆಟ್ ನೀಡಲಾಗಿದೆ..! ಟಿಕೆಟನ್ನು ನೋಡಿದವರೆಲ್ಲ ಅಪಹಾಸ್ಯ ಮಾಡಿಕೊಂಡು ನಗುವಂತಾಗಿದೆ..!
-ಪಿ.ಪಿ.ಸುಕುಮಾರ್